AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದೊಂದಿಗೆ ಎಫ್-35 ಫೈಟರ್ ಜೆಟ್ ಡೀಲ್​ನಿಂದ ಹಿಂದಕ್ಕೆ ಸರಿದ ಭಾರತ; ಇದು ಟ್ರಂಪ್ ಟ್ಯಾರಿಫ್​ಗೆ ಭಾರತ ಕೊಟ್ಟ ಪ್ರತ್ಯುತ್ತರವಾ?

India not buying F-35 fighter jets from US: ಭಾರತದ ಮೇಲೆ ಮುಲಾಜಿಲ್ಲದೆ ಶೇ. 25 ಟ್ಯಾರಿಫ್ ಹೇರಿದ ಅಮೆರಿಕಕ್ಕೆ ಭಾರತ ಇನ್ನೂ ಪ್ರತಿಸುಂಕ ಹಾಕಿಲ್ಲ. ಆದರೆ, ಅಮೆರಿಕ ಬಹಳ ಆಸಕ್ತಿ ಹೊಂದಿರುವ ಎಫ್-35 ಯುದ್ಧವಿಮಾನವನ್ನು ಭಾರತ ಖರೀದಿಸದಿರಲು ನಿರ್ಧರಿಸಿದೆ. ಭಾರತ ಈ ನಡೆಯು ಅಮೆರಿಕಕ್ಕೆ ಮುಜುಗರ ತರಬಹುದು. ಅಮೆರಿಕದ ಉದ್ದಟತನಕ್ಕೆ ಭಾರತ ಕೊಡಬಹುದಾದ ಪ್ರತ್ಯುತ್ತರಗಳಲ್ಲಿ ಇದೂ ಒಂದೆನಿಸಬಹುದು.

ಅಮೆರಿಕದೊಂದಿಗೆ ಎಫ್-35 ಫೈಟರ್ ಜೆಟ್ ಡೀಲ್​ನಿಂದ ಹಿಂದಕ್ಕೆ ಸರಿದ ಭಾರತ; ಇದು ಟ್ರಂಪ್ ಟ್ಯಾರಿಫ್​ಗೆ ಭಾರತ ಕೊಟ್ಟ ಪ್ರತ್ಯುತ್ತರವಾ?
ಎಫ್-35
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2025 | 11:41 AM

Share

ನವದೆಹಲಿ, ಆಗಸ್ಟ್ 1: ಅಮೆರಿಕದ ಎಫ್-35 ಯುದ್ಧ ವಿಮಾನ ಖರೀದಿಸುವ ಆಲೋಚನೆಯನ್ನು ಭಾರತ ಕೈಬಿಟ್ಟಿದೆ. ಭಾರತದ ಮೇಲೆ ಅಮೆರಿಕ ಶೇ 25ರಷ್ಟು ಆಮದು ಸುಂಕ (US tariffs) ಹೇರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಸುಂಕ ಹೇರಿಕೆಗೆ ಇದು ಪ್ರತಿಕ್ರಮ (retaliatory measure) ಅಲ್ಲ ಎನ್ನಲಾಗಿದೆ. ಭಾರತ ಇನ್ನೂ ಕೂಡ ಯಾವುದೇ ಪ್ರತಿಸುಂಕ ವಿಧಿಸುವ ಯೋಚನೆ ಮಾಡಿಲ್ಲ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಸಂಬಂಧ ಮಾತುಕತೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವವರೆಗೂ ಶೇ. 25ರ ತೆರಿಗೆಯನ್ನು ಭಾರತ ಸಹಿಸಿಕೊಳ್ಳಬೇಕಾಗಬಹುದು.

ಅಮೆರಿಕದ ಎಫ್-35 ಯುದ್ಧವಿಮಾನ ಒಪ್ಪಂದ ಕೈಬಿಟ್ಟ ಭಾರತ

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಡೊನಾಲ್ಡ್ ಟ್ರಂಪ್ ಅವರು ಎಫ್-35 ಫೈಟರ್ ಜೆಟ್ ಅನ್ನು ಭಾರತಕ್ಕೆ ಆಫರ್ ಮಾಡಿದ್ದರು. ಇದೀಗ ಶಕ್ತಿಶಾಲಿ ಫೈಟರ್ ಜೆಟ್ ಎನಿಸಿದ ಎಫ್-35 ಅನ್ನು ಖರೀದಿಸುವ ಆಸಕ್ತಿ ಇಲ್ಲ ಎಂದು ಅಮೆರಿಕಕ್ಕೆ ಭಾರತ ತಿಳಿಸಿದೆ.

ಭಾರತ ಯಾಕೆ ಎಫ್-35 ಖರೀದಿಸುತ್ತಿಲ್ಲ?

ಭಾರತವು ಜಂಟಿಯಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಆದ್ಯತೆ ನೀಡುತ್ತಿದೆ. ಎಫ್-35 ವಿಮಾನವನ್ನು ಅಮೆರಿಕದ ಲಾಕ್​ಹೀಡ್ ಮಾರ್ಟಿನ್ ಸಂಸ್ಥೆ ತಯಾರಿಸುತ್ತದೆ. ಭಾರತೀಯ ಕಂಪನಿಯೊಂದಿಗೆ ಜಂಟಿಯಾಗಿ ಈ ಯುದ್ಧವಿಮಾನ ತಯಾರಿಸಲು ಅಮೆರಿಕ ಸಿದ್ಧ ಇಲ್ಲ. ಭಾರತ ತನ್ನ ಮಿಲಿಟರಿ ಉಪಕರಣಗಳ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ. ಈ ಕಾರಣಕ್ಕೆ ಎಫ್-35 ಯುದ್ಧವಿಮಾನ ಖರೀದಿ ಪ್ರಸ್ತಾಪದಿಂದ ಭಾರತ ಹಿಂದಕ್ಕೆ ಸರಿದಿರಬಹುದು.

ಇದನ್ನೂ ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿ ಶಾಪ

ಎಫ್-35 ಐದನೇ ತಲೆಮಾರಿನ ಯುದ್ಧವಿಮಾನವಾಗಿದೆ. ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಸ್ಟೀಲ್ ಏರ್​ಕ್ರಾಫ್ಟ್ ಎಂದೆನಿಸಿದೆ. ಚೀನಾ ಮತ್ತು ರಷ್ಯಾ ಬಳಿಯೂ ಐದನೇ ತಲೆಮಾರಿನ ಫೈಟರ್ ಜೆಟ್​ಗಳಿವೆ. ಫ್ರಾನ್ಸ್​ನ ರಫೇಲ್ ಜೆಟ್ ಐದನೇ ತಲೆಮಾರಿನ ಫೈಟರ್ ಜೆಟ್ ಅಲ್ಲ. ಭಾರತ ತಾನೇ ಸ್ವಂತವಾಗಿ ಈ ಫೈಟರ್ ಜೆಟ್ ತಯಾರಿಸುವ ಪ್ರಯತ್ನದಲ್ಲಿದೆ. ಅದಕ್ಕೆ ಎಎಂಸಿಎ ಪ್ರಾಜೆಕ್ಟ್ ಆರಂಭವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ