Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಮತ್ತಷ್ಟು ಇಳಿಕೆ; 616.14 ಬಿಲಿಯನ್ ಡಾಲರ್ ತಲುಪಿದ ಫಾರೆಕ್ಸ್ ರಿಸರ್ವ್ಸ್

|

Updated on: Jan 26, 2024 | 7:02 PM

Foreign Exchange Reserves: ಜನವರಿ 19ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ನಿಧಿ 616.14 ಬಿಲಿಯನ್ ಡಾಲರ್​ಗೆ ಇಳಿದಿದೆ. ಅದರ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ, ಗೋಲ್ಡ್ ನಿಧಿ, ಎಸ್​ಡಿಆರ್ ಮತ್ತು ಐಎಂಎಫ್​ನೊಂದಿಗಿನ ರಿಸರ್ವ್ ಪ್ರಮಾಣ ಇವಿಷ್ಟೂ ಕೂಡ ಇಳಿಕೆಯಾಗಿವೆ.

Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಮತ್ತಷ್ಟು ಇಳಿಕೆ; 616.14 ಬಿಲಿಯನ್ ಡಾಲರ್ ತಲುಪಿದ ಫಾರೆಕ್ಸ್ ರಿಸರ್ವ್ಸ್
ಫಾರೆಕ್ಸ್ ರಿಸರ್ವ್ಸ್
Follow us on

ನವದೆಹಲಿ, ಜನವರಿ 26: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ (forex reserves) ಜನವರಿ 19ರಂದು ಅಂತ್ಯಗೊಂಡ ವಾರದಲ್ಲಿ 2.79 ಬಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿದೆ. ಇದರೊಂದಿಗೆ ವಿದೇಶೀ ವಿನಿಮಯ ಮೀಸಲು ನಿಧಿ 616.14 ಬಿಲಿಯನ್ ಡಾಲರ್​ಗೆ ಇಳಿದಿರುವುದು ಆರ್​ಬಿಐ ಇಂದು ಶುಕ್ರವಾರ (ಜ. 26) ಬಿಡುಗಡೆ ಮಾಡಿದ ದತ್ತಾಂಶದಿಂದ ಗೊತ್ತಾಗಿದೆ. ಕಳೆದ ವಾರ ಫಾರೆಕ್ಸ್ ಮೀಸಲು ನಿಧಿ 1.6 ಬಿಲಿಯನ್ ಡಾಲರ್​ನಷ್ಟು ಏರಿತ್ತು.

ಜನವರಿ 19ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ನಿಧಿಯ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ, ಗೋಲ್ಡ್ ನಿಧಿ, ಎಸ್​ಡಿಆರ್ ಮತ್ತು ಐಎಂಎಫ್​ನೊಂದಿಗಿನ ರಿಸರ್ವ್ ಪ್ರಮಾಣ ಇವಿಷ್ಟೂ ಕೂಡ ಇಳಿಕೆಯಾಗಿವೆ.

ಫಾರೆಕ್ಸ್​ನ ಪ್ರಮುಖ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ (FCA- Foreign Currency Asset) 2.6 ಬಿಲಿಯನ್ ಡಾಲರ್​ನಷ್ಟು ಇಳಿಕೆಯಾಗಿದೆ. ಚಿನ್ನದ ಮೀಸಲು ನಿಧಿ 34 ಮಿಲಿಯನ್​ನಷ್ಟು ತಗ್ಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 476 ಮಿಲಿಯನ್ ಡಾಲರ್ ಕಡಿಮೆ ಆಗಿದೆ. ಐಎಂಎಫ್ ರಿಸರ್ವ್ ಪ್ರಮಾಣ 18 ಮಿಲಿಯನ್ ಡಾಲರ್​ನಷ್ಟು ಕುಗ್ಗಿದೆ.

ಇದನ್ನೂ ಓದಿ: Krutrim Record: ಒಂದು ಬಿಲಿಯನ್ ಡಾಲರ್ ಮೌಲ್ಯದ ಭಾರತದ ಮೊದಲ ಎಐ ಕಂಪನಿ; ಓಲಾ ಸ್ಥಾಪಕರ ಹೊಸ ಸಾಹಸಕ್ಕೆ ಫಲಶೃತಿ

ಜನವರಿ 19ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ವಿವರ

ಒಟ್ಟು ನಿಧಿ: 616.14 ಬಿಲಿಯನ್ ಡಾಲರ್

  • ವಿದೇಶೀ ಕರೆನ್ಸಿ ಆಸ್ತಿನ (ಎಫ್​ಸಿಎ): 545.8 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 47.2 ಬಿಲಿಯನ್ ಡಾಲರ್
  • ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 18.2 ಬಿಲಿಯನ್ ಡಾಲರ್
  • ಐಎಂಎಫ್​ನೊಂದಿಗಿನ ನಿಧಿ: 4.85 ಬಿಲಿಯನ್ ಡಾಲರ್.

ಫಾರೀನ್ ಕರೆನ್ಸಿ ಅಸೆಟ್ಸ್ ಎಂಬುದು ಅಮೆರಿಕದ ಡಾಲರ್ ಅಲ್ಲದ ಕರೆನ್ಸಿಗಳ ಬೆಲೆಯ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ಭಾರತ ಹೊಂದಿರುವ ಯೂರೋ, ಪೌಂಡ್, ಯೆನ್ ಮೊದಲಾದ ಕರೆನ್ಸಿಗಳ ಮೌಲ್ಯದ ಮೊತ್ತ ಎಫ್​ಸಿಎ ಆಗಿರುತ್ತದೆ.

2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ 645 ಬಿಲಿಯನ್ ಡಾಲರ್ ಮಟ್ಟ ತಲುಪಿತ್ತು. ಅದು ಭಾರತದ ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ನಿಧಿ ಎನಿಸಿದೆ. ಅದಾದ ಬಳಿಕ ರುಪಾಯಿ ಮೌಲ್ಯ ಕುಸಿತ ನಿಯಂತ್ರಿಸಲು ಆರ್​ಬಿಐ ಫಾರೆಕ್ಸ್ ಪೇಟೆಯಲ್ಲಿ ಒಂದಷ್ಟು ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ನಿಧಿಯ ಪ್ರಮಾಣ ಕಡಿಮೆ ಆಗುತ್ತಾ ಬಂದಿತ್ತು. ಕಳೆದ ಕೆಲ ತಿಂಗಳಿಂದ ಫಾರೆಕ್ಸ್ ನಿಧಿ ತುಸು ಮೇಲೇರಿದೆ.

ಇದನ್ನೂ ಓದಿ: Sunny Leone: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ

ಸದ್ಯ ಅತಿಹೆಚ್ಚು ಫಾರೆಕ್ಸ್ ನಿಧಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ನಿಧಿ ಹೊಂದಿದೆ. ಜಪಾನ್, ಸ್ವಿಟ್ಜರ್​ಲ್ಯಾಂಡ್ ನಂತರದ ಸ್ಥಾನದಲ್ಲಿ ಭಾರತ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ