Sunny Leone: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ

ChicaLoca Restaurant In Uttar Pradesh: ಸನ್ನಿ ಲಿಯೋನೆ ಮತ್ತು ಪತಿ ಡೇನಿಯಲ್ ವೆಬೆರ್ ಅವರು ಉತ್ತರಪ್ರದೇಶದ ನೋಯ್ಡಾದಲ್ಲಿ ಚಿಕಲೋಕ ಎಂಬ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಸಿಂಗಿಂಗ್ ಬೌಲ್ಸ್ ಹಾಸ್ಪಿಟಾಲಿಟಿ ಎಂಬ ಸಂಸ್ಥೆ ಈ ವ್ಯವಹಾರದಲ್ಲಿ ಸನ್ನಿ ಜೊತೆ ಕೈಜೋಡಿಸಿದೆ. ಚಿತ್ರ ನಟರು ಕೇವಲ ಸಿನಿಮಾ, ಟಿವಿಗಳಿಗೆ ಸೀಮಿತವಾಗದೇ ಹೊಸ ವ್ಯವಹಾರಗಳನ್ನು ನಡೆಸಬೇಕು ಎಂದು ಸನ್ನಿ ಕರೆ ನೀಡಿದ್ದಾರೆ.

Sunny Leone: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ
ಸನ್ನಿ ಲಿಯೋನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2024 | 3:53 PM

ನವದೆಹಲಿ, ಜನವರಿ 26: ನಟಿಯಾಗಿದ್ದು ವಿವಿಧ ವ್ಯವಹಾರಗಳನ್ನೂ ನಿಭಾಯಿಸುವ ಸನ್ನಿ ಲಿಯೋನೆ ಇದೀಗ ಉತ್ತರಪ್ರದೇಶದಲ್ಲಿ ಹೊಸ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಸನ್ನಿ ಲಿಯೋನೆ ಮತ್ತವರ ಪತಿ ಡೇನಿಯಲ್ ವೆಬೆರ್ (Sunny Leone and Daniel Weber) ನೋಯಿಡಾದಲ್ಲಿ ಚಿಕಲೋಕ (ChicaLoca) ಎಂಬ ಹೆಸರಿನ ರೆಸ್ಟೋರೆಂಟ್ ತೆರೆದಿದ್ದಾರೆ. ಇದು ಈ ದಂಪತಿಯ ಮೊದಲ ರೆಸ್ಟೋರೆಂಟ್ ಬಿಸಿನೆಸ್ ಆಗಿದ್ದು, ಎರಡು ಮಹಡಿಯನ್ನು ಚಿಕಲೋಕಾಗೆಂದು ಬಾಡಿಗೆಗೆ ಪಡೆದಿದ್ದಾರೆ. ಇದರಲ್ಲಿ ಸನ್ನಿ ಲಿಯೋನೆ ಅವರ ಕಲರ್​ಫುಲ್ ಬದುಕಿನ ಆಸಕ್ತಿದಾಯಕ ವಿಚಾರಗಳನ್ನು ಅನಾವರಣಗೊಳಿಸುವ ಪೇಂಟಿಂಗ್ ಮತ್ತಿತರ ಕಲೆಗಳು ಒಳಗೊಂಡಿವೆ.

ಸಿಂಗಿಂಗ್ ಬೌಲ್ಸ್ ಹಾಸ್ಪಿಟಾಲಿಟಿ (Singing Bowls Hospitality) ಎಂಬ ಸಂಸ್ಥೆ ಚಿಕಲೋಕ ರೆಸ್ಟೋರೆಂಟ್ ಬಿಸಿನೆಸ್​ನಲ್ಲಿ ಸನ್ನಿ ಲಿಯೋನೆ ಜೊತೆ ಸಹಭಾಗಿಯಾಗಿದೆ. ಸನ್ನಿ ಅವರ ಅಮೋಘ ಶಕ್ತಿ ಮತ್ತು ಉಲ್ಲಸಿತ ವ್ಯಕ್ತಿತ್ವವನ್ನು ತೋರ್ಪಡಿಸುವಂತಹ ವಾತಾವರಣವನ್ನು ರೆಸ್ಟೋರೆಂಟ್​​ನಲ್ಲಿ ಒಳಗೊಳ್ಳುವುದು ಗುರಿಯಾಗಿದೆ ಎಂದು ಸಿಂಗಿಂಗ್ ಬೌಲ್ಸ್ ಹಾಸ್ಪಿಟಾಲಿಟಿಯ ನಿರ್ದೇಶಕ ಸಾಹಿಲ್ ಬವೇಜಾ ಹೇಳುತ್ತಾರೆ.

ಇದನ್ನೂ ಓದಿ: CEO Drives Cab: ಹಗಲಿನಲ್ಲಿ ಸಿಇಒ, ರಾತ್ರಿಯಲ್ಲಿ ಬೆಂಗಳೂರಿನ ಕ್ಯಾಬ್ ಡ್ರೈವರ್; ಹೀಗೂ ಇರುತ್ತಾರಾ ಒಂದು ಸಂಸ್ಥೆಯ ಮುಖ್ಯಸ್ಥರು?

ಮನರಂಜಿಸುವವರು ಫಿಲಂ, ಟಿವಿ ಶೋಗಳಿಗೆ ಸೀಮಿತವಾಗಬಾರದು ಎನ್ನುವ ಲಿಯೋನೆ

ಬಾಲಿವುಡ್​​ಗೆ ಪ್ರವೇಶ ಮಾಡುವವರೆಗೂ ನೀಲಿ ಚಿತ್ರಗಳ ಉದ್ಯಮದಲ್ಲಿದ್ದ ಸನ್ನಿ ಲಿಯೋನೆ ಇದೀಗ ಆ ಇಮೇಜ್​ನಿಂದ ಸಾಕಷ್ಟು ಹೊರಬಂದಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಜೊತೆಗೆ ವಿವಿಧ ರೀತಿಯ ಬಿಸಿನೆಸ್​ನಗಳಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ಮತ್ತು ಈ ವಿಶ್ವವನ್ನು ಆವರಿಸುವುದು ಅವರ ಬಯಕೆ.

‘ಮನರಂಜಿಸುವವರು ಕೇವಲ ಚಿತ್ರಗಳು ಹಾಗೂ ಟಿವಿ ಶೋಗಳಿಗೆ ಸೀಮಿತವಾಗಬಾರದು. ಹೊರಗೆ ಇಣುಕಿ ಹೊಸ ಕಾರ್ಯಗಳಿಗೆ ಪ್ರಯತ್ನಿಸುವ ಮೂಲಕ ನಮ್ಮ ಬ್ರ್ಯಾಂಡ್ ಅನ್ನು ಬೇರೆ ಬೇರೆ ರೀತಿಯಲ್ಲಿ ಬೆಳೆಸುವ ಅವಕಾಶ ಇದೆ’ ಎಂದು ಐಎಎನ್​ಎನ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Tariq Premji: ವಿಪ್ರೋ ಸೇರುವ ಮುನ್ನ ಬೆಂಗಳೂರಿನ ಸೇಂಟ್ ಜೋಸೆಪ್ಸ್​ನಲ್ಲಿ ಓದಿ ಬಿಪಿಒದಲ್ಲಿ ಕೆಲಸ ಮಾಡಿದ್ದ ಅಜೀಮ್ ಪ್ರೇಮ್​ಜಿ 2ನೇ ಮಗ

ಈ ವಿಶ್ವವನ್ನು ಗೆಲ್ಲಬೇಕು ಎಂದು ಹೇಳುವ ಅವರು ವಿವಿಧ ವ್ಯಾವಹಾರಿಕ ಅವಕಾಶಗಳನ್ನು ಅವಲೋಕಿಸಬೇಕು, ಹೊಸ ಐಡಿಯಾಗಳನ್ನು ಸೃಷ್ಟಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ