Tariq Premji: ವಿಪ್ರೋ ಸೇರುವ ಮುನ್ನ ಬೆಂಗಳೂರಿನ ಸೇಂಟ್ ಜೋಸೆಪ್ಸ್​ನಲ್ಲಿ ಓದಿ ಬಿಪಿಒದಲ್ಲಿ ಕೆಲಸ ಮಾಡಿದ್ದ ಅಜೀಮ್ ಪ್ರೇಮ್​ಜಿ 2ನೇ ಮಗ

Azim Premji's Lesser Known Son Tariq: ಅಜೀಮ್ ಪ್ರೇಮ್​ಜಿ ತಮ್ಮ 1 ಕೋಟಿ ಷೇರುಗಳನ್ನು ಇಬ್ಬರು ಮಕ್ಕಳಿಗೆ ಸಮಾನವಾಗಿ ಹಂಚಿದ್ದಾರೆ. ಹಿರಿಯ ಮಗ ರಿಷದ್ ಮತ್ತು ಕಿರಿಯ ಮಗ ತಾರಿಕ್ ಅವರಿಗೆ ತಲಾ 51 ಲಕ್ಷಕ್ಕೂ ಹೆಚ್ಚು ಷೇರುಗಳು ಸಿಕ್ಕಿವೆ. ಕಿರಿಯ ಮಗ ತಾರೀಖ್ ಪ್ರೇಮ್​ಜಿ ತಮ್ಮ ತಂದೆಯ ದಾನ ದತ್ತಿಗಳ ಕೈಂಕರ್ಯಗಳನ್ನು ನಿರ್ವಹಿಸುತ್ತಾರೆ.

Tariq Premji: ವಿಪ್ರೋ ಸೇರುವ ಮುನ್ನ ಬೆಂಗಳೂರಿನ ಸೇಂಟ್ ಜೋಸೆಪ್ಸ್​ನಲ್ಲಿ ಓದಿ ಬಿಪಿಒದಲ್ಲಿ ಕೆಲಸ ಮಾಡಿದ್ದ ಅಜೀಮ್ ಪ್ರೇಮ್​ಜಿ 2ನೇ ಮಗ
ಅಜೀಮ್ ಪ್ರೇಮ್​ಜಿ ಕುಟುಂಬ (ತಾಯಿಯ ಪಕ್ಕದಲ್ಲಿರುವವರು ಕಿರಿಯ ಮಗ ತಾರೀಖ್)
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 25, 2024 | 3:45 PM

ಬೆಂಗಳೂರು, ಜನವರಿ 25: ಅಜೀಮ್ ಪ್ರೇಮ್​ಜಿ ತಮ್ಮ ಪಾಲಿನ ಷೇರುಗಳಲ್ಲಿ 1 ಕೋಟಿಯಷ್ಟು ಷೇರುಗಳನ್ನು ತಮ್ಮಿಬ್ಬರು ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಿಷದ್ ಪ್ರೇಮ್​ಗೆ ಮತ್ತು ತಾರಿಖ್ ಪ್ರೇಮ್​ಜಿ (Tariq Premji) ಅವರಿಗೆ ತಲಾ 51 ಲಕ್ಷಕ್ಕೂ ಹೆಚ್ಚು ಷೇರುಗಳು ರವಾನೆಯಾಗಿವೆ. ಹಿರಿಯ ಮಗ ರಿಷದ್ ಹಶೀಮ್ ಪ್ರೇಮ್​ಜಿ ವಿಪ್ರೋದ ಛೇರ್ಮನ್ ಆಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಆದರೆ, ಕಿರಿಯ ಮಗ ತಾರಿಕ್ ಪ್ರೇಮ್​ಜಿ ಸಾರ್ವಜನಿಕವಾಗಿ ಹೆಚ್ಚು ಗುರುತಾದವರಲ್ಲ. ಸಂಕೋಚದ ಸ್ವಭಾವದವರು.

ಅಪ್ಪನ ದಾನಧರ್ಮಗಳ ಸೂತ್ರದಾರ ತಾರೀಖ್ ಪ್ರೇಮ್​ಜಿ

ಅಜೀಮ್ ಪ್ರೇಮ್​ಜಿ ಅವರು ಫಿಲಾಂತ್ರೋಫಿಗೆ ಅಥವಾ ದಾನ ದತ್ತಿಗಳಿಗೆ (philanthropist) ಹೆಚ್ಚು ಹಣ ನೀಡುತ್ತಾರೆ. ಉದಾರ ದಾನಗಳಿಗೆ ಹೆಸರುವಾಸಿ. ಭಾರತದಲ್ಲಿ ಅತಿದೊಡ್ಡ ಫಿಲಾಂತ್ರೋಫಿಸ್ಟ್​ಗಳಲ್ಲಿ ಅವರೂ ಒಬ್ಬರು. ಇವರ ದಾನ ಧರ್ಮ ಕಾರ್ಯಗಳ ಹಿಂದಿನ ರೂವಾರಿ ಅವರ ಎರಡನೇ ಮಗ ತಾರೀಖ್ ಪ್ರೇಮ್​ಜಿ ಅವರೆಯೇ. ಅಜೀಮ್ ಪ್ರೇಮ್​ಜಿ ಫೌಂಡೇಶನ್​ನಲ್ಲಿದ್ದಾರೆ ಇವರು.

ಇದನ್ನೂ ಓದಿ: Azim Premji: ಮಹಾದಾನಿ ಅಜೀಮ್ ಪ್ರೇಮ್​ಜಿ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳ ದಾನ

ತಾರಿಕ್ ಪ್ರೇಮ್​ಜಿ ವಿಪ್ರೋ ಎಂಟರ್​ಪ್ರೈಸಸ್​ನ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಗಿದ್ದಾರೆ. ಅಜೀಮ್ ಪ್ರೇಮ್​ಜಿ ಫೌಂಡೇಶನ್ ಮತ್ತು ಅಜೀಮ್ ಪ್ರೇಮ್​ಜಿ ಫಿಲಾಂತ್ರೋಪಿಕ್ ಇನಿಷಿಯೇಟಿವ್ಸ್ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿದ್ದಾರೆ.

ಅಜೀಮ್ ಪ್ರೇಮ್​ಜಿ ತಮ್ಮ ದಾನ ಕಾರ್ಯಗಳಿಗೆಂದು ಸ್ಥಾಪಿಸಿದ್ದ ಎಂಡೋಮೆಂಟ್ ಫಂಡ್ ಸಂಸ್ಥೆಗೆ ತಾರೀಕ್ ಪ್ರೇಮ್​ಜಿ ವೈಸ್ ಪ್ರೆಸಿಡೆಂಟ್ ಆಗಿದೆ. ಈ ಎಂಡೋಮೆಂಟ್ ಫಂಡ್​ನ (Azim Premji Endowment Fund) ಹೂಡಿಕೆ ಪ್ರಕ್ರಿಯೆಗಳಿಗೆ ತಾರೀಖ್ ಅವರೇ ರೂವಾರಿ.

ಇದನ್ನೂ ಓದಿ: Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?

ಬಿಪಿಒದಲ್ಲಿ ಕೆಲಸ ಮಾಡಿದ್ದ ತಾರೀಖ್

44 ವರ್ಷದ ತಾರೀಖ್ ಪ್ರೇಮ್​ಜಿ ಮುಂಬೈನಲ್ಲಿ ಶಾಲಾ ಶಿಕ್ಷಣ ಪಡೆದರಾದರೂ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲೂ ವ್ಯಾಸಂಗ ಮಾಡಿದ್ದಾರೆ. ವಿಪ್ರೋ ಸೇರುವ ಮುನ್ನ ಅವರು ಒಂದು ವರ್ಷ ಬೆಂಗಳೂರಿನ ಬಿಪಿಒವೊಂದರಲ್ಲಿ ಕೆಲಸ ಕೂಡ ಮಾಡಿದ್ದರಂತೆ. ಕೆಲ ವರದಿಗಳ ಪ್ರಕಾರ ಅಣ್ಣ ರಿಷದ್ ಪ್ರೇಮ್​ಜಿ ಮತ್ತು ತಮ್ಮ ತಾರೀಖ್ ಪ್ರೇಮ್​ಜಿ ಇಬ್ಬರ ಸ್ವಭಾವ ವಿಭಿನ್ನ. ತಾರೀಖ್ ಬಹಳ ಸಂಕೋಚದ ಸ್ವಭಾವದವರು. ಆದರೆ ಸಹೋದರರ ನಡುವಿನ ಬಾಂಧವ್ಯ ಬಹಳ ಗಾಢವಾಗಿದೆಯಂತೆ. ಒಬ್ಬರಿಗೊಬ್ಬರು ಯಾವ ವಿಚಾರದಲ್ಲೂ ಬಿಟ್ಟುಕೊಡುವುದಿಲ್ಲ. ಬಹಳ ಪ್ರೀತಿಯಿಂದ ಕೂಡಿದ ಸಂಬಂಧ ಅವರದ್ದಾಗಿದೆ ಎಂದು ಅವರ ಆತ್ಮೀಯರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು