AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CEO Drives Cab: ಹಗಲಿನಲ್ಲಿ ಸಿಇಒ, ರಾತ್ರಿಯಲ್ಲಿ ಬೆಂಗಳೂರಿನ ಕ್ಯಾಬ್ ಡ್ರೈವರ್; ಹೀಗೂ ಇರುತ್ತಾರಾ ಒಂದು ಸಂಸ್ಥೆಯ ಮುಖ್ಯಸ್ಥರು?

Ola Cabs CEO Hemant Bakshi: ಒಲಾ ಕ್ಯಾಬ್ಸ್​ನ ಸಿಇಒ ಹೇಮಂತ್ ಬಕ್ಷಿ ವಾರಾಂತ್ಯದ ದಿನಗಳಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಚಾಲಕರು ಮತ್ತು ಗ್ರಾಹಕರ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಅರಿಯಲು ಬಕ್ಷಿ ಈ ಕೆಲಸ ಮಾಡುತ್ತಾರೆ. ಕಳೆದ ವರ್ಷ ಊಬರ್​ನ ಸಿಇಒ ದಾರಾ ಅವರು ತಾನು ಕೆಲ ತಿಂಗಳು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿದ್ದ ಸಂಗತಿಯನ್ನು ಬಹಿರಂಗಪಡಿಸಿದ್ದರು.

CEO Drives Cab: ಹಗಲಿನಲ್ಲಿ ಸಿಇಒ, ರಾತ್ರಿಯಲ್ಲಿ ಬೆಂಗಳೂರಿನ ಕ್ಯಾಬ್ ಡ್ರೈವರ್; ಹೀಗೂ ಇರುತ್ತಾರಾ ಒಂದು ಸಂಸ್ಥೆಯ ಮುಖ್ಯಸ್ಥರು?
ಓಲಾ ಕ್ಯಾಬ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2024 | 2:23 PM

Share

ಹಿಂದಿನ ಕಾಲದಲ್ಲಿ ರಾಜರುಗಳು ಪ್ರಜೆಗಳ ಕಷ್ಟಕೋಟಲೆಗಳನ್ನು ಕಣ್ಣಾರೆ ತಿಳಿಯಲು ಮಾರುವೇಷದಲ್ಲಿ ನಾಡಿನೆಲ್ಲೆಡೆ ಸಂಚರಿಸುತ್ತಿದ್ದರಂತೆ. ಜನರ ಕಷ್ಟ ಸುಖಗಳನ್ನು ನೋಡಿ, ಅವರ ಅಭಿಪ್ರಾಯಗಳನ್ನು ಕೇಳಿ ವಾಪಸ್ ಅರಮನೆಗೆ ಬರುತ್ತಿದ್ದರಂತೆ. ಕಾಫಿಡೇ ಸಂಸ್ಥಾಪಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಜೀವಂತ ಇದ್ದಾಗ ಈ ರೀತಿ ತಮ್ಮದೇ ಕಾಫಿಡೇ ಶಾಪ್​ವೊಂದಕ್ಕೆ ಹೋಗಿ ಕಾಫಿ ರುಚಿ ನೋಡಿ ಬರುತ್ತಿದ್ದರಂತೆ. ಅಂಥವರ ಸಾಲಿಗೆ ಹೇಮಂತ್ ಬಕ್ಷಿ (Hemant Bakshi) ಎಂಬುವವರು ಸೇರುತ್ತಾರೆ. ಹೇಮಂತ್ ಬಕ್ಷಿ ಹಗಲಿನಲ್ಲಿ ಒಂದು ಕಂಪನಿಯ ಸಿಇಒ, ರಾತ್ರಿಯಲ್ಲಿ ಅವರದ್ದೇ ಕಂಪನಿಯಲ್ಲಿ ಕ್ಯಾಬ್ ಡ್ರೈವರ್ ಆಗಿ ಪಾತ್ರ ವಹಿಸುತ್ತಾರೆ. ಅದಕ್ಕೆ ಕಾರಣ ಅವರು ಗ್ರಾಹಕರ ಕಷ್ಟಗಳನ್ನು ಕಣ್ಣಾರೆ ಕಾಣುವ ಇರಾದೆ.

ಹೇಮಂತ್ ಬಕ್ಷಿ ಓಲಾ ಕ್ಯಾಬ್ಸ್​ನ ಸಿಇಒ. ಹೊಸದಾಗಿ ನೇಮಕವಾಗಿದ್ದಾರೆ. ಇಂಡೋನೇಷ್ಯಾದ ಯುನಿಲಿವರ್​ನಲ್ಲಿ ಈ ಮೊದಲು ಕೆಲಸ ಮಾಡಿದ್ದವರು. ಈಗ ಒಲಾ ಸಿಇಒ ಆಗಿದ್ದ ಭವೀಶ್ ಅಗರ್ವಾಲ್ ಸ್ಥಾನಕ್ಕೆ ಹೇಮಂತ್ ಬಕ್ಷಿ ಬಂದಿದ್ದಾರೆ.

ಎಫ್​ಎಂಸಿಜಿ ಕ್ಷೇತ್ರದಲ್ಲಿದ್ದ ಹೇಮಂತ್ ಬಕ್ಷಿ ಅವರಿಗೆ ವಾಹನ ಚಾಲನೆ ಸೇವಾ ಕ್ಷೇತ್ರ ಹೊಸತು. ಓಲಾ ಕ್ಯಾಬ್ಸ್ ಕೇಂದ್ರ ಕಚೇರಿ ಬೆಂಗಳೂರಿನಲ್ಲೇ ಇದೆ. ವಾರದ ದಿನಗಳಲ್ಲಿ ಸಿಇಒ ಸ್ಥಾನ ಅಲಂಕರಿಸುವ ಅವರು ವಾರಾಂತ್ಯದ ದಿನಗಳಲ್ಲಿ, ಅಂದರೆ ಶನಿವಾರ ಮತ್ತು ಭಾನುವಾರಗಳಂದು ಓಲಾ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಾರೆ. ಬೆಂಗಳೂರಿನಲ್ಲಿ ನೀವು ಇವರನ್ನು ನೋಡಿದ್ದರೂ ನೋಡಿರಬಹುದು, ನೆನಪಿಸಿಕೊಳ್ಳಿ. ಪ್ರಯಾಣಿಕರಿಗೆ ಎದುರಾಗುವ ಸಮಸ್ಯೆಗಳು, ಕ್ಯಾಬ್ ಚಾಲಕರಿಗೆ ಎದುರಾಗುವ ಸಮಸ್ಯೆಗಳನ್ನು ಇವರು ಪ್ರತ್ಯಕ್ಷವಾಗಿ ಗಮನಿಸುವ ಉದ್ದೇಶದಿಂದ ಹೀಗೆ ಖುದ್ದಾಗಿ ಕ್ಯಾಬ್ ಚಾಲನೆ ಮಾಡುತ್ತಾರೆ.

ಇದನ್ನೂ ಓದಿ: Foxconn CEO: ಫಾಕ್ಸ್​ಕಾನ್ ಸಿಇಒ ಯಂಗ್ ಲಿಯುಗೆ ಪದ್ಮಭೂಷಣ ಪ್ರಶಸ್ತಿ ಗೌರವ

ಊಬರ್ ಸಿಇಒ ಕೂಡ ಕ್ಯಾಬ್ ಡ್ರೈವರ್ ಆಗಿದ್ದರು…

ರೇಡ್ ಹೈಲಿಂಗ್ ಸರ್ವಿಸ್​ನಲ್ಲಿ ಓಲಾಗಿಂತಲೂ ಹಳೆಯದಾದ ಊಬರ್​ನ ಸಿಇಒ ಕೂಡ ಕಳೆದ ವರ್ಷ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದರು. ಅಮೆರಿಕ ಮೂಲದ ಊಬರ್​ನ ಸಿಇಒ ದಾರಾ ಖೋಸ್ರೋವ್​ಶಾಹಿ ಎಂಬುವವರು ಕೆಲ ತಿಂಗಳುಗಳ ಕಾಲ ಊಬರ್ ಕ್ಯಾಬ್ ಡ್ರೈವರ್ ಮತ್ತು ಡೆಲಿವರಿ ಏಜೆಂಟ್ ಆಗಿ ಯಾರಿಗೂ ಗೊತ್ತಾಗದ ಹಾಗೆ ಕೆಲಸ ಮಾಡಿದ್ದರಂತೆ. ಆ ಸೇವೆಯಲ್ಲಿರುವ ಡ್ರೈವರ್ಸ್ ಮತ್ತು ಡೆಲಿವರಿ ಏಜೆಂಟ್​ಗಳ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಅರಿಯಲು ಆ ಕೆಲಸ ಮಾಡಿದ್ದರು. ಆ ವಿಚಾರವನ್ನು 2023ರ ಏಪ್ರಿಲ್ ತಿಂಗಳಲ್ಲಿ ಊಬರ್ ಸಿಇಒ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ