India Post Payments Bank: ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ, 10 ಲಕ್ಷ ರೂ. ಕವರೇಜ್

|

Updated on: Oct 18, 2022 | 4:58 PM

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವಾರ್ಷಿಕ 399 ರೂ. ಹಾಗೂ 299 ರೂ.ಗಳ ವೈಯಕ್ತಿಕ ಅಪಘಾತ ವಿಮೆ ಯೋಜನೆಯನ್ನು ಪ್ರಕಟಿಸಿದ್ದು 10 ಲಕ್ಷ ರೂ. ಕವರೇಜ್ ದೊರೆಯಲಿದೆ.

India Post Payments Bank: ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ, 10 ಲಕ್ಷ ರೂ. ಕವರೇಜ್
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಅಂಚೆ ಇಲಾಖೆಯು (India Post) ಪತ್ರಗಳ ವಿತರಣೆ ಜತೆಜತೆಗೇ ಇತ್ತೀಚೆಗೆ ಹಣಕಾಸು ಸೇವೆಗಳ ಮೂಲಕವೂ ಗ್ರಾಹಕರನ್ನು ತಲುಪಲು ಯತ್ನಿಸುತ್ತಿದೆ. ಸಣ್ಣ ಉಳಿತಾಯ (Small Savings), ಆರ್​ಡಿ (RD) ಮತ್ತಿತರ ವೈಯಕ್ತಿಯ ಹಣಕಾಸು ಸೇವೆಗಳ ಮೂಲಕ ಗುರಿತಿಸಿಕೊಂಡಿರುವ ಇಲಾಖೆಯು ಇತ್ತೀಚೆಗೆ ಗ್ರಾಹಕಸ್ನೇಹಿ ಅಪಘಾತ ವಿಮೆ ಯೋಜನೆಗಳನ್ನು (Accident Policy) ಪರಿಚಯಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ವಾರ್ಷಿಕ 399 ರೂ. ಹಾಗೂ 299 ರೂ.ಗಳ ವೈಯಕ್ತಿಕ ಅಪಘಾತ ವಿಮೆ ಯೋಜನೆಯನ್ನು ಪ್ರಕಟಿಸಿದ್ದು 10 ಲಕ್ಷ ರೂ. ಕವರೇಜ್ ದೊರೆಯಲಿದೆ.

ಇದನ್ನೂ ಓದಿ: India Post Recruitment 2022 ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಹುದ್ದೆ, ಸಂಬಳ ಮತ್ತು ಅರ್ಜಿ ಸಲ್ಲಿಕೆ ಬಗ್ಗೆ ಇಲ್ಲಿದೆ ಮಾಹಿತಿ

18ರಿಂದ 65 ವರ್ಷ ವಯೋಮಾನದ ಯಾವುದೇ ವ್ಯಕ್ತಿ IPPB ವೈಯಕ್ತಿಕ ಅಪಘಾತ ವಿಮೆ ಮಾಡಿಸಿಕೊಳ್ಳಲು ಅರ್ಹರಾಗಿರುತ್ತಾರೆ. ವಾರ್ಷಿಕ 299 ರೂ. ಅಥವಾ 399 ರೂ. ಪ್ರೀಮಿಯಂನ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ಈ ಎರಡು ಪ್ರೀಮಿಯಂನ ಕವರೇಜ್ ಮೊತ್ತ ಒಂದೇ ಆಗಿದೆ. ಆದರೆ ಇತರೆ ಕೆಲವು ಸೇವೆಗಳಲ್ಲಿ ವ್ಯತ್ಯಾಸವಿದೆ. ವಿವರವನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ
ಅಂಚೆ ಚೀಟಿಯಲ್ಲಿ ರಾಜ್ಯದ ಹಿಂದೂಸ್ತಾನಿ ಗಾಯಕ ದಿ. ಸವಾಯೀ ಗಂಧರ್ವ – ಪ್ರಲ್ಹಾದ್ ಜೋಶಿ ಸಂತಸ
ಪಿಪಿಎಫ್, ಕೆವಿಪಿ, ಅಂಚೆ ಠೇವಣಿಗಳು- ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇತ್ತೀಚೆಗೆ ಬಡ್ಡಿ ದರ ಹೇಗಿದೆ? ಇಲ್ಲಿ ಪರಿಶೀಲಿಸಿ
Post Office: ನೀವು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದೀರಾ? ಹಣಕಾಸಿನ ವಹಿವಾಟಿನ ಹೊಸ ನಿಬಂಧನೆ ತಿಳಿದುಕೊಳ್ಳಿ
India Post recruitment 2022: 10ನೇ ತರಗತಿ ಪಾಸ್ ಆಗಿದ್ದೀರಾ? ಹಾಗಿದ್ರೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗ

399 ರೂ. ಪ್ರೀಮಿಯಂ ವಿಮೆ:

ಇದು ವಾರ್ಷಿಕ ವಿಮಾ ಯೋಜನೆಯಾಗಿದೆ. ಅಪಘಾತದಿಂದ ಸಾವು ಸಂಭವಿಸಿದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದಲ್ಲಿ 10 ಲಕ್ಷ ರೂ. ಕವರೇಜ್ ಈ ವಿಮೆಯಲ್ಲಿ ಸಿಗಲಿದೆ. ಶಾಶ್ವತ ಭಾಗಶಃ ಅಂಗವೈಕಲ್ಯ, ಪಾರ್ಶ್ವವಾಯು ಉಂಟಾದ ಸಂದರ್ಭದಲ್ಲಿಯೂ ಕವರೇಜ್ ದೊರೆಯಲಿದೆ. ಅಪಘಾತದ ವೈದ್ಯಕೀಯ ವೆಚ್ಚಗಳಿಗೆ ಐಪಿಡಿಗೆ (ಇನ್​ ಪೇಷೆಂಟ್ ಡಿಪಾರ್ಟ್​ಮೆಂಟ್) 60,000 ರೂ.ವರೆಗೆ ಹಾಗೂ ಒಪಿಡಿಗೆ (ಔಟ್ ಪೇಷೆಂಟ್ ಡಿಪಾರ್ಟ್​ಮೆಂಟ್) 30,000 ರೂ. ಕವರೇಜ್ ಕೂಡ ಈ ಯೋಜನೆಯಲ್ಲಿ ದೊರೆಯಲಿದೆ. ಆಸ್ಪತ್ರೆಗೆ ದಾಖಲಾದರೆ 10 ದಿನಗಳ ಅವಧಿಗೆ ದಿನಕ್ಕೆ 10,000 ರೂಪಾಯಿ ದೊರೆಯಲಿದೆ. ಮೃತರ ಇಬ್ಬರು ಮಕ್ಕಳ ಶಿಕ್ಷಣಕ್ಕೆ 1 ಲಕ್ಷ ರೂ. ಸಹಾಯಧನ ದೊರೆಯಲಿದೆ. ಕುಟುಂಬದವರ ಪ್ರಯಾಣ ವೆಚ್ಚಕ್ಕೆ 25,000 ರೂ.ವರೆಗೆ ಹಾಗೂ ಅಂತ್ಯಸಂಸ್ಕಾರಕ್ಕೆ 5,000 ರೂ. ಸಹಾಯಧನವೂ ಈ ವಿಮೆಯಲ್ಲಿ ಒಳಗೊಂಡಿದೆ.

299 ರೂ. ಪ್ರೀಮಿಯಂ ವಿಮೆ:

ಇದು ಕೂಡ ವಾರ್ಷಿಕ ವಿಮಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ಕುಟುಂಬದವರ ಪ್ರಯಾಣ ವೆಚ್ಚ ಹಾಗೂ ಅಂತ್ಯಸಂಸ್ಕಾರಕ್ಕೆ ಸಹಾಯಧನ ಒಳಗೊಂಡಿರುವುದಿಲ್ಲ. ಉಳಿದಂತೆ 399 ರೂ. ಪ್ರೀಮಿಯಂನ ಯೋಜನೆಯಲ್ಲಿರುವ ಎಲ್ಲ ಸೌಲಭ್ಯಗಳು ಈ ಯೋಜನೆಯಲ್ಲಿಯೂ ದೊರೆಯಲಿವೆ.

ಇನ್ನೂ ಹಲವಾರು ವಿಮೆ, ಜೀವ ವಿಮೆ ಯೋಜನೆಗಳು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಲಭ್ಯವಿವೆ. ಜತೆಗೆ ಅನೇಕ ಹೂಡಿಕೆ ಯೋಜನೆಗಳನ್ನೂ ಇಲಾಖೆ ಈಗಾಗಲೇ ಪರಿಚಯಿಸಿದೆ.

Published On - 11:31 am, Tue, 18 October 22