AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಪಿಎಫ್, ಕೆವಿಪಿ, ಅಂಚೆ ಠೇವಣಿಗಳು- ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇತ್ತೀಚೆಗೆ ಬಡ್ಡಿ ದರ ಹೇಗಿದೆ? ಇಲ್ಲಿ ಪರಿಶೀಲಿಸಿ

ಸಾರ್ವಜನಿಕ ಭವಿಷ್ಯ ನಿಧಿ, ಉಳಿತಾಯ ಠೇವಣಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಸೇರಿದಂತೆ ಇತರ ಯೋಜನೆಗಳ ಮೇಲಿನ ಬಡ್ಡಿ ದರಗಳು ಬದಲಾಗದೆ ಹಿಂದಿನ ದರಗಳಿಗೆ ಅನುಗುಣವಾಗಿಯೇ ಇರುತ್ತವೆ.

ಪಿಪಿಎಫ್, ಕೆವಿಪಿ, ಅಂಚೆ ಠೇವಣಿಗಳು- ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇತ್ತೀಚೆಗೆ ಬಡ್ಡಿ ದರ ಹೇಗಿದೆ? ಇಲ್ಲಿ ಪರಿಶೀಲಿಸಿ
ಪಿಪಿಎಫ್, ಕೆವಿಪಿ. ಪೋಸ್ಟ್ ಆಫೀಸ್ ಠೇವಣಿಗಳು- ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇತ್ತೀಚೆಗೆ ಬಡ್ಡಿ ದರ ಹೇಗಿದೆ?
TV9 Web
| Updated By: ಸಾಧು ಶ್ರೀನಾಥ್​|

Updated on: Oct 04, 2022 | 6:06 AM

Share

ಸಣ್ಣ ಉಳಿತಾಯ ಯೋಜನೆಗಳ ಇತ್ತೀಚಿನ ಬಡ್ಡಿ ದರಗಳು: ಎರಡು ವರ್ಷಗಳ ಕಾಲ ಬದಲಾಗದಂತೆ ಇದ್ದ ಕಿಸಾನ್ ವಿಕಾಸ್ ಪತ್ರ -ಕೆವಿಪಿ (Kisan Vikas Patra -KVP) ಮತ್ತು ಸಮಯ ಠೇವಣಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿ ದರಗಳನ್ನು ಅಕ್ಟೋಬರ್-ಡಿಸೆಂಬರ್ 2022 ಕ್ಕೆ 30 ಮೂಲಾಂಶಗಳವರೆಗೆ ಸರ್ಕಾರವು ಪರಿಷ್ಕರಿಸಿದೆ. ಇತ್ತೀಚೆಗೆ ಕೆಲವು ತಿಂಗಳುಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಹೆಚ್ಚಿಸುತ್ತಿರುವುದರಿಂದ ಈ ಕ್ರಮವು ದೇಶದಲ್ಲಿ ವಿವಿಧ ಠೇವಣಿ ಮತ್ತು ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುತ್ತಿದೆ. ಸಣ್ಣ ಉಳಿತಾಯ ಯೋಜನೆಗಳು ಮತ್ತು ಅವುಗಳ ಇತ್ತೀಚಿನ ಬಡ್ಡಿ ದರಗಳ ಬಗ್ಗೆ ಇಲ್ಲಿದೆ (Interest Rates On Small Savings Schemes):

ಸಣ್ಣ ಉಳಿತಾಯ ಯೋಜನೆಗಳು ಯಾವುವು?

ನಾಗರಿಕರನ್ನು ನಿಯಮಿತವಾಗಿ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ನಿರ್ವಹಿಸಲ್ಪಡುವ ಉಳಿತಾಯ ಸಾಧನಗಳಾಗಿವೆ. ಸಣ್ಣ ಉಳಿತಾಯ ಯೋಜನೆಗಳು ಮೂರು ವಿಭಾಗಗಳಲ್ಲಿ ಇವೆ- ಉಳಿತಾಯ ಠೇವಣಿಗಳು (savings deposits), ಸಾಮಾಜಿಕ ಭದ್ರತಾ ಯೋಜನೆಗಳು (social security schemes) ಮತ್ತು ಮಾಸಿಕ ಆದಾಯ ಯೋಜನೆ (monthly income plan)

ಉಳಿತಾಯ ಠೇವಣಿಗಳಲ್ಲಿ 1ರಿಂದ 3 ವರ್ಷದ ಸಮಯ ಠೇವಣಿಗಳು ಮತ್ತು 5 ವರ್ಷದ ಮರುಕಳಿಸುವ ಠೇವಣಿಗಳು ಸೇರಿವೆ. ಇವುಗಳಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಮತ್ತು ಕಿಸಾನ್ ವಿಕಾಸ್ ಪತ್ರದಂತಹ (Kisan Vikas Patra) ಉಳಿತಾಯ ಪ್ರಮಾಣಪತ್ರಗಳೂ ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund), ಸುಕನ್ಯಾ ಸಮೃದ್ಧಿ ಖಾತೆ (Sukanya Samriddhi Account) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme) ಸೇರಿವೆ. ಮಾಸಿಕ ಆದಾಯ ಯೋಜನೆಯು ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿರುತ್ತದೆ.

ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರವು ಬಡ್ಡಿ ದರಗಳನ್ನು ಹೆಚ್ಚಿಸಿದೆಯೇ?

ಇಲ್ಲ. ಕಿಸಾನ್ ವಿಕಾಸ್ ಪತ್ರ (ಕೆವಿಪಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಖಾತೆ ಯೋಜನೆ ಮತ್ತು ಎರಡು ಮತ್ತು ಮೂರು ವರ್ಷಗಳ ಕಾಲ ಠೇವಣಿಗಳಿಗೆ ಬಡ್ಡಿ ದರಗಳನ್ನು ಮೇಲ್ಮುಖದಲ್ಲಿ ಪರಿಷ್ಕರಿಸಲಾಗಿದೆ. ಹಣಕಾಸು ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ ದರಗಳನ್ನು 10-30 ಬೇಸಿಸ್ ಪಾಯಿಂಟ್‌ಗಳ ವ್ಯಾಪ್ತಿಯಲ್ಲಿ ಹೆಚ್ಚಿಸಲಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ, ಉಳಿತಾಯ ಠೇವಣಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಸೇರಿದಂತೆ ಇತರ ಯೋಜನೆಗಳ ಮೇಲಿನ ಬಡ್ಡಿ ದರಗಳು ಬದಲಾಗದೆ ಹಿಂದಿನ ದರಗಳಿಗೆ ಅನುಗುಣವಾಗಿಯೇ ಇರುತ್ತವೆ.

ಸಣ್ಣ ಉಳಿತಾಯ ಯೋಜನೆಗಳ ಮೇಲೆ ಇತ್ತೀಚಿನ ಬಡ್ಡಿ ದರಗಳು ಹೇಗಿವೆ?

ಅಂಚೆ ಕಛೇರಿಯ ಉಳಿತಾಯ ಠೇವಣಿಗಳು ವಾರ್ಷಿಕ 4 ಪ್ರತಿ ಶತದಷ್ಟು ಬಡ್ಡಿ ದರ ನೀಡುವುದನ್ನು ಮುಂದುವರಿಸಿವೆ. 1 ವರ್ಷದ ಅವಧಿಯ ಸಮಯ ಠೇವಣಿಗಳು 5.5 ಶೇಕಡಾ ಬಡ್ಡಿ ನೀಡುವುದನ್ನು ಮುಂದುವರಿಸಿದೆ. 2 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು 20 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಲಾಗಿದೆ. ಮತ್ತು ಈಗ ಶೇಕಡಾ 5.7 ರಷ್ಟಿದೆ.

3-ವರ್ಷದ ಅವಧಿಯಲ್ಲಿ 30 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಲಾಗಿದೆ. ಅದೀಗ 5.8 ಶೇಕಡಾ ಬಡ್ಡಿ ದರಕ್ಕೆ ನಿಂತಿದೆ. ಐದು ವರ್ಷಗಳ ಸಮಯದ ಠೇವಣಿಗಳು ವರ್ಷಕ್ಕೆ 6.7 ಪ್ರತಿಶತದಷ್ಟು ಲಾಭವನ್ನು ನೀಡುತ್ತದೆ. ಐದು ವರ್ಷಗಳ ಪುನರಾವರ್ತನೆ ಠೇವಣಿಗಳ ಮೇಲಿನ ಬಡ್ಡಿ 5.8 ಶೇಕಡಾಕ್ಕೆ ನಿಂತಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ) ಮತ್ತು ಸುಕನ್ಯಾ ಸಮೃದ್ಧಿ ಖಾತೆಯು ಅದೇ ಬಡ್ಡಿ ದರಗಳನ್ನು ಅನುಕ್ರಮವಾಗಿ ಶೇ. 6.8 ಮತ್ತು ಶೇ. 7.6 ನೀಡುವುದನ್ನು ಮುಂದುವರಿಸಿವೆ. ಪಿಪಿಎಫ್‌ನ ಬಡ್ಡಿ ದರವೂ 7.1 ಶೇಕಡಾದಲ್ಲಿ ಬದಲಾಗದೆ ಉಳಿದಿದೆ

ಸರ್ಕಾರವು ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರಗಳು ಮತ್ತು ಅವಧಿ ಎರಡನ್ನೂ ಪರಿಷ್ಕರಿಸಿದೆ. ಇದು ಈಗ 123 ತಿಂಗಳ ಮೆಚುರಿಟಿ ಅವಧಿಗೆ ಶೇಕಡಾ 7 ಅನ್ನು ನೀಡುತ್ತದೆ. ಈ ಹಿಂದೆ 124 ತಿಂಗಳ ಮೆಚುರಿಟಿ ಅವಧಿಗೆ ಶೇಕಡಾ 6.9 ದರದಲ್ಲಿ ಬಡ್ಡಿ ಪಾವತಿಸುತ್ತಿತ್ತು. ಮಾಸಿಕ ಆದಾಯ ಖಾತೆಯು ವಾರ್ಷಿಕವಾಗಿ 6.7 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ. ಈ ಹಿಂದೆ ಶೇಕಡಾ 6.6 ರಷ್ಟು ನೀಡುತ್ತಿತ್ತು ಎಂದು news18.com ವರದಿ ಮಾಡಿದೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ