ನವದೆಹಲಿ, ಜುಲೈ 23: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಜುಲೈ 14ರಂದು ಅಂತ್ಯಗೊಂಡ ವಾರದಲ್ಲಿ 12.743 ಬಿಲಿಯನ್ ಡಾಲರ್ನಷ್ಟು ಏರಿದೆ. ಇದರೊಂದಿಗೆ ಭಾರತದ ಫಾರೆಕ್ಸ್ ರಿಸರ್ವ್ಸ್ ನಿಧಿ ಮೊತ್ತ ಮತ್ತೊಮ್ಮೆ 600 ಬಿಲಿಯನ್ ಡಾಲರ್ ಗಡಿ ದಾಟಿದೆ. ಭಾರತದ ಆರ್ಥಿಕ ಚಟುವಟಿಕೆಗೆ ಅಗತ್ಯವಾಗಿರುವ ಫಾರೆಕ್ಸ್ ರಿಸರ್ವ್ಸ್ ಈಗ 609.022 ಬಿಲಿಯನ್ ಡಾಲರ್ ತಲುಪಿದೆ. ಅಂದರೆ ಸುಮಾರು 49.9 ಲಕ್ಷಕೋಟಿ ರೂಪಾಯಿಯಷ್ಟು ನಿಧಿ ಫಾರೆಕ್ಸ್ ಮೀಸಲಿನಲ್ಲಿದೆ.
ಕಳೆದ ಮೂರು ವಾರಗಳಿಂದ ಆರ್ಬಿಐ ಬಹಳ ಸಮತೋಲಿತ ನಿರ್ಧಾರಗಳನ್ನು ಕೈಗೊಂಡಿದೆ. ಒಂದೆಡೆ ರಫ್ತು ಕುಂಠಿತವಾಗಬಾರದು, ರುಪಾಯಿ ಮೌಲ್ಯವೂ ಕುಸಿಯಬಾರದು, ಈ ದೃಷ್ಟಿಯಿಂದ ಆರ್ಬಿಐ ತನ್ನ ಫಾರೆಕ್ಸ್ ನಿಧಿಗೆ ಡಾಲರ್ಗಳನ್ನು ಖರೀದಿಸಿತ್ತು. ಏಷ್ಯಾದ ಇತರ ಕೆಲ ಕರೆನ್ಸಿಗಳು ಕುಸಿದರೂ ಭಾರತದ ಕರೆನ್ಸಿ ಮೌಲ್ಯ ಬಹುತೇಕ ಸ್ಥಿರವಾಗಿದೆ ಎಂಬ ಅಭಿಪ್ರಾಯ ಇದೆ.
ಜುಲೈ 14ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ನಲ್ಲಿ 12.743 ಬಿಲಿಯನ್ ಡಾಲರ್ನಷ್ಟು ಮೀಸಲು ನಿಧಿ ಹೆಚ್ಚಳವಾಗಿದೆ. ಇತ್ತೀಚಿನ ಕೆಲ ವಾರಗಳಲ್ಲಿ ಒಂದು ವಾರದಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ ಕಂಡ ಅತಿಹೆಚ್ಚಳಗಳಲ್ಲಿ ಇದು ಒಂದು. ಫಾರೆಕ್ಸ್ ಮೀಸಲು ನಿಧಿಯಲ್ಲಿ ಇರುವ ಪ್ರಮುಖ ಅಂಶವಾದ ವಿದೆಶೀ ಕರೆನ್ಸಿ ಆಸ್ತಿ ಬರೋಬ್ಬರಿ 11.198 ಬಿಲಿಯನ್ ಡಾಲರ್ನಷ್ಟು ಏರಿದೆ. ಗೋಲ್ಡ್ ರಿಸರ್ವ್ಸ್ 1.137 ಬಿಲಿಯನ್ ಡಾಲರ್ ಹಾಗು ಎಸ್ಡಿಆರ್ (ಸ್ಪೆಷಲ್ ಡ್ರಾಯಿಂಗ್ ರೈಟ್ಸ್) 250 ಮಿಲಿಯನ್ ಡಾಲರ್ನಷ್ಟು ಏರಿವೆ ಎಂದು ಆರ್ಬಿಐ ಮಾಹಿತಿ ನೀಡಿದೆ. ಇನ್ನು ಐಎಎಂಎಫ್ನೊಂದಿಗಿನ ಭಾರತದ ಮೀಸಲು ಪ್ರಮಾಣ 158 ಮಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Car Loan: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತೀರಾ? ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರ ತಿಳಿದಿರಿ
ಅತಿಹೆಚ್ಚು ವಿದೇಶ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದು. ಈ ಪಟ್ಟಿ ಭಾರತ 4ನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್ ದೇಶಗಳು ಮೊದಲ 3 ಸ್ಥಾನದಲ್ಲಿವೆ. ಚೀನಾ ಬಳಿ 3,371 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ಮೀಸಲು ನಿಧಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ