Financial Trauma: ಹಣಕಾಸು ಸಂಕಷ್ಟಕ್ಕೆ ಸಾವಿನ ದವಡೆಗೆ ನೂಕೀತು ಹುಷಾರ್..! ಅಂಥ ಸ್ಥಿತಿಯಲ್ಲಿ ಏನು ಉಪಾಯ?

Tips To Come Out of Trauma: ಹಣಕಾಸು ಸಂಕಷ್ಟ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎಂದು ಗಾದೆ ಮಾತನ್ನು ಬದಲಿಸಿ ಹೇಳಬಹುದು. ಕಷ್ಟ ಬಂದಾಗ ಮುದುಡಿ ಹೋಗದೇ ಹೊಸ ಸಾಧ್ಯತೆಗಳನ್ನು ಅವಲೋಕಿಸುವ ಪ್ರಯತ್ನ ಮಾಡುವುದು ಸೂಕ್ತ...

Financial Trauma: ಹಣಕಾಸು ಸಂಕಷ್ಟಕ್ಕೆ ಸಾವಿನ ದವಡೆಗೆ ನೂಕೀತು ಹುಷಾರ್..! ಅಂಥ ಸ್ಥಿತಿಯಲ್ಲಿ ಏನು ಉಪಾಯ?
ಖಿನ್ನತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 23, 2023 | 12:46 PM

ಯಾರು ಏನೇ ವ್ಯಾಖ್ಯಾನಿಸಿದರೂ ಹಣ (Money) ಇವತ್ತು ಬದುಕಿಗೆ ಬಹಳ ಅಗತ್ಯ ಇರುವ ಸಾಧನ. ಅದರಲ್ಲೂ ಕುಟುಂಬ ನಿರ್ವಹಣೆಗೆ ಹಣ ಅತ್ಯವಶ್ಯ. ಹಣದ ಕೊರತೆ ಎದುರಾದರೆ ಹಣಕಾಸು ಸಂಕಷ್ಟ ಬಾಧಿಸುತ್ತದೆ. ಮಾನಸಿಕ ಚಿಂತೆ, ವ್ಯಸನ, ಖಿನ್ನತೆ ಇತ್ಯಾದಿ ಮಾನಸಿಕ ಅನಾರೋಗ್ಯ (Mental Unhealth) ಕಾಡುತ್ತದೆ. ಹಣಕಾಸು ಸಂಕಷ್ಟ ಬಹುತೇಕ ಮಂದಿಯ ಜೀವನದಲ್ಲಿ ಒಂದಿಲ್ಲ ಒಂದು ಹಂತದಲ್ಲಿ ಬಂದೇ ಇರುತ್ತದೆ. ಕೆಲವರಿಗೆ ಇದು ತಾತ್ಕಾಲಿಕ ಹಿನ್ನಡೆ ಮಾತ್ರವಾದರೆ, ಕೆಲವರಿಗೆ ಇದು ವೃತ್ತದ ರೀತಿ ನಿಲ್ಲದೇ ಸುತ್ತುತ್ತಲೇ ಇರುತ್ತದೆ. ಹಣಕಾಸು ಸಂಕಷ್ಟಕ್ಕೆ ಹೆಚ್ಚಿನ ಕಾರಣವು ಸಾಲವೇ ಇರುತ್ತದೆ. ಅಂತೆಯೇ ನಮ್ಮ ಹಿರಿಯರು ಸಾಲವನ್ನು ಶೂಲಕ್ಕೆ ಹೋಲಿಸಿದ್ದಾರೆ. ಬಹಳ ಜನರು ಹಣಕಾಸು ಸಂಕಷ್ಟದಿಂದ ಮಾನಸಿಕ ಕ್ಷೋಭೆಗೊಳಗಾಗಿ ಆತ್ಮಹತ್ಯೆ ದಾರಿ ತುಳಿದವರೂ ಇದ್ದಾರೆ.

ಹಣಕಾಸು ಬಾಧೆ ಯಾಕೆ?

  • ಸಾಲದ ಮೇಲೆ ಸಾಲಗಳು ಬೆಳೆದಾಗ
  • ಹಣ ಉಳಿಸಲು ಸಾಧ್ಯವಾಗದೇ ಹೋದಾಗ
  • ಅಂದುಕೊಂಡಷ್ಟು ಸಂಪಾದನೆ ಸಾಧ್ಯವಾಗದೇ ಹೋದಾಗ
  • ಕೆಲಸ ಕಳೆದುಕೊಂಡಾಗ
  • ಉದ್ಯೋಗನಷ್ಟವಾದಾಗ

ಇದನ್ನೂ ಓದಿOnline Gambling: ಆನ್​ಲೈನ್ ಜೂಜು: ಉದ್ಯಮಿಗೆ ಬಂದಿದ್ದು 5 ಕೋಟಿ ರೂ., ಕಳೆದುಕೊಂಡಿದ್ದು ಬರೋಬ್ಬರಿ 58 ಕೋಟಿ ರೂ.

ಹಣಕಾಸು ಬಾಧೆಯಿಂದ ಆಗುವ ಪರಿಣಾಮಗಳು

ಹಣಕಾಸು ಸಂಕಷ್ಟಕ್ಕೆ ಒಳಗಾದವರು ಬಹಳ ಬೇಗ ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ. ಅವರಲ್ಲಿ ಕೀಳರಿಮೆ ಹೆಚ್ಚಾಗಿ ಕಾಡುತ್ತದೆ. ಭಾವನಾತ್ಮಕವಾಗಿ ಬಹಳ ಸೂಕ್ಷ್ಮವಾಗುತ್ತಾರೆ.

ಎಲ್ಲರೂ ಚೆನ್ನಾಗಿದ್ದಾರೆ, ತಾನು ಮಾತ್ರ ಕಷ್ಟಕ್ಕೆ ಸಿಲುಕಿದ್ದೇನೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಈ ರೀತಿಯ ಹೋಲಿಕೆಗಳು ಹತಾಶೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಸಂಕಷ್ಟ ಜೀವನಪೂರ್ತಿ ಇರುತ್ತದೆಂದು ಭಾವಿಸಿ ಸಾವಿನತ್ತ ಹೆಜ್ಜೆ ಹಾಕುವವರಿದ್ದಾರೆ. ನಿರುದ್ಯೋಗಿಗಳಲ್ಲಿ ಮತ್ತು ಉದ್ಯೋಗ ಕಳೆದುಕೊಂಡವರಲ್ಲಿ ಇಂಥ ಸೂಕ್ಷ್ಮತೆ ಹೆಚ್ಚಿರುತ್ತದೆ.

ಹಣಕಾಸು ಸಂಕಷ್ಟ ಬಂದಾಗ ಏನು ಉಪಾಯ ಮಾಡಬೇಕು?

ವಿಪರೀತ ಹಣಕಾಸು ತೊಂದರೆ ಎರಗಿದಾಗ ಹತಾಶರಾಗದಿರುವುದು ಬಹಳ ಮುಖ್ಯ. ಹಣದ ಸಮಸ್ಯೆಗೆ ಏನು ಕಾರಣ, ಅದರಿಂದ ಹೊರಬರುವ ಮಾರ್ಗಗಳ್ಯಾವುವು ಎಂಬುದನ್ನು ಸ್ಥಿತಪ್ರಜ್ಞರಾಗಿ ಕೂತು ಅವಲೋಕಿಸಿ.

ನಿಮ್ಮ ಸಮಸ್ಯೆಯನ್ನು ಯಾರೊಂದಿಗಾದರೂ ಹೇಳಿಕೊಂಡರೆ ಹತಾಶೆಯಿಂದ ಹೊರಬಹುದು ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಅಂದರೆ ನಿಮ್ಮ ಆಪ್ತ ಸ್ನೇಹಿತರೋ, ನಂಬಿಕಸ್ಥ ಬಂಧುಗಳೋ ಯಾರೇ ಆಗಬಹುದು.

ಇದನ್ನೂ ಓದಿMoney Tips: ಹಣಕಾಸು ಸಂಕಷ್ಟವಾ? ಹಣ ನಿಲ್ಲುತ್ತಿಲ್ಲವಾ? ಈ ಐದು ಹಣಕಾಸು ತಂತ್ರಗಳನ್ನು ಮರೆಯದಿರಿ

ಹಣಕಾಸು ಕಷ್ಟಕ್ಕೆ ಒಳಗಾದವರಲ್ಲಿ ಹೆಚ್ಚಿನವರು ಯಾರೊಂದಿಗೂ ಆ ವಿಚಾರ ಹಂಚಿಕೊಳ್ಳುವುದಿಲ್ಲ. ತಮ್ಮೊಳಗೇ ಇಟ್ಟುಕೊಂಡು ಕೊರಗಿಕೊರಗಿ ಕುಸಿಯುತ್ತಿರುತ್ತಾರೆ. ಇದರಿಂದ ಮಾನಸಿಕ ಖಿನ್ನತೆ ಇತ್ಯಾದಿ ಸಮಸ್ಯೆಗಳು ವಕ್ಕರಿಸುತ್ತವೆ. ಕಷ್ಟ ಬಂದಾಗ ಮನೆಯಲ್ಲಿ ಕೂತು ಕೊರಗುವ ಬದಲು ಹೊರಗೆ ಹೋಗಿ ಹೊಸ ಹೊಸ ಜನರನ್ನು ಭೇಟಿಯಾಗಿರಿ. ನಿಮಗೆ ಹೊಸ ಸಾಧ್ಯತೆಗಳು ತೆರೆಯಬಹುದು. ನಿಮ್ಮ ಹಣಕಾಸು ಸಂಕಷ್ಟ ದೂರ ಮಾಡಬಲ್ಲ ದಾರಿಗಳು ಕಾಣಬಹುದು.

ನಿಮ್ಮ ಹಣಕಾಸು ಸಂಕಷ್ಟ ದೂರ ಮಾಡುವ ಯಾವುದೇ ಮಾರ್ಗವನ್ನೂ ಕಡೆಗಣಿಸದಿರಿ. ನಿಮ್ಮ ಬಳಿ ಚಿರಾಸ್ತಿ ಮಾರುವುದರಿಂದ ಕಷ್ಟ ದೂರವಾಗುತ್ತದೆ ಎಂದಿದ್ದರೆ ಅದನ್ನು ಖಂಡಿತ ಅವಲೋಕಿಸಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ