Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajay Banga: ಚೀನಾ ಪ್ಲಸ್ ಒನ್ ಅವಕಾಶ 10 ವರ್ಷ ಇರಲ್ಲ, ಬೇಗ ಉದ್ಯೋಗಸೃಷ್ಟಿಸಿ: ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಭಾರತಕ್ಕೆ ಸಲಹೆ

China Plus One Opportunity: ಉತ್ಪಾದನೆಗೆ ಚೀನಾ ಜೊತೆಗೆ ಬೇರೆ ಪರ್ಯಾಯ ಸ್ಥಳವನ್ನು ಅನೇಕ ಸಂಸ್ಥೆಗಳು ಅವಲೋಕಿಸುತ್ತಿವೆ. ಈ ಅವಕಾಶ ಹೆಚ್ಚು ವರ್ಷ ಇರುವುದಿಲ್ಲ. ಭಾರತ ಇದನ್ನು ಉಪಯೋಗಿಸಿ ಉದ್ಯೋಗಸೃಷ್ಟಿಸಬೇಕು ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಹೇಳಿದ್ದಾರೆ.

Ajay Banga: ಚೀನಾ ಪ್ಲಸ್ ಒನ್ ಅವಕಾಶ 10 ವರ್ಷ ಇರಲ್ಲ, ಬೇಗ ಉದ್ಯೋಗಸೃಷ್ಟಿಸಿ: ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಭಾರತಕ್ಕೆ ಸಲಹೆ
ಅಜಯ್ ಬಾಂಗ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 21, 2023 | 1:17 PM

ನವದೆಹಲಿ, ಜುಲೈ 21: ವಿಶ್ವಕ್ಕೆ ಫ್ಯಾಕ್ಟರಿ ಎನಿಸಿರುವ ಚೀನಾದಿಂದ ಬಹಳಷ್ಟು ವಿದೇಶೀ ಕಂಪನಿಗಳು ಹೊರಗೆ ಮುಖಮಾಡುತ್ತಿವೆ. ಆ್ಯಪಲ್​ನಂತಹ ಸಂಸ್ಥೆಗಳು ತಮ್ಮ ಉತ್ಪಾದನೆಯ ಒಂದಷ್ಟು ಭಾಗವನ್ನು ಚೀನಾದಿಂದ ಹೊರಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿವೆ. ಚೀನಾಗೆ ಪರ್ಯಾಯವಾಗಿರುವ ದೇಶಗಳ ಪೈಕಿ ಭಾರತ ಪ್ರಮುಖವಾಗಿದೆ. ‘ಚೀನಾ ಜೊತೆಗೆ ಇನ್ನೊಂದು’ (China Plus One) ಎನ್ನುವುದು ಹಲವು ಕಂಪನಿಗಳ ಪಾಲಿಸಿಯಾಗಿದೆ. ಭಾರತ ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಹಲವು ತಜ್ಞರು ಹೇಳುತ್ತಿದ್ದಾರೆ. ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ (World Bank President Ajay Banga) ಕೂಡ ಇದೇ ಅಭಿಪ್ರಾಯ ಪುನರುಚ್ಚರಿಸಿದ್ದಾರೆ. ಅಲ್ಲದೇ, ಭಾರತ ಈ ಅವಕಾಶವನ್ನು ಸಾಧ್ಯವಾದಷ್ಟೂ ತ್ವರಿತವಾಗಿ ಉಪಯೋಗಿಸಿಕೊಳ್ಳಬೇಕು ಎಂಬುದು ವಿಶ್ವಬ್ಯಾಂಕ್ ಮುಖ್ಯಸ್ಥರ ಸಲಹೆ.

ಚೀನಾ ಪ್ಲಸ್ ಒನ್ ಅವಕಾಶವನ್ನು ಭಾರತ ಬಳಸಿಕೊಂಡು ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನಲ್ಲಿ ಉದ್ಯೋಗಸೃಷ್ಟಿಸುವತ್ತ ಗಮನ ಕೊಡಬೇಕು. ಈ ಅವಕಾಶಕ್ಕೆ ಹೆಚ್ಚಿನ ಕಾಲಾವಕಾಶ ಇಲ್ಲ. 10 ವರ್ಷ ಕಾಲ ಈ ಅವಕಾಶ ಇರುವುದಿಲ್ಲ ಎಂದೂ ಅಜಯ್ ಬಾಂಗ ಎಚ್ಚರಿಸಿದ್ದಾರೆ.

ಇದನ್ನೂ ಓದಿForex Jump: ಭಾರತದ ಫಾರೆಕ್ಸ್ ರಿಸರ್ವ್ಸ್ 2023ರಲ್ಲಿ ಅತಿಹೆಚ್ಚಳ; ಅಮೆರಿಕಕ್ಕಿಂತ ಎರಡು ಪಟ್ಟು ಹೆಚ್ಚು

ಚೀನಾ ಪ್ಲಸ್ ಒನ್​ನಿಂದ ಸಿಗುವ ಅವಕಾಶ 3ರಿಂದ 5 ವರ್ಷದ್ದಾಗಿರುತ್ತದೆ. ಈ ವೇಳೆಗೆ ಚೀನಾದಿಂದ ಬೇರೆ ಸ್ಥಳಕ್ಕೆ ಸರಬರಾಜು ಸರಪಳಿಗಳು ಹರಡುತ್ತಾ ಹೋಗುತ್ತವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ತಿಳಿಸಿದ್ದಾರೆ. ಭಾರತ ಈ ಅವಕಾಶ ಬಳಸಿಕೊಳ್ಳಲು ಮ್ಯಾನುಫ್ಯಾಕ್ಚರಿಂಗ್ ಮತ್ತು ಟೆಕ್ನಾಲಜಿ ಕ್ಷೇತ್ರದಲ್ಲಿ ಉನ್ನತ ಕೌಶಲ್ಯವಿರುವ 1-2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯತೆ ಇದೆ ಎಂದೂ ಅವರು ಸಲಹೆ ನೀಡಿದ್ದಾರೆ.

ಭಾರತದ ಆರ್ಥಿಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಜಯ್ ಬಾಂಗ, ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿದ್ದರೂ ಭಾರತದ ಜಿಡಿಪಿ ಗಮನಾರ್ಹವಾಗಿ ವೃದ್ಧಿಸಿದೆ. ಇದಕ್ಕೆ ಆಂತರಿಕ ಅನುಭೋಗವೇ ಸಹಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿIndian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

ಭಾರತ ಈ ಬೆಳವಣಿಗೆಯ ವೇಗವನ್ನು ಕಾಪಾಡಿಕೊಳ್ಳಬೇಕಾದರೆ ಹೆಚ್ಚೆಚ್ಚು ಉದ್ಯೋಗಸೃಷ್ಟಿಯಾಗಬೇಕು. ಹೆಚ್ಚಿನ ಉದ್ಯೋಗಸೃಷ್ಟಿ ಅವಕಾಶ ಇರುವುದು ತಯಾರಿಕಾ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ. ಇದು ಆದಷ್ಟೂ ಬೇಗ ಆಗಬೇಕು. ಚೀನಾ ಪ್ಲಸ್ ಒನ್ ಅವಕಾಶ ಬಳಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ಇಲ್ಲ ಎಂದೂ ಅಜಯ್ ಬಾಂಗ ಹೇಳಿದ್ದಾರೆ.

63 ವರ್ಷದ ಅಜಯ್ ಬಾಂಗ ಅವರು ವಿಶ್ವಬ್ಯಾಂಕ್ ಅಧ್ಯಕ್ಷರಾಗಿರುವ ಮೊದಲ ಭಾರತೀಯ ವ್ಯಕ್ತಿ. ಜಾಗತಿಕ ಹಣಕಾಸು ಸಂಸ್ಥೆಗಳಾದ ವಿಶ್ವಬ್ಯಾಂಕ್ ಆಗಲೀ ಐಎಂಎಫ್​ನಲ್ಲಾಗಲೀ ಬಿಳಿಯೇತರ ವ್ಯಕ್ತಿಯೊಬ್ಬನಿಗೆ ಚುಕ್ಕಾಣಿ ಸಿಕ್ಕಿದ್ದೂ ಇದೇ ಮೊದಲು. ಆ ಮಟ್ಟಿಗೆ ಅಜಯ್ ಬಾಂಗ ಬಹಳ ಪ್ರಾಮುಖ್ಯತೆ ಗಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ