AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Employees: ಬ್ಯಾಂಕ್ ಉದ್ಯೋಗಿಗಳಿಗೆ 2 ವೀಕಾಫ್, ವೇತನ ಹೆಚ್ಚಳ, ನಿವೃತ್ತರಿಗೆ ಇನ್ಷೂರೆನ್ಸ್ ಬೇಡಿಕೆ; ಜುಲೈ 28ರಂದು ತೀರ್ಮಾನ?

5-day Work Week For Bank Employees: ವಾರಕ್ಕೆ 5 ದಿನ ಕೆಲಸ ನಿಗದಿ ಮಾಡಿ, ವೇತನ ಹೆಚ್ಚಿಸಿ, ನಿವೃತ್ತರಿಗೆ ಗ್ರೂಪ್ ಇನ್ಷೂರೆನ್ಸ್ ಸೌಲಭ್ಯ ಕೊಡಿ ಎಂಬಿತ್ಯಾದಿ ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗಳ ಬಗ್ಗೆ ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಶನ್ ಜುಲೈ 28ರಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Bank Employees: ಬ್ಯಾಂಕ್ ಉದ್ಯೋಗಿಗಳಿಗೆ 2 ವೀಕಾಫ್, ವೇತನ ಹೆಚ್ಚಳ, ನಿವೃತ್ತರಿಗೆ ಇನ್ಷೂರೆನ್ಸ್ ಬೇಡಿಕೆ; ಜುಲೈ 28ರಂದು ತೀರ್ಮಾನ?
ಬ್ಯಾಂಕ್ ಉದ್ಯೋಗಿಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 21, 2023 | 3:46 PM

ನವದೆಹಲಿ, ಜುಲೈ 21: ಬ್ಯಾಂಕ್ ಉದ್ಯೋಗಿಗಳ ಬಹುನಿರೀಕ್ಷಿತ ಬೇಡಿಕೆಯಾದ ವಾರಕ್ಕೆ ಎರಡು ದಿನ ರಜೆ ಸೌಲಭ್ಯ (2 Weekly Holidays) ಈಡೇರುವ ಕಾಲ ಸಮೀಪಿಸಿದೆ. ವಾರಕ್ಕೆ ಐದು ದಿನ ಕೆಲಸ, 2 ವೀಕಾಫ್ ಸೌಲಭ್ಯ ಮತ್ತಿತರ ಕೆಲ ವಿಚಾರಗಳ ಬಗ್ಗೆ ಭಾರತೀಯ ಬ್ಯಾಂಕಿಂಗ್ ಸಂಸ್ಥೆ (IBA- Indian Banking Association) ಜುಲೈ 28ರಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್ ಯೂನಿಯನ್​ಗಳು ಮತ್ತು ಐಬಿಎ ಮಧ್ಯೆ ಜುಲೈ 28ರಂದು ಸಭೆ ನಡೆಯಲಿದೆ. ಈ ವೇಳೆ ವಾರಕ್ಕೆ ಐದು ದಿನ ಕೆಲಸ, ಸಂಬಳ ಹೆಚ್ಚಳ, ನಿವೃತ್ತರಿಗೆ ಗ್ರೂಪ್ ಇನ್ಷೂರೆನ್ಸ್ ಮೊದಲಾದ ಸಂಗತಿಗಳನ್ನು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (UFBU) ಸಂಘಟನೆ ಬ್ಯಾಂಕ್ ಕಾರ್ಯದಿನಗಳ ವಿಚಾರದ ಬಗ್ಗೆ ಈ ಹಿಂದೆ ಐಬಿಎ ಮಾತುಕತೆ ನಡೆಸಿದ್ದಾಗಿ ಮೊನ್ನೆ (ಜುಲೈ 19) ಹೇಳಿತ್ತು. ಬ್ಯಾಂಕ್​ನ ವಾರದ ಕಾರ್ಯದಿನಗಳನ್ನು ಐದಕ್ಕೆ ಇಳಿಸುವ ವಿಚಾರವನ್ನು ಪರಿಗಣಿಸಿ, ಸಂಬಂಧಿತರೊಂದಿಗೆ ಮಾತನಾಡುತ್ತಿರುವುದಾಗಿ ಐಬಿಎ ತನಗೆ ತಿಳಿಸಿದ್ದಾಗಿ ಬ್ಯಾಂಕುಗಳ ವೇದಿಕೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿSBI FD Scheme: ಎಸ್​ಬಿಐ ವೀ ಕೇರ್, ಹಣ ಡಬಲ್ ಮಾಡಬಲ್ಲ ಸರ್ಕಾರಿ ಬ್ಯಾಂಕ್ ಎಫ್​ಡಿ ಸ್ಕೀಮ್

ಸದ್ಯ, ಬ್ಯಾಂಕುಗಳಿಗೆ ವಾರಕ್ಕೊಮ್ಮೆ ರಜೆ ಇದೆ. ತಿಂಗಳಿಗೆ ಎರಡು ಶನಿವಾರಗಳೂ ರಜೆ ಇವೆ. ಅಲ್ಲಿಗೆ ಒಂದು ತಿಂಗಳಲ್ಲಿ ಬ್ಯಾಂಕುಗಳಿಗೆ ವಾರದ ರಜೆಗಳ ಸಂಖ್ಯೆ 6ರಿಂದ 7 ಆಗುತ್ತದೆ. ಈಗ ವಾರಕ್ಕೆ ಎರಡು ಆಫ್ ಸಿಕ್ಕರೆ ಗ್ಯಾರಂಟಿ ರಜೆಯ ಸಂಖ್ಯೆ 8ರಿಂದ 10ಕ್ಕೆ ಹೋಗುತ್ತದೆ.

ಎರಡು ವೀಕಾಫ್ ಸಿಕ್ಕರೆ ಕೆಲಸದ ಅವಧಿ ಹೆಚ್ಚಳ

ಬ್ಯಾಂಕ್ ಉದ್ಯೋಗಿಗಳ ಎರಡು ವೀಕಾಫ್ ಬೇಡಿಕೆಗೆ ತನ್ನದೇನೂ ಅಭ್ಯಂತರ ಇಲ್ಲ ಎಂದು ಹಣಕಾಸ ಸಚಿವಾಲಯ ಹೇಳಿದೆ. ಆದರೆ, ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ವೀಕಾಫ್ ಕೊಡುವುದಾದರೆ ದಿನದಲ್ಲಿ ಅವರ ಕೆಲಸದ ಅವಧಿಯನ್ನು 40 ನಿಮಿಷಗಳಷ್ಟು ವಿಸ್ತರಿಸಿ ಎನ್ನುವಂತಹ ಸಲಹೆಯೊಂದನ್ನು ಸರ್ಕಾರಕ್ಕೆ ಐಬಿಎ ಕೊಟ್ಟಿರುವುದು ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ