SBI FD Scheme: ಎಸ್ಬಿಐ ವೀ ಕೇರ್, ಹಣ ಡಬಲ್ ಮಾಡಬಲ್ಲ ಸರ್ಕಾರಿ ಬ್ಯಾಂಕ್ ಎಫ್ಡಿ ಸ್ಕೀಮ್
WeCare FD Plans: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಶೇಷ ಎಫ್ಡಿ ಯೋಜನೆಗಳಲ್ಲಿ ಒಂದಾದ ವೀಕೇರ್ ಸ್ಕೀಮ್ ಶೇ. 7.5ರವರೆಗೂ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರಿಗೆಂದು ಈ ಸ್ಕೀಮ್ ರೂಪಿಸಲಾಗಿದೆ.
ಉಳಿತಾಯ ಯೋಜನೆಗಳ (Savings schemes) ಪೈಕಿ ಜನರು ಹೆಚ್ಚಾಗಿ ಬಳಸುವುದು ನಿಶ್ಚಿತ ಠೇವಣಿ ಅಥವಾ ಅವಧಿ ಠೇವಣಿ ಸ್ಕೀಮ್ಗಳನ್ನು. ಬಹಳ ಸುಲಭವಾಗಿ ಇವುಗಳನ್ನು ಆರಂಭಿಸಬಹುದು. ವಾರ್ಷಿಕ ಬಡ್ಡಿಯೂ ಉತ್ತಮ. ಎಫ್ಡಿ ವಿಚಾರಕ್ಕೆ ಬಂದರೆ ಸಹಕಾರಿ ಬ್ಯಾಂಕುಗಳು ಮತ್ತು ಖಾಸಗಿ ಕಮರ್ಷಿಯಲ್ ಬ್ಯಾಂಕುಗಳು ಹೆಚ್ಚು ಬಡ್ಡಿ ತರುತ್ತವೆ ಎಂಬ ಭಾವನೆ ಇದೆ. ಆದರೆ, ಸರ್ಕಾರಿ ಸ್ವಾಮ್ಯದ ಅಗ್ರಗಣ್ಯ ಬ್ಯಾಂಕ್ ಎನಿಸಿದ ಎಸ್ಬಿಐನಲ್ಲಿ ಎಫ್ಡಿ ದರಗಳು ಉತ್ತಮ ಇವೆ. ಅಮೃತ್ ಕಳಶ್, ವೀ ಕೇರ್ (SBI We Care) ಇತ್ಯಾದಿ ಕೆಲ ವಿಶೇಷ ಠೇವಣಿ ಯೋಜನೆಗಳನ್ನು ಎಸ್ಬಿಐ ಆಫರ್ ಮಾಡುತ್ತಿದೆ. ಎಸ್ಬಿಐನ ವೀ ಕೇರ್ ಸ್ಕೀಮ್ ಒಳ್ಳೆಯ ರಿಟರ್ನ್ ಕೊಡಬಲ್ಲುದು.
ಕೋವಿಡ್ ಸಂದರ್ಭದಲ್ಲಿ ಎಸ್ಬಿಐ ವೀ ಕೇರ್ ಫಿಕ್ಸೆಡ್ ಡೆಪಾಸಿಟ್ ಅನ್ನು ಮೊದಲ ಬಾರಿಗೆ ತಂದಿತು. ಮಾರುಕಟ್ಟೆಯ ಬೆಸ್ಟ್ ಇಂಟರೆಸ್ಟ್ ರೇಟ್ ಆಫರ್ ಮಾಡಿತು. ಇದೀಗ ಈ ಸ್ಕೀಮ್ ಅನ್ನು 2023ರ ಸೆಪ್ಟಂಬರ್ 30ರವರೆಗೂ ವಿಸ್ತರಿಸಿದೆ. ಎಲ್ಲಾ ಗ್ರಾಹಕರಿಗೂ ಈ ಸ್ಕೀಮ್ ಲಭ್ಯ ಇಲ್ಲ. ಹಿರಿಯ ನಾಗರಿಕರಿಗೆ ಮಾತ್ರ ಈ ಪ್ಲಾನ್ನಲ್ಲಿ ಅವಕಾಶ ಇದೆ.
ಇದನ್ನೂ ಓದಿ: Post Office Schemes: ಪೋಸ್ಟ್ ಆಫೀಸ್ ಸ್ಕೀಮ್ಗಳ ಬಗ್ಗೆ ಕುತೂಹಲವಾ? ಇಲ್ಲಿದೆ ವಿವಿಧ ಯೋಜನೆಗಳು, ಬಡ್ಡಿ ದರಗಳ ವಿವರ
ಶೇ. 7.5ರವರೆಗೂ ಬಡ್ಡಿ ಕೊಡುತ್ತದೆ ಎಸ್ಬಿಐ ವೀಕೇರ್
ಎಸ್ಬಿಐನ ವೀ ಕೇರ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ನಲ್ಲಿ ಎಲ್ಲಾ ಗ್ರಾಹಕರು 7 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ವಿವಿಧ ಅವಧಿಗೆ ಠೇವಣಿಗಳನ್ನು ಇರಿಸಬಹುದು. ಹಿರಿಯ ನಾಗರಿಕರಿಗ ಶೇ. 3.5ರಿಂದ ಶೇ. 7.50ರವರೆಗೂ ಬಡ್ಡಿ ಸಿಗುತ್ತದೆ. 5ರಿಂದ 10 ವರ್ಷದ ಅವಧಿಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.
ಎಷ್ಟು ವರ್ಷಕ್ಕೆ ಹಣ ದ್ವಿಗುಣಗೊಳ್ಳುತ್ತದೆ?
ವೀಕೇರ್ ಎಫ್ಡಿ ಸ್ಕೀಮ್ನಲ್ಲಿ 10 ವರ್ಷಕ್ಕೆ 1 ಲಕ್ಷ ರೂ ಠೇವಣಿ ಇರಿಸಿದರೆ ಬಡ್ಡಿಯ ಮೊತ್ತ 1,10,235 ರೂ ಆಗುತ್ತದೆ. ಕೊನೆಯಲ್ಲಿ ನಿಮಗೆ 2,10,235 ರೂ ಸಿಗುತ್ತದೆ. 10 ವರ್ಷದಲ್ಲಿ ಹಣ ಡಬಲ್ ಆಗಿರುತ್ತದೆ.
ಇದನ್ನೂ ಓದಿ: LIC Kanyadan Scheme: ಎಲ್ಐಸಿ ಕನ್ಯಾದಾನ್ ಪಾಲಿಸಿ: ಹೆಣ್ಮಕ್ಕಳ ಓದು ಮತ್ತು ಮದುವೆ ಖರ್ಚಿಗೆ ಉತ್ತಮ ಸ್ಕೀಮ್
ಎಸ್ಬಿಐನ ಸರ್ವೋತ್ತಮ್ನಲ್ಲಿ ಬಡ್ಡಿ ಇನ್ನೂ ಹೆಚ್ಚು
ಎಸ್ಬಿಐನಲ್ಲಿ ಮೂರು ವಿಶೇಷ ಎಫ್ಡಿ ಸ್ಕೀಮ್ಗಳಿವೆ. ಅಮೃತ್ ಕಳಶ್, ಸರ್ವೋತ್ತಮ್ ಮತ್ತು ವೀ ಕೇರ್. ಈ ಪೈಕಿ ಎಸ್ಬಿಐ ಸರ್ವೋತ್ತಮ್ ಎಫ್ಡಿ ಸ್ಕೀಮ್ನಲ್ಲಿ ಹಿರಿಯ ನಾಗರಿಕರಿಗೆ ಶೇ. 7.9ರವರೆಗೂ ವಾರ್ಷಿಕ ಬಡ್ಡಿ ಸಿಗುತ್ತದೆ. ಅಮೃತ್ ಕಳಶ್ ಸ್ಕೀಮ್ನಲ್ಲಿ ಶೇ. 7.6ರವರೆಗೂ ಬಡ್ಡಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ