LIC Kanyadan Scheme: ಎಲ್ಐಸಿ ಕನ್ಯಾದಾನ್ ಪಾಲಿಸಿ: ಹೆಣ್ಮಕ್ಕಳ ಓದು ಮತ್ತು ಮದುವೆ ಖರ್ಚಿಗೆ ಉತ್ತಮ ಸ್ಕೀಮ್
Insurance Plan For Girl Child: 1 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಮಕ್ಕಳ ಹೆಸರಿನಲ್ಲಿ ಪಾಲಕರು ಪಡೆಯಬಹುದಾದ ಎಲ್ಐಸಿ ಕನ್ಯಾದಾನ್ ಸ್ಕೀಮ್ನಲ್ಲಿ ಹಲವು ಫೀಚರ್ಗಳಿದ್ದು, ಹೆಣ್ಮಗುವಿನ ಭವಿಷ್ಯಕ್ಕೆ ಹೇಳಿಮಾಡಿಸಿದ ಯೋಜನೆಯಾಗಿದೆ.
ಹೆಣ್ಮಕ್ಕಳಿಗೆಂದು ಎಲ್ಐಸಿ ಕೆಲವಾರು ಉತ್ತಮ ಪಾಲಿಸಿಗಳನ್ನು ಹೊಂದಿದೆ. ಎಲ್ಐಸಿ ಜೀವನ್ ತರುಣ್, ಎಲ್ಐಸಿ ಕನ್ಯಾದಾನ್ ಪಾಲಿಸಿ, ಎಲ್ಐಸಿ ಚೈಲ್ಡ್ ಫ್ಯೂಚರ್ ಪ್ಲಾನ್, ಎಲ್ಐಸಿ ಸಿಂಗಲ್ ಪ್ರೀಮಿಯಮ್ ಚೈಲ್ಡ್ ಪ್ಲಾನ್ ಇತ್ಯಾದಿ ಯೋಜನೆಗಳಿವೆ. ಹೆಣ್ಮಗು ದೊಡ್ಡವಳಾಗಿ ಆಕೆಯ ಶಿಕ್ಷಣವೆಚ್ಚ ಮತ್ತು ವಿವಾಹವೆಚ್ಚಗಳಿಗೆ ಬೇಕರುವ ಹಣದ ಅಗತ್ಯಗಳನ್ನು ಈ ಪಾಲಿಸಿಗಳು ನೀಡುತ್ತವೆ. ಈ ಪೈಕಿ ಎಲ್ಐಸಿ ಕನ್ಯಾದಾನ್ ಪಾಲಿಸಿ (LIC Kanyadan Policy) ಹೆಚ್ಚು ಗಮನ ಸೆಳೆಯುತ್ತಿದೆ. ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಈ ಸ್ಕೀಮ್ ಪಡೆಯಬಹುದು. ತಂದೆ, ತಾಯಿ ಅಥವಾ ಬೇರೆ ಪಾಲಕರು 18ರಿಂದ 50 ವರ್ಷ ವಯೋಮಾನದವರು ಎಲ್ಐಸಿ ಕನ್ಯಾದಾನ್ ಪ್ಲಾನ್ ಆರಂಭಿಸಲು ಸಾಧ್ಯ. ಪಾಲಿಸಿ ಅವಧಿ 13ರಿಂದ 25 ವರ್ಷದವರೆಗೂ ಇರುತ್ತದೆ.
ಎಲ್ಐಸಿ ಕನ್ಯಾದಾನ್ ಪಾಲಿಸಿ 2023 ಮುಖ್ಯಾಂಶಗಳು
- ಅನಿವಾಸಿ ಭಾರತೀಯ ಸೇರಿದಂತೆ ಯಾವುದೇ ಭಾರತೀಯ ವ್ಯಕ್ತಿ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು.
- ಪಾಲಿಸಿ ಪಡೆಯಲು ಹೆಣ್ಮಗುವಿನ ವಯಸ್ಸು ಕನಿಷ್ಠ 1 ವರ್ಷ ಆಗಿರಬೇಕು. ಹೆಣ್ಮಗುವಿನ ಹೆಸರಿನಲ್ಲಿ ಪಾಲಕರು ಪಾಲಿಸಿ ಆರಂಭಿಸಬಹುದು. ಪಾಲಕರ ವಯಸ್ಸು 18ರಿಂದ 50 ವರ್ಷ ಇರಬೇಕು.
- ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಕಟ್ಟುವ ಅವಕಾಶ ಇರುತ್ತದೆ
- ದಿನಕ್ಕೆ 75ರೂನಂತೆ ನೀವು ಈ ಪಾಲಿಸಿಗೆ ಹೂಡಿಕೆ ಮಾಡಿದರೆ 25 ವರ್ಷ ಬಳಿಕ 14 ಲಕ್ಷ ರೂ ರಿಟರ್ನ್ ಸಿಗುತ್ತದೆ.
- ಪಾಲಿಸಿ ಅವಧಿಗಿಂತ ಮುಂಚಿನ 3 ವರ್ಷಗಳವರೆಗೆ ಮಾತ್ರ ಪ್ರೀಮಿಯಮ್ ಪಾವತಿ.
- ಪಾಲಿಸಿಯ ಫಲಾನುಭವಿ ಅಪಘಾತದಲ್ಲಿ ಮೃತಪಟ್ಟರೆ ಕುಟುಂಬ ಸದಸ್ಯರಿಗೆ 10 ಲಕ್ಷ ರೂ ಪರಿಹಾರ ಸಿಗುತ್ತದೆ
- ಫಲಾನುಭವಿಗೆ ಸಹಜ ಸಾವು ಸಂಭವಿಸಿದರೆ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಸಿಗುತ್ತದೆ
- ಸತತ 3 ವರ್ಷ ನೀವು ಪ್ರೀಮಿಯಮ್ ಕಟ್ಟಿದ್ದರೆ ಪಾಲಿಸಿ ಅಡ ಇಟ್ಟು ಸಾಲ ಪಡೆಯಬಹುದು. ನೀವು ಆವರೆಗೆ ಕಟ್ಟಿರುವ ಪ್ರೀಮಿಯಮ್ ಮೊತ್ತಕ್ಕೆ ಅನುಗುಣವಾಗಿ ಸಾಲ ಸಿಗುತ್ತದೆ.
- ಈ ಪಾಲಿಸಿಯ ಯಾವುದೇ ಮೊತ್ತಕ್ಕೂ ತೆರಿಗೆ ಇರುವುದಿಲ್ಲ. ಟ್ಯಾಕ್ಸ್ ಡಿಡಕ್ಷನ್ಗೂ ಇದು ಸಹಾಯಕವಾಗುತ್ತದೆ.
- ಪಾಲಿಸಿದಾರ ಸಾವನ್ನಪ್ಪಿದರೆ ಪ್ರೀಮಿಯಮ್ ಕಟ್ಟುವುದನ್ನು ಮುಂದುವರಿಸುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಕುಟುಂಬಕ್ಕೆ ಪ್ರತೀ ವರ್ಷ 1 ಲಕ್ಷ ರೂ ಪರಿಹಾರ ಸಿಗುತ್ತಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ