Post Office Schemes: ಪೋಸ್ಟ್ ಆಫೀಸ್ ಸ್ಕೀಮ್​ಗಳ ಬಗ್ಗೆ ಕುತೂಹಲವಾ? ಇಲ್ಲಿದೆ ವಿವಿಧ ಯೋಜನೆಗಳು, ಬಡ್ಡಿ ದರಗಳ ವಿವರ

PO Savings Tools: ಹಲವು ಅಂಚೆ ಕಚೇರಿ ಯೋಜನೆಗಳು ಜನಪ್ರಿಯವಾಗಿವೆ. ಉಳಿತಾಯಕ್ಕೆ, ಹೂಡಿಕೆಗೆ ಮತ್ತು ನಿವೃತ್ತಿಗೂ ಕೂಡ ಹೇಳಿಮಾಡಿಸಿದ ಕೆಲ ಸ್ಕೀಮ್​ಗಳನ್ನು ಪೋಸ್ಟ್ ಆಫೀಸ್ ಮೂಲಕ ನಡೆಸಲಾಗುತ್ತಿದೆ. ಕೆವಿಪಿ, ಎಸ್​ಎಸ್​ಸಿ, ಪೋಸ್ಟ್ ಆಫೀಸ್ ಟಿಡಿ, ಎಸ್​ಸಿಎಸ್​ಎಸ್ ಇತ್ಯಾದಿ ಇವೆ.

Post Office Schemes: ಪೋಸ್ಟ್ ಆಫೀಸ್ ಸ್ಕೀಮ್​ಗಳ ಬಗ್ಗೆ ಕುತೂಹಲವಾ? ಇಲ್ಲಿದೆ ವಿವಿಧ ಯೋಜನೆಗಳು, ಬಡ್ಡಿ ದರಗಳ ವಿವರ
ಅಂಚೆ ಕಚೇರಿ
Follow us
|

Updated on: Jul 20, 2023 | 2:33 PM

ಭಾರತದ ಅಂಚೆ ಕಚೇರಿ (India Post) ವ್ಯವಸ್ಥೆ ಅದು ಕಂಡಿರುವ ಪರಿವರ್ತನೆ ಬಗ್ಗೆ ಯೂನಿವರ್ಸಲ್ ಪೋಸ್ಟಲ್ ಯೂನಿಯನ್ (Universal Postal Union) ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ಅದು ವಿಶ್ವದ ಇತರ ದೇಶಗಳ ಅಂಚೆ ಕಚೇರಿಗಳಿಗೆ ಮಾದರಿಯಾಗಿದೆ ಎಂದು ಹೇಳಿದ್ದಾರೆ. ಇಮೇಲ್ ಬಂದ ಬಳಿಕ ಸಾಕಷ್ಟು ವ್ಯವಹಾರ ಕುಸಿತ ಕಾಣಲಿದ್ದ ಪೋಸ್ಟ್ ಆಫೀಸ್ ವ್ಯವಸ್ಥೆಗೆ ಸರ್ಕಾರ ಹೊಸ ಹೊಣೆಗಾರಿಕೆಗಳನ್ನು ಕೊಟ್ಟು ಪರಿವರ್ತನೆ ಮಾಡಿದೆ. ಇವತ್ತು ಅಂಚೆ ಕಚೇರಿಯಲ್ಲಿ ವಿವಿಧ ಉಳಿತಾಯ ಯೋಜನೆಗಳು ಚಾಲ್ತಿಯಲ್ಲಿವೆ. ಅಂಚೆ ಕಚೇರಿಗಳ ಮುಂದೆ ಸಾಕಷ್ಟು ಜನರು ಜಮಾಯಿಸಿರುವುದನ್ನು ನೀವು ನೋಡಿರಬಹುದು. ಅದರ ಜನಾಕರ್ಷಣೆಗೆ ಉಳಿತಾಯ ಯೋಜನೆಗಳೇ (Savings Schemes) ಕಾರಣ. ಅಂಚೆ ಕಚೇರಿಯೇ ಎಕ್ಸ್​ಕ್ಲೂಸಿವ್ ಆಗಿ ರೂಪಿಸಿರುವ ಆರೇಳು ಪ್ರಮುಖ ಸೇವಿಂಗ್ ಮತ್ತು ಇನ್ವೆಸ್ಟ್​ಮೆಂಟ್ ಸ್ಕೀಮ್​ಗಳಿವೆ. ಕೇಂದ್ರ ಹಣಕಾಸ ಸಚಿವಾಲಯದ ಭಾಗವಾಗಿರುವ ನ್ಯಾಷನಲ್ ಸೇವಿಂಗ್ಸ್ ಇನ್ಸ್​ಟಿಟ್ಯೂಟ್ ಸಂಸ್ಥೆ ಮತ್ತು ಇಂಡಿಯಾ ಪೋಸ್ಟ್ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ನಡೆಸುತ್ತದೆ. ಇವುಗಳ ಲಾಭ ಏನು ಎಂಬ ಕುರಿತು ಒಂದಷ್ಟು ವಿವರ ಇಲ್ಲಿದೆ

ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್

ಬ್ಯಾಂಕ್ ಅಕೌಂಟ್​ನಂತೆ ಅಂಚೆ ಕಚೇರಿಯಲ್ಲೂ ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಹಾಗೇ ಸುಮ್ಮನೆ ಈ ಖಾತೆಯಲ್ಲಿ ಹಣ ಇರಿಸಿದರೆ ವರ್ಷಕ್ಕೆ ಶೇ. 4ರಷ್ಟು ಬಡ್ಡಿ ಸಿಗುತ್ತದೆ. ಈ ಬಡ್ಡಿಗೆ ತೆರಿಗೆ ಕಡಿತವೂ ಇರುತ್ತದೆ.

ಪೋಸ್ಟ್ ಆಫೀಸ್ ಆರ್​ಡಿ

ಬ್ಯಾಂಕ್​ಗಳಲ್ಲಂತೆ ಅಂಚೆ ಕಚೇರಿಗಳಲ್ಲೂ ಆರ್​ಡಿ ತೆರೆಯಬಹುದು. ಐದು ವರ್ಷದ ಅರ್​ಡಿಗೆ ಶೇ. 6.5ರ ವಾರ್ಷಿಕ ದರದಲ್ಲಿ ಬಡ್ಡಿ ಜಮೆ ಆಗುತ್ತದೆ. ವರ್ಷಕ್ಕೆ ಒಮ್ಮೆ ಬಡ್ಡಿ ಜಮೆ ಆಗುತ್ತಾ ಹೋಗುತ್ತದೆ.

ಇದನ್ನೂ ಓದಿLIC Kanyadan Scheme: ಎಲ್​ಐಸಿ ಕನ್ಯಾದಾನ್ ಪಾಲಿಸಿ: ಹೆಣ್ಮಕ್ಕಳ ಓದು ಮತ್ತು ಮದುವೆ ಖರ್ಚಿಗೆ ಉತ್ತಮ ಸ್ಕೀಮ್

ಅಂಚೆ ಕಚೇರಿ ಟೈಮ್ ಡೆಪಾಸಿಟ್ ಅಕೌಂಟ್

ಬ್ಯಾಂಕ್​ನಲ್ಲಿರುವ ಎಫ್​ಡಿಯಂತೆ ಪೋಸ್ಟ್ ಆಫೀಸ್​ನ ಎಸ್​ಬಿ ಖಾತೆಯಿಂದ ಟರ್ಮ್ ಡೆಪಾಸಿಟ್ ಪ್ಲಾನ್​ಗಳಿವೆ. 1ರಿಂದ 5 ವರ್ಷದ ವಿವಿಧ ಅವಧಿ ಠೇವಣಿಗೆ ಶೇ. 6.9ರಿಂದ ಶೇ. 7.5 ರವರೆಗೂ ವಾರ್ಷಿಕ ಬಡ್ಡಿ ಇದೆ. ಐದು ವರ್ಷದ ಠೇವಣಿಗೆ ಗರಿಷ್ಠ ಬಡ್ಡಿ ಸಿಗುತ್ತದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ (MIS ಸ್ಕೀಮ್)

ಇದು ನಿಮ್ಮ ಹೂಡಿಕೆಯ ಆಧಾರದ ಮೇಲೆ ಮಾಸಿಕವಾಗಿ ಆದಾಯ ತಂದುಕೊಡುವ ಯೋಜನೆ. ಇದರಲ್ಲಿ ನೀವು ಇರಿಸುವ ಠೇವಣಿ ಹಣಕ್ಕೆ ವಾರ್ಷಿಕ 7.40ರ ದರದಲ್ಲಿ ಬಡ್ಡಿ ಸಿಗುತ್ತದೆ. ಬಡ್ಡಿ ಹಣವನ್ನು ಪ್ರತೀ ತಿಂಗಳು ಹಿಂಪಡೆಯಬಹುದು. ಈ ಮೂಲಕ ಮಾಸಿಕ ಆದಾಯ ಸೃಷ್ಟಿಸಿಕೊಳ್ಳಬಹುದು.

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (ಎಸ್​ಸಿಎಸ್​ಎಸ್)

ಇದು ಪಿಂಚಣಿ ಕೊಡುವ ನಿವೃತ್ತಿ ಯೋಜನೆ. ಇದಕ್ಕೆ ವಾರ್ಷಿಕ ಬಡ್ಡಿ ದರ ಸದ್ಯ ಶೇ. 8.2ರಷ್ಟು ಇದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಇದು ಬಹಳ ಜನಪ್ರಿಯವಾಗಿರುವ ಹೂಡಿಕೆ ಯೋಜನೆ. ಇದಕ್ಕೆ ಸಿಗುವ ವಾರ್ಷಿಕ ಬಡ್ಡಿ ದರ ಶೇ. 7.1ರಷ್ಟಿದೆ. ಬಡ್ಡಿಗೆ ಯಾವ ತೆರಿಗೆ ಕಡಿತವೂ ಇರುವುದಿಲ್ಲ. ಜೊತೆಗೆ, ಸೆಕ್ಷನ್ 80ಸಿ ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂವರೆಗೂ ಟ್ಯಾಕ್ಸ್ ಡಿಡಕ್ಷನ್​ಗೆ ಈ ಹೂಡಿಕೆಯನ್ನು ಬಳಸಬಹುದು. ಪಿಪಿಎಫ್ ಯೋಜನೆ 15 ವರ್ಷದ ಅವಧಿಯದ್ದಾಗಿರುತ್ತದೆ.

ಇದನ್ನೂ ಓದಿPost Office: ಭಾರತದ ಅಂಚೆ ಕಚೇರಿ ಮತ್ತು ಯುಪಿಐ ವ್ಯವಸ್ಥೆ ವಿಶ್ವಕ್ಕೆ ಮಾದರಿ ಎಂದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಮಸಾಹಿಕೋ ಮೆಟೋಕಿ

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್​ಎಸ್​ಸಿ)

ಎನ್​ಎಸ್​ಸಿ ಸ್ಕೀಮ್​ನಲ್ಲಿ ನೀವು ಐದು ವರ್ಷ ಕಾಲ ಠೇವಣಿ ಇಡಬಹುದು. ವರ್ಷಕ್ಕೆ ಶೇ. 7.7ರಷ್ಟು ಬಡ್ಡಿ ಸಿಗುಗ್ತದೆ.

ಕಿಸಾನ್ ವಿಕಾಸ್ ಪತ್ರ (ಕೆವಿಪಿ)

ಇದು ಬಹಳ ಸುರಕ್ಷಿತವಾಗಿರುವ ಸೇವಿಂಗ್ ಸ್ಕೀಮ್. ಕಿಸಾನ್ ವಿಕಾಸ್ ಪತ್ರದ ಹೂಡಿಕೆಗೆ ವರ್ಷಕ್ಕೆ ಶೇ. 7ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಕೆವಿಪಿ ಕೂಡ ಬಹಳ ಜನಪ್ರಿಯವಾಗಿರುವ ಸ್ಕೀಮ್.

ಸುಕನ್ಯ ಸಮೃದ್ಧಿ ಯೋಜನೆ (ಎಸ್​ಎಸ್​ಎ)

ಇದು 10 ವರ್ಷದೊಳಗಿನ ವಯಸ್ಸಿನ ಬಾಲಕಿಯರ ಹೆಸರಿನಲ್ಲಿ ಪಡೆಯಬಹುದಾದ ಯೋಜನೆ. ಹೆಣ್ಮಗುವಿನ ಓದು ಮತ್ತು ವಿವಾಹಕ್ಕೆ ಸಹಾಯವಾಗಲೆಂದು ಇದನ್ನು ರೂಪಿಸಲಾಗಿದೆ. ಇದಕ್ಕೆ ಬಡ್ಡಿ ದರ ಶೇ. 8ರಷ್ಟಿದೆ. ವರ್ಷಕ್ಕೊಮ್ಮೆ ಬಡ್ಡಿ ಹಣವನ್ನು ಠೇವಣಿ ಮೊತ್ತಕ್ಕೆ ಜಮೆಯಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು