Sign In

By signing in or creating an account, you agree with Associated Broadcasting Company's Terms & Conditions and Privacy Policy.

Forex Jump: ಭಾರತದ ಫಾರೆಕ್ಸ್ ರಿಸರ್ವ್ಸ್ 2023ರಲ್ಲಿ ಅತಿಹೆಚ್ಚಳ; ಅಮೆರಿಕಕ್ಕಿಂತ ಎರಡು ಪಟ್ಟು ಹೆಚ್ಚು

RBI Bulletin 2023 July: ಆರ್​ಬಿಐ ಬಿಡುಗಡೆ ಮಾಡಿದ ಜುಲೈ ಬುಲೆಟಿನ್ ಪ್ರಕಾರ ಭಾರತದ ಫಾರೆಕ್ಸ್ ರಿಸರ್ವ್ಸ್ 2022ರ ಅಕ್ಟೋಬರ್​ನಿಂದೀಚೆ 71.8 ಬಿಲಿಯನ್ ಡಾಲರ್​ನಷ್ಟು ಹೆಚ್ಚಿಸಿಕೊಂಡಿದೆ. ಜುಲೈ 7ರಲ್ಲಿ ಭಾರತದಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 596.3 ಬಿಲಿಯನ್ ಡಾಲರ್ ಇತ್ತು.

Forex Jump: ಭಾರತದ ಫಾರೆಕ್ಸ್ ರಿಸರ್ವ್ಸ್ 2023ರಲ್ಲಿ ಅತಿಹೆಚ್ಚಳ; ಅಮೆರಿಕಕ್ಕಿಂತ ಎರಡು ಪಟ್ಟು ಹೆಚ್ಚು
ಭಾರತೀಯ ರಿಸರ್ವ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2023 | 10:54 AM

ನವದೆಹಲಿ, ಜುಲೈ 18: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 17ರಂದು ಬಿಡುಗಡೆ ಮಾಡಿದ ವರದಿ ಭಾರತದ ಆರ್ಥಿಕ ಪ್ರಗತಿಗೆ ಕನ್ನಡಿ ಹಿಡಿದಿದೆ. ಮಳೆ ಅಭಾವ, ಅತಿವೃಷ್ಟಿ ಇತ್ಯಾದಿ ಪ್ರಾಕೃತಿಕ ವೈಪರೀತ್ಯಗಳ ನಡುವೆಯೂ ಭಾರತದ ಆರ್ಥಿಕತೆ ಹುಲುಸಾಗಿ ಬೆಳೆಯುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್​ಗಳಲ್ಲಿ ಚಟುವಟಿಕೆಯ ವಿಸ್ತಾರ ಹೆಚ್ಚಾಗಿದೆ ಎಂದೆನ್ನಲಾಗಿದೆ. ಆರ್​ಬಿಐನ ಈ ಜುಲೈ ಬುಲೆಟಿನ್ ಪ್ರಕಾರ ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಅಥವಾ ಫಾರೆಕ್ಸ್ ರಿಸರ್ವ್ಸ್ (Forex Reserves) ಬಹಳಷ್ಟು ವೃದ್ಧಿಸುತ್ತಿದೆ. 2022ರ ಅಕ್ಟೋಬರ್ 21ರಿಂದೀಚೆ ಇಲ್ಲಿನ ಫಾರೆಕ್ಸ್ ರಿಸರ್ವ್ಸ್ 71.8 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. 2023ರ ಜುಲೈ 7ರವರೆಗಿನ ಲೆಕ್ಕದ ಪ್ರಕಾರ ಭಾರತದಲ್ಲಿ ಫಾರೆಕ್ಸ್ ರಿಸರ್ವ್ಸ್ 596.3 ಬಿಲಿಯನ್ ಡಾಲರ್ ಇದೆ. ಅಂದರೆ ಸುಮಾರು 48.9 ಲಕ್ಷಕೋಟಿ ರುಪಾಯಿಯಷ್ಟು ವಿದೇಶ ವಿನಿಮಯ ಮೀಸಲು ನಿಧಿ ಇದೆ.

ಪ್ರಮುಖ ದೇಶಗಳ ಪೈಕಿ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಅತಿಹೆಚ್ಚಳ ಕಂಡ ಎರಡನೇ ದೇಶ ಭಾರತ ಎಂದು ಆರ್​ಬಿಐ ಬುಲೆಟಿನ್ ಜುಲೈ 2023 ವರದಿಯಲ್ಲಿ ತಿಳಿಸಲಾಗಿದೆ. 2023ರಲ್ಲಿ ಭಾರತಕ್ಕೆ ಭೀಕರ ಚಂಡಮಾರುತ ಕಾಟ ಕೊಟ್ಟಿದೆ. ಮಳೆ ಪ್ರಮಾಣ ಕಡಿಮೆ ಆಗಿದೆ. ಆದರೂ ಕೂಡ ಬೆಳವಣಿಗೆ ಕುಂಠಿತಗೊಂಡಿಲ್ಲ. ಒಟ್ಟಾರೆ ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ (ರಫ್ತು ಆಮದು ಇತ್ಯಾದಿ ಹಣಕಾಸು ಹೊರಹರಿವು, ಒಳಹರಿವು) ಸ್ಥಿತಿ ಉತ್ತಮಗೊಂಡಿದೆ ಎಂದು ಆರ್​ಬಿಐ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿಶೇ 28 ರಷ್ಟು ಜಿಎಸ್​ಟಿ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ಆನ್​ಲೈನ್​ ಗೇಮಿಂಗ್ ಸಂಸ್ಥೆಗಳ ಅಸಮಾಧಾನ

ಭಾರತದ ಫಾರೆಕ್ಸ್ ರಿಸರ್ವ್ಸ್ ಎಷ್ಟು ಅಗಾಧವಾದುದು?

ಭಾರತದಲ್ಲಿರುವ 596.3 ಬಿಲಿಯನ್ ಡಾಲರ್ ಮೊತ್ತದ ಫಾರೆಕ್ಸ್ ರಿಸರ್ವ್ಸ್ ವಿಶ್ವದಲ್ಲೇ ನಾಲ್ಕನೇ ಅತಿಹೆಚ್ಚಿನದು. ಅಮೆರಿಕಕ್ಕಿಂತ ಎರಡು ಪಟ್ಟಿಗಿಂತ ಹೆಚ್ಚು ಬೃಹತ್ ಆದುದು. ಚೀನಾ, ಜಪಾನ್ ಮತ್ತು ಸ್ವಿಟ್ಜರ್​ಲೆಂಡ್ ಬಿಟ್ಟರೆ ಭಾರತವೇ ಅತಿಹೆಚ್ಚು ಮೀಸಲು ನಿಧಿ ಹೊಂದಿರುವುದು.

ಭಾರತಕ್ಕಿರುವ ಮೀಸಲು ನಿಧಿಯು 2023-24ರ ಅವಧಿಯಲ್ಲಿ 9.7 ತಿಂಗಳ ಕಾಲ ಆಮದು ಮಾಡಿಕೊಳ್ಳುವಷ್ಟು ಪ್ರಮಾಣದಲ್ಲಿ ಇದೆ. ಭಾರತದ ಬಾಹ್ಯ ಸಾಲದ ಶೇ. 95ರಷ್ಟು ಪ್ರಮಾಣದಲ್ಲಿ ಫಾರೆಕ್ಸ್ ರಿಸರ್ವ್ಸ್ ಇದೆ.

ಇದನ್ನೂ ಓದಿRIL: ರಿಲಾಯನ್ಸ್ ಇಂಡಸ್ಟ್ರೀಸ್​ನಿಂದ ಹಣಕಾಸು ಸೇವೆ ಪ್ರತ್ಯೇಕ; ಆರ್​ಐಎಲ್ ಷೇರುದಾರರಿಗೆ ಪ್ರತೀ ಷೇರಿಗೆ ಹೊಸ ಜಿಯೋ ಷೇರು ಉಚಿತ; ಇದು ನಿಜವಾ?

ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳ ಹೆಚ್ಚಳ

ವಿದೇಶೀ ಪೋರ್ಟ್​ಫೋಲಿಯಾ ಹೂಡಿಕೆಗಳು (ಎಫ್​ಪಿಐ) ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಭಾರತೀಯ ಮಾರುಕಟ್ಟೆಯತ್ತ ಹರಿದುಬರುತ್ತಿವೆ. 2023ರ ಜೂನ್ ತಿಂಗಳಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಎಫ್​ಪಿಐ ಬಂದಿತ್ತು. ಭಾರತದ ರೀತಿಯ ಉದಯೋನ್ಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತಕ್ಕೇ ಅತಿಹೆಚ್ಚು ಎಫ್​ಪಿಐ ಹರಿದುಬಂದಿರುವುದು ಎಂದು ಆರ್​ಬಿಣ ಬುಲೆಟಿನ್​ನಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ