Subsidized Chana Dal: ‘ಭಾರತ್ ದಾಲ್’- ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಕಡಲೆ ಮಾರಾಟ
'Bharat Dal' Brand: ಸದ್ಯ ದೆಹಲಿ ಎನ್ಸಿಆರ್ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ‘ಭಾರತ್ ದಾಲ್’ ಬ್ರ್ಯಾಂಡ್ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಕಡಲೆ ಮಾರಾಟ ಮಾಡುತ್ತಿದೆ.
ನವದೆಹಲಿ, ಜುಲೈ 18: ಹತೋಟಿ ಮೀರುವ ಬೆಲೆಗಳನ್ನು ಇಳಿಸುವ ನಿಟ್ಟಿನಲ್ಲಿ ಸರ್ಕಾರ ಸಬ್ಸಿಡಿ ದರದಲ್ಲಿ (Subsidized Price) ವಸ್ತುಗಳನ್ನು ಮಾರುವುದುಂಟು. ಟೊಮೆಟೋವನ್ನು 80 ರೂಗೆ ಸರ್ಕಾರ ಮಾರುತ್ತಿದೆ. ಅದೇ ರೀತಿ ಸರ್ಕಾರ ಈಗ ಕಡಲೆಯನ್ನು ಸಬ್ಸಿಡಿ ದರದಲ್ಲಿ ಮಾರುತ್ತಿದೆ. ‘ಭಾರತ್ ದಾಲ್’ ಬ್ರ್ಯಾಂಡ್ (Bharat Dal) ಹೆಸರಿನಲ್ಲಿ ಕಡಲೆಯನ್ನು ಮಾರಲಾಗುತ್ತಿದೆ. ಸಬ್ಸಿಡಿ ಬೆಲೆಯಲ್ಲಿ ಭಾರತ್ ದಾಲ್ ಮಾರುವ ಯೋಜನೆಯನ್ನು ಕೇಂದ್ರ ಆಹಾರ ಸಚಿವ ಪೀಯುಶ್ ಗೋಯಲ್ ಜುಲೈ 17ರಂದು ಆರಂಭಿಸಿದ್ದಾರೆ. ತೊಗರಿಬೇಳೆ ಬೆಲೆ ತೀವ್ರವಾಗಿ ಏರಿಕೆ ಕಂಡ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ‘ಭಾರತ್ ದಾಲ್’ ಕಡಲೆ ಒಂದು ಕೆಜಿಗೆ 60 ರುಪಾಯಿ ಬೆಲೆ ಹೊಂದಿದೆ. 30 ಕಿಲೋ ಚೀಲದಷ್ಟು ಕಡಲೆ ತೆಗೆದುಕೊಂಡರೆ ಒಂದು ಕಿಲೋಗೆ 55 ರೂ ಬೆಲೆ ಆಗುತ್ತದೆ.
ಸದ್ಯ ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ವಿವಿಧ ಮಳಿಗೆಗಳಲ್ಲಿ ಭಾರತ್ ದಾಲ್ ಮಾರಾಟ ನಡೆಯುತ್ತಿದೆ. ಕೇಂದ್ರೀಯ ಭಂಡಾರ್ ಮತ್ತು ಸಫಲ್ನ ವಿವಿಧ ಅಂಗಡಿಗಳಲ್ಲೂ ಸಬ್ಸಿಡಿ ದರದ ಕಡಲೆ ಮಾರಾಟ ಆಗುತ್ತಿದೆ.
ಇದನ್ನೂ ಓದಿ: Tomato: ಕೆಜಿಗೆ 90 ಅಲ್ಲ, 80 ರೂಗೆ ಟೊಮೆಟೋ; ಇಂದಿನಿಂದಲೇ ಸರ್ಕಾರದಿಂದ ಮಾರಾಟ
ಬೇಳೆ ಕಾಳುಗಳ ರೀಟೇಲ್ ಬೆಲೆ ಎಷ್ಟಿದೆ? (1 ಕಿಲೋಗೆ)
- ಹುರಿಗಡಲೆ: 74.68 ರೂ
- ತೊಗರಿಬೇಳೆ: 134.48 ರೂ
- ಉದ್ದಿನಬೇಳೆ: 113.45 ರೂ
- ಹೆಸರುಕಾಳು: 110.23 ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ