ಕಳೆದ ಎರಡು ವರ್ಷಗಳಲ್ಲಿ ದೇಶದ ಜಿಡಿಪಿಯೂ ಕುಸಿತ ಕಂಡಿದ್ದು, ಆದರೆ ದೇಶದ ಆರ್ಥಿಕತೆಯೂ ಬೆಳವಣಿಗೆಯತ್ತ ಸಾಗುತ್ತಿದೆ. ಇತ್ತ ರಿಸರ್ವ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, ದೇಶದ ಸೇವಾ ರಫ್ತುಗಳು ಅಕ್ಟೋಬರ್ ನಿಂದ ಏರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ, ದೇಶದ ಸೇವಾ ರಫ್ತು ವಾರ್ಷಿಕ ಆಧಾರದ ಮೇಲೆ 22.3 ಪ್ರತಿಶತದಷ್ಟು ಏರಿಕೆ ಕಂಡಿದ್ದು, 34.3 ಬಿಲಿಯನ್‌ಗೆ ತಲುಪಿದೆ. ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ದೇಶದ ಸೇವಾ ರಫ್ತು ಜುಲೈನಲ್ಲಿ 30.58 ಶತಕೋಟಿ ಡಾಲರ್‌ಗಳಿಂದ 30.34 ಶತಕೋಟಿ ಡಾಲರ್‌ಗೆ ಇಳಿದಿತ್ತು. ಆದಾದ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ 32.57 ಶತಕೋಟಿಗೆ ಏರಿತು.
ಆದರೆ ಇದೀಗ ಜಿಟಿಆರ್ ಐ ವರದಿಯಲ್ಲಿ ದೇಶದ ಸೇವಾ ರಫ್ತು 618.21 ಶತಕೋಟಿಗೆ ತಲುಪುತ್ತದೆ ಎಂದು ಉಲ್ಲೇಖಿಸಲಾಗಿದೆ. 2030 ರ ವೇಳೆಗೆ ಸೇವಾ ರಫ್ತು 613.04 ಶತಕೋಟಿಯಷ್ಟು ಸರಕು ರಫ್ತುಗಳಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. 2019 ರ ಹಣಕಾಸು ವರ್ಷ ಮತ್ತು 2024 ರ ಹಣಕಾಸು ವರ್ಷದ ನಡುವೆ, ಸೇವಾ ರಫ್ತುಗಳು ಐದು ವರ್ಷಗಳಲ್ಲಿ 10.5 ಶೇಕಡಾ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (CAGR) ಏರಿಕೆಯನ್ನು ಕಂಡಿದೆ.
ಇದನ್ನೂ ಓದಿ: 70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ವಿಮೆ! ಯೋಜನೆ ಕುರಿತಾದ ಮಾಹಿತಿ ಇಲ್ಲಿದೆ
ಇದು ಸರಕು ರಫ್ತಿನ 5.8 ಶೇಕಡಾ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದಲ್ಲದೇ,’ಟೆಲಿಕಾಂ, ಕಂಪ್ಯೂಟರ್ ಮತ್ತು ಮಾಹಿತಿ ಸೇವೆಗಳ’ ಅಡಿಯಲ್ಲಿ ಸಾಫ್ಟ್‌ವೇರ್ ಮತ್ತು ಐಟಿ ಸೇವೆಗಳು 2024 ರಲ್ಲಿ ಭಾರತದ ಒಟ್ಟು ಸೇವಾ ರಫ್ತಿಗೆ 190.7 ಶತಕೋಟಿ ಕೊಡುಗೆ ನೀಡಿದೆ ಎಂದು ಮಾಹಿತಿ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ