ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಲಕ್ಷ ಕೋಟಿ ರೂ ದಾಖಲೆ ಮಾರಾಟ; ಸಣ್ಣ ನಗರಗಳಿಂದಲೇ ಭರ್ಜರಿ ಶಾಪಿಂಗ್

|

Updated on: Nov 06, 2024 | 12:53 PM

Business record during festive season: ಹಬ್ಬದ ಸೀಸನ್ ಇದ್ದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಭಾರತದ ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಸಖತ್ ಬಿಸಿನೆಸ್ ಆಗಿದೆ. ಒಂದು ತಿಂಗಳಲ್ಲಿ ಇವುಗಳಲ್ಲಿ ಆದ ಒಟ್ಟು ವ್ಯಾಪಾರ ವಹಿವಾಟು 1 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 23ರಷ್ಟು ಹೆಚ್ಚು ವ್ಯಾಪಾರವಾಗಿದೆ.

ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಲಕ್ಷ ಕೋಟಿ ರೂ ದಾಖಲೆ ಮಾರಾಟ; ಸಣ್ಣ ನಗರಗಳಿಂದಲೇ ಭರ್ಜರಿ ಶಾಪಿಂಗ್
ಆನ್ಲೈನ್ ಶಾಪಿಂಗ್
Follow us on

ನವದೆಹಲಿ, ನವೆಂಬರ್ 6: ಕಳೆದ ವಾರ ಅಂತ್ಯಗೊಂಡ ಒಂದು ತಿಂಗಳ ಭರ್ಜರಿ ಹಬ್ಬದ ಸೀಸನ್​ನಲ್ಲಿ ಭಾರತದಲ್ಲಿ ಭರ್ಜರಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಈ ಅವಧಿಯಲ್ಲಿ ಶೇ. 20ಕ್ಕಿಂತಲೂ ಹೆಚ್ಚು ವ್ಯಾಪಾರ ವಹಿವಾಟು ನಡೆದಿದೆ ಎನ್ನಲಾಗಿದೆ. ದಿ ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಒಂದು ತಿಂಗಳ ಹಬ್ಬದ ಸೀಸನ್​ನಲ್ಲಿ ಮೆಟ್ರೋವೇತರ ನಗರಗಳ ಗ್ರಾಹಕರು ಹೆಚ್ಚು ಪಾಲ್ಗೊಂಡಿದೆ. ಇದು ಅಚ್ಚರಿಯ ಸಂಗತಿ. ಸಾಮಾನ್ಯವಾಗಿ ಪ್ರಮುಖ ನಗರಗಳ ನಿವಾಸಿಗಳು ಇ-ಕಾಮರ್ಸ್ ಸೈಟ್​​ಗಳಲ್ಲಿ ಹೆಚ್ಚು ಶಾಪಿಂಗ್ ಮಾಡುತ್ತಾರೆ.

ಇ-ಕಾಮರ್ಸ್ ಕನ್ಸಲ್ಟೆನ್ಸಿ ಸಂಸ್ಥೆಯಾ ಡಾಟಮ್ ಇಂಟೆಲಿಜೆನ್ಸ್ ಮಾಡಿರುವ ಅಂದಾಜು ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳು ಒಂದು ಲಕ್ಷ ಕೋಟಿ ರೂ ವ್ಯಾಪಾರ ಮಾಡಿವೆ. ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ ನಡೆದ ವಹಿವಾಟು ಪ್ರಮಾಣ 81,000 ಕೋಟಿ ರೂ ಮತ್ತು 69,800 ಕೋಟಿ ರು ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಒಂದು ತಿಂಗಳಲ್ಲಿ ವ್ಯಾಪಾರ ವಹಿವಾಟು ಒಂದು ಲಕ್ಷ ಕೋಟಿ ರೂ ದಾಟಿರುವುದು.

ಇದನ್ನೂ ಓದಿ: ಬಂಡವಾಳ ಬೇಡುವ ವಲಯಗಳಲ್ಲಿ ಉದ್ಯೋಗಸೃಷ್ಟಿ ಹೆಚ್ಚಳ; ಐಟಿ ವಲಯದಲ್ಲೂ ಶೇ. 10ರಷ್ಟು ನೇಮಕಾತಿ ಹೆಚ್ಚಳ

ಫ್ಲಿಪ್​ಕಾರ್ಟ್​ನ ಬಿಗ್ ಬಿಲಿಯನ್ ಡೇಸ್ ಮತ್ತು ಅಮೇಜಾನ್​ನ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನ ಆಫರ್​ಗಳು ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಿಗೆ ಸಾಕಷ್ಟು ಗ್ರಾಹಕರನ್ನು ಸೆಳೆದಿವೆ. ಇವೆರಡು ಪ್ಲಾಟ್​ಫಾರ್ಮ್​ಗಳಲ್ಲೇ 55,000 ಕೋಟಿ ರೂ ಮೊತ್ತದ ವ್ಯಾಪಾರವಾಗಿದೆ.

ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಅತಿಹೆಚ್ಚು ಮಾರಾಟವಾದ ವಸ್ತುಗಳಲ್ಲಿ ನಿರೀಕ್ಷೆಯಂತೆ ಸ್ಮಾರ್ಟ್​ಫೋನ್​ಗಳು ಅಗ್ರಸ್ಥಾನ ಪಡೆದಿವೆ. ದೇಶದಲ್ಲಿ ಈ ಹಬ್ಬದ ಸೀಸನ್​ನಲ್ಲಿ ನಡೆದ ಒಟ್ಟಾರೆ ಸ್ಮಾರ್ಟ್​ಫೋನ್ ವ್ಯಾಪಾರದಲ್ಲಿ ಆನ್ಲೈನ್​ನ ಪಾಲು ಶೇ. 65ರಷ್ಟಂತೆ. ಉನ್ನತ ಮಟ್ಟದ ಆಂಡ್ರಾಯ್ಡ್ ಫೋನ್​ಗಳಿಗೆ ಹೆಚ್ಚು ಬೇಡಿಕೆ ಇತ್ತು ಎಂದೆನ್ನಲಾಗಿದೆ.

ಛಠ್ ಉತ್ಸವದಲ್ಲೂ ಭರ್ಜರಿ ವ್ಯಾಪಾರ ನಿರೀಕ್ಷೆ…

ನವೆಂಬರ್ 5ರಂದು ಆರಂಭವಾಗಿ ನವೆಂಬರ್ 8ರವರೆಗೂ ನಾಲ್ಕು ದಿನಗಳ ಕಾಲ ನಡೆಯುವ ಛಠ್ ಹಬ್ಬದ ವೇಳೆ ಬರೋಬ್ಬರಿ 12,000 ಕೋಟಿ ರೂ ಮೊತ್ತದ ವ್ಯಾಪಾರ ವಹಿವಾಟು ನಡೆಯಬಹುದು ಎಂದು ವರ್ತಕರ ಸಂಘವಾದ ಸಿಎಐಟಿ ನಿರೀಕ್ಷಿಸಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಹಬ್ಬದ ಸೀಸನ್​ನಲ್ಲಿ ಭಾರೀ ಬಿಸಿನೆಸ್

ಉತ್ತರಪ್ರದೇಶ, ದೆಹಲಿ, ಒಡಿಶಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸ್​ಗಡ, ವಿದರ್ಭ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಛಠ್ ಪೂಜೆಯನ್ನು ವೈಭವವಾಗಿ ಆಚರಿಸಲಾಗುತ್ತದೆ. ಸೂರ್ಯದೇವನ ಆರಾಧನೆಯು ಈ ಹಬ್ಬದ ವೈಶಿಷ್ಟ್ಯ.

ವರ್ಷಕ್ಕೆ ಎರಡು ಬಾರಿ ಛಠ್ ಹಬ್ಬ ನಡೆಯುವುದು ಇನ್ನೊಂದು ವಿಶೇಷ. ಚೈತ್ರ ಮಾಸ ಮತ್ತು ಕಾರ್ತಿಕ ಮಾಸಗಳಲ್ಲಿ ಎರಡು ಬಾರಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ