AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡವಾಳ ಬೇಡುವ ವಲಯಗಳಲ್ಲಿ ಉದ್ಯೋಗಸೃಷ್ಟಿ ಹೆಚ್ಚಳ; ಐಟಿ ವಲಯದಲ್ಲೂ ಶೇ. 10ರಷ್ಟು ನೇಮಕಾತಿ ಹೆಚ್ಚಳ

Manufacturing sector employment creation: ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಕಾರ್ಮಿಕರ ದುಡಿಮೆ ಅಗತ್ಯ ಇರುವ ವಲಯಕ್ಕಿಂತ ಬಂಡವಾಳ ಅಗತ್ಯ ಹೆಚ್ಚಿರುವ ವಲಯಗಳಲ್ಲಿ ಉದ್ಯೋಗಸೃಷ್ಟಿ ಕಡಿಮೆ ಇರುತ್ತದೆ ಎನ್ನುವ ಆರೋಪಕ್ಕೆ ವಿರುದ್ಧವಾದ ಡಾಟಾವನ್ನು ಗೋಲ್ಡ್​ಮನ್ ಸ್ಯಾಕ್ಸ್​ನ ವರದಿಯೊಂದು ಹೈಲೈಟ್ ಮಾಡಿದೆ. ಬಂಡವಾಳ ಹೆಚ್ಚು ಬೇಕಿರುವ ಉತ್ಪಾದನಾ ವಲಯದಲ್ಲಿ ಹತ್ತು ವರ್ಷದಲ್ಲಿ ಉದ್ಯೋಗಸೃಷ್ಟಿ ಹೆಚ್ಚಿದೆ ಎಂದು ಈ ವರದಿ ಹೇಳಿದೆ.

ಬಂಡವಾಳ ಬೇಡುವ ವಲಯಗಳಲ್ಲಿ ಉದ್ಯೋಗಸೃಷ್ಟಿ ಹೆಚ್ಚಳ; ಐಟಿ ವಲಯದಲ್ಲೂ ಶೇ. 10ರಷ್ಟು ನೇಮಕಾತಿ ಹೆಚ್ಚಳ
ಉದ್ಯೋಗ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 06, 2024 | 11:27 AM

Share

ನವದೆಹಲಿ, ನವೆಂಬರ್ 6: ಭಾರತದಲ್ಲಿ ಅಧಿಕ ಬಂಡವಾಳ ಬೇಡುವ ಉತ್ಪಾದನಾ ವಲಯಗಳಲ್ಲಿ ಉದ್ಯೋಗಸೃಷ್ಟಿ ಕಡಿಮೆ ಇದೆ ಎನ್ನುವ ಅಪವಾದಕ್ಕೆ ತದ್ವಿರುದ್ಧವಾದ ಅಂಶ ತಿಳಿಸುವ ಮಾಹಿತಿಯೊಂದು ಬಂದಿದೆ. ಎಲೆಕ್ಟ್ರಾನಿಕ್ಸ್, ಕೆಮಿಕಲ್, ಮೆಷಿನರಿ ಇತ್ಯಾದಿ ವಲಯಗಳಲ್ಲಿ ಮ್ಯಾನುಫ್ಯಾಕ್ಚರಿಂಗ್​ಗೆ ಸಾಕಷ್ಟು ಬಂಡವಾಳ ವ್ಯಯವಾಗುತ್ತಿದೆ. ಇಂಥ ವಲಯಗಳಲ್ಲಿ ಉದ್ಯೋಗಸೃಷ್ಟಿಯೂ ಹೆಚ್ಚುತ್ತಿದೆ. ಕಳೆದ 10 ವರ್ಷದಲ್ಲಿ ರಫ್ತು ಕೂಡ ಸಾಕಷ್ಟು ಹೆಚ್ಚಿದೆ. ಇದು ಗೋಲ್ಡ್​ಮನ್ ಸ್ಯಾಕ್ಸ್​ನ ವರದಿಯೊಂದರಲ್ಲಿ ಸಿಕ್ಕಿರುವ ಮಾಹಿತಿ.

ಕುತೂಹಲ ಎಂದರೆ ಕಾರ್ಮಿಕರ ಅಗತ್ಯ ಹೆಚ್ಚಿರುವ ಜವಳಿ, ಪಾದರಕ್ಷೆ, ಆಹಾರ ಮತ್ತು ಪಾನೀಯದಂತ ಸೆಕ್ಟರ್​ಗಳಿಗೆ ಹೋಲಿಸಿದರೆ ಬಂಡವಾಳ ಅಗತ್ಯತೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಕಳೆದ 10 ವರ್ಷದಲ್ಲಿ ಉದ್ಯೋಗಸೃಷ್ಟಿ ದರ ಹೆಚ್ಚಿದೆ ಎಂದು ಗೋಲ್ಡ್​ಮನ್ ಸ್ಯಾಕ್ಸ್​ನ ವರದಿಯು ಹೈಲೈಟ್ ಮಾಡಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ; ಹಬ್ಬದ ಸೀಸನ್​ನಲ್ಲಿ ಭಾರೀ ಬಿಸಿನೆಸ್

ಬಂಡವಾಳ ಬೇಡುವ ವಲಯಗಳಿಂದ ಉದ್ಯೋಗಸೃಷ್ಟಿ ಕಡಿಮೆ ಇರುತ್ತದೆ ಎನ್ನುವ ಅಪವಾದಗಳ ಮಧ್ಯೆ ಈ ವರದಿ ಬೇರೆಯೇ ವಸ್ತುಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಪಿಎಲ್​ಐ ಸ್ಕೀಮ್​ಗಳಿಂದಾಗಿ ಭಾರತದಲ್ಲಿ ಹಲವು ಮ್ಯಾನುಫ್ಯಾಕ್ಚರಿಂಗ್ ವಲಯಗಳು ಗರಿಗೆದರಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿವೆ. 14 ಪ್ರಮುಖ ಸೆಕ್ಟರ್​ಗಳಲ್ಲಿ ಪಿಎಲ್​ಐ ಸ್ಕೀಮ್​ಗಳಿವೆ. ಇವುಗಳಿಂದ ಉದ್ಯೋಗಾವಕಾಶ ಹೆಚ್ಚುವುದರ ಜೊತೆಗೆ ರಫ್ತಿಗೂ ಪುಷ್ಟಿ ಸಿಗುತ್ತಿದೆ.

ಎಐ ಕ್ಷೇತ್ರದಲ್ಲಿ ಹೆಚ್ಚು ನೇಮಕಾತಿ…

ಮತ್ತೊಂದು ವರದಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್​ನಂತಹ ಉದ್ಯೋಗಗಳಿಗೆ ನೇಮಕಾತಿಯಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆಯಂತೆ. ಹಾಗಂತ, ನೌಕ್ರಿ ಜಾಬ್​ಸ್ಪೀಕ್ ಇಂಡೆಕ್ಸ್ ಹೇಳುತ್ತಿದೆ.

ಇದನ್ನೂ ಓದಿ: ಕರ್ನಾಟಕದ ಮೂರು ಸೇರಿ ದೇಶದ ವಿವಿಧೆಡೆ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸಜ್ಜು

ಆಯಿಲ್ ಅಂಡ್ ಗ್ಯಾಸ್, ಫಾರ್ಮಾ, ಬಯೋಟೆಕ್, ಎಫ್​ಎಂಸಿಜಿ ಮತ್ತು ಐಟಿ ವಲಯಗಳಲ್ಲಿ ನೇಮಕಾತಿಯಲ್ಲಿ ಗಣನೀಯ ಹೆಚ್ಚಳವಾಗಿದೆ.

ಎಐ ಮತ್ತು ಎಂಎಲ್ ಉದ್ಯೋಗಾವಕಾಶ ಶೇ. 39ರ ವಾರ್ಷಿಕ ದರದಲ್ಲಿ ಹೆಚ್ಚುತ್ತಿರುವುದು ಗಮನಾರ್ಹ. ಗ್ಲೋಬಲ್ ಕೆಪಬಿಲಿಟಿ ಸೆಂಟರ್​ಗಳು ಶೇ. 17ರಷ್ಟು ಹೆಚ್ಚು ಹೈರಿಂಗ್ ಮಾಡುತ್ತಿವೆ.

ಅಕ್ಟೋಬರ್ ತಿಂಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಡಾಟಾ ಕೇಂದ್ರಿತ ಹುದ್ದೆಗಳು ಮತ್ತು ನೇಮಕಾತಿ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಇವುಗಳು ಶೇ. 24ರ ವಾರ್ಷಿಕ ದರದಲ್ಲಿ ಹೆಚ್ಚಿವೆ. ತೆಲಂಗಾಣ, ಕರ್ನಾಟಕ, ಆಂಧ್ರ ಮತ್ತು ಕೇರಳದಲ್ಲೂ ಹೈರಿಂಗ್ ಹೆಚ್ಚಾಗಿದೆ ಎಂದು ನೌಕ್ರಿಯ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ