ಜಿಎಸ್​ಟಿ ಇಲಾಖೆ ಸ್ಪೆಷಲ್ ಡ್ರೈವ್; 18,000 ನಕಲಿ ಜಿಎಸ್​ಟಿ ನೊಂದಣಿ, 25 ಸಾವಿರ ಕೋಟಿ ರೂ ತೆರಿಗೆ ಕಳ್ಳತನ ಪತ್ತೆ

GST special drive against tax evasion: ಆಗಸ್ಟ್ 16ರಿಂದ ಅಕ್ಟೋಬರ್ 31ರವರೆಗೂ ನಡೆದ ಸ್ಪೆಷಲ್ ಡ್ರೈವ್​ನಲ್ಲಿ ಜಿಎಸ್​ಟಿ ನೊಂದಾಯಿಸಿರುವ 18,000ದಷ್ಟು ನಕಲಿ ಕಂಪನಿಗಳು ಪತ್ತೆಯಾಗಿವೆ. ಈ ನಕಲಿ ನೊಂದಣಿಗಳಿಂದ 25,000 ಕೋಟಿ ರೂ ಮೊತ್ತದ ತೆರಿಗೆ ಕಳ್ಳತನ ಆಗಿದ್ದು ತಿಳಿದುಬಂದಿದೆ. ಕಳೆದ ವರ್ಷವೂ ಜಿಎಸ್​ಟಿ ಇಲಾಖೆ ಜಿಎಸ್​ಟಿ ವಂಚಕರನ್ನು ಪತ್ತೆ ಮಾಡಲು ಮೊದಲ ಬಾರಿಗೆ ಸ್ಪೆಷಲ್ ಡ್ರೈವ್ ನಡೆಸಿತ್ತು.

ಜಿಎಸ್​ಟಿ ಇಲಾಖೆ ಸ್ಪೆಷಲ್ ಡ್ರೈವ್; 18,000 ನಕಲಿ ಜಿಎಸ್​ಟಿ ನೊಂದಣಿ, 25 ಸಾವಿರ ಕೋಟಿ ರೂ ತೆರಿಗೆ ಕಳ್ಳತನ ಪತ್ತೆ
ಜಿಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 06, 2024 | 1:59 PM

ನವದೆಹಲಿ, ನವೆಂಬರ್ 6: ಅಕ್ರಮಗಳನ್ನು ತಡೆಯಲು ಸರ್ಕಾರ ವಿವಿಧ ಕಾಯ್ದೆ ಕಾನೂನುಗಳನ್ನು ರೂಪಿಸುತ್ತದೆ. ಆದರೆ, ವಂಚಕರು ಚಾಪೆ ಬದಲು ರಂಗೋಲಿ ಕೆಳಗೆಯೇ ನುಸುಳಲು ಯತ್ನಿಸುವುದುಂಟು. ಜಿಎಸ್​ಟಿ ಅಡಿಯಲ್ಲಿ ನೊಂದಾಯಿಸಲಾದ ಕಂಪನಿಗಳಲ್ಲಿ ಸಾಕಷ್ಟು ನಕಲಿ ಇರುವುದು ಬೆಳಕಿಗೆ ಬಂದಿದೆ. 18,000 ನಕಲಿ ಕಂಪನಿಗಳನ್ನು (GST fake registration) ಜಿಎಸ್​ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ನಕಲಿ ಕಂಪನಿಗಳ ಮೂಲಕ ಬರೋಬ್ಬರಿ 25,000 ಕೋಟಿ ರೂನಷ್ಟು ತೆರಿಗೆಗಳ್ಳತನ ಆಗಿರುವುದೂ ಬೆಳಕಿಗೆ ಬಂದಿದೆ.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಜಾಡು ಹಿಡಿದು ಹೊರಟಿದ್ದ ತೆರಿಗೆ ಅಧಿಕಾರಿಗಳು

ದೇಶಾದ್ಯಂತ ಬಹಳಷ್ಟು ಕಂಪನಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC- Input Tax Credit) ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನುಮಾನದಲ್ಲಿ ಜಿಎಸ್​ಟಿ ಅಧಿಕಾರಿಗಳು ವ್ಯಾಪಕವಾಗಿ ಪರಿಶೀಲನೆ ನಡೆಸಿದ್ದರು. ಯಾವುದೇ ಸರಕುಗಳನ್ನು ಮಾರಾಟ ಮಾಡದೇ ಇದ್ದರೂ ಐಟಿಸಿಯನ್ನು ಉಪಯೋಗಿಸುತ್ತಿರಬಹುದೆಂದು 73,000 ಕಂಪನಿಗಳ ಮೇಲೆ ಜಿಎಸ್​ಟಿ ಇಲಾಖೆಗೆ ಅನುಮಾನ ಬಂದಿತ್ತು. ಇವುಗಳನ್ನು ಪರಿಶೀಲಿಸಿದಾಗ 18,000 ಕಂಪನಿಗಳೇ ನಕಲಿ ಎಂಬುದು ಗೊತ್ತಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಈ ಕಂಪನಿಗಳ ಹೆಸರನ್ನು ಬಳಸಿ 24,550 ಕೋಟಿ ರೂ ಮೊತ್ತದ ತೆರಿಗೆ ವಂಚನೆ ಎಸಗಿರುವುದೂ ಬೆಳಕಿಗೆ ಬಂದಿದೆ ಎಂದು ಜಿಎಸ್​ಟಿ ಅಧಿಕಾರಿಗಳು ಹೇಳಿರುವರೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಲಕ್ಷ ಕೋಟಿ ರೂ ದಾಖಲೆ ಮಾರಾಟ; ಸಣ್ಣ ನಗರಗಳಿಂದಲೇ ಭರ್ಜರಿ ಶಾಪಿಂಗ್

ನಕಲಿ ಜಿಎಸ್​ಟಿ ರಿಜಿಸ್ಟ್ರೇಶನ್ ಪತ್ತೆಗೆ ಸ್ಪೆಷಲ್ ಡ್ರೈವ್

ನಕಲಿ ಜಿಎಸ್​ಟಿ ನೊಂದಣಿಗಳಿಂದ ಸರ್ಕಾರಕ್ಕೆ ಸಾಕಷ್ಟು ಪ್ರಮಾಣದ ಜಿಎಸ್​ಟಿ ಆದಾಯ ಕೈತಪ್ಪುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಸ್ಪೆಷಲ್ ಡ್ರೈವ್ ನಡೆಸುತ್ತಿದೆ. 2023ರ ಮೇ 16ರಿಂದ ಜುಲೈ 15ರವರೆಗೆ ಈ ಮೊದಲ ಮೊದಲ ಕಾರ್ಯಾಚರಣೆ ನಡೆದಿತ್ತು. ಆಗ ಜಿಎಸ್​ಟಿ ನೊಂದಾಯಿತವಾದ 21,791 ನಕಲಿ ಕಂಪನಿಗಳು ಪತ್ತೆಯಾಗಿದ್ದವು. 24,010 ಕೋಟಿ ರೂ ತೆರಿಗೆ ಕಳ್ಳತನವಾಗಿದ್ದೂ ಬೆಳಕಿಗೆ ಬಂದಿತ್ತು.

2024ರ ಆಗಸ್ಟ್ 16ರಿಂದ ಅಕ್ಟೋಬರ್ 31ರವರೆಗೆ ಎರಡನೇ ಜಿಎಸ್​ಟಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಎರಡನೇ ಸ್ಪೆಷಲ್ ಡ್ರೈವ್​ನಲ್ಲಿ ಇನ್ನೂ ಹೆಚ್ಚಿನ ಮೊತ್ತದ ತೆರಿಗೆ ವಂಚನೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ