ಭಾರತದ ಆರ್ಥಿಕತೆ ದುರ್ಬಲಗೊಳ್ಳಲು ಇದೊಂದು ಬೆಳವಣಿಗೆ ಸಾಕು; ಬೆಚ್ಚಬೀಳಿಸಿದೆ ಮಾರ್ಗನ್ ಸ್ಟಾನ್ಲೀ ವರದಿ

|

Updated on: Nov 07, 2023 | 6:07 PM

Morgan Stanley Report: ತೈಲ ಬೆಲೆ ಏರಿದರೆ ಭಾರತಕ್ಕೆ ಅಪಾಯ ಹೆಚ್ಚುತ್ತದೆ. ತೈಲಬೆಲೆ ಒಂದು ಬ್ಯಾರಲ್​ಗೆ 10 ಡಾಲರ್​ನಷ್ಟು ಏರಿದರೆ ಹಣದುಬ್ಬರ 50 ಬೆಸಿಸ್ ಪಾಯಿಂಟ್​ಗಳಷ್ಟು ಹೆಚ್ಚುತ್ತದೆ. ಕರೆಂಟ್ ಅಕೌಂಟ್ ಕೊರತೆ ಕೂಡ 30 ಬೇಸಿಸ್ ಅಂಕಗಳಷ್ಟು ಹೆಚ್ಚುತ್ತದೆ ಎಂದು ಮಾರ್ಗನ್ ಸ್ಟಾನ್ಲೀ ವರದಿ ಎಚ್ಚರಿಸಿದೆ. ಕಚ್ಛಾ ತೈಲ ಬೆಲೆ ಒಂದು ಬ್ಯಾರಲ್​ಗೆ 95 ಡಾಲರ್​ವರೆಗೂ ಇದ್ದರೂ ಆರ್ಥಿಕತೆ ತಡೆದುಕೊಳ್ಳಬಹುದು. ಆರ್​ಬಿಐ ಕೂಡ ಬಡ್ಡಿದರ ಹೆಚ್ಚಿಸುವ ಅನಿವಾರ್ಯತೆ ಇರುವುದಿಲ್ಲ. ಆದರೆ, ಅದಕ್ಕಿಂತ ಬೆಲೆ ಹೆಚ್ಚಾದರೆ ಮಾತ್ರ ಕಷ್ಟ ಎನ್ನಲಾಗುತ್ತಿದೆ.

ಭಾರತದ ಆರ್ಥಿಕತೆ ದುರ್ಬಲಗೊಳ್ಳಲು ಇದೊಂದು ಬೆಳವಣಿಗೆ ಸಾಕು; ಬೆಚ್ಚಬೀಳಿಸಿದೆ ಮಾರ್ಗನ್ ಸ್ಟಾನ್ಲೀ ವರದಿ
ಭಾರತದ ಆರ್ಥಿಕತೆ
Follow us on

ನವದೆಹಲಿ, ನವೆಂಬರ್ 7: ಮಾರ್ಗನ್ ಸ್ಟಾನ್ಲೀ ಎಂಬ ಹಣಕಾಸು ಸಂಸ್ಥೆಯ ವರದಿ (morgan stanley report) ಪ್ರಕಾರ ಭಾರತದ ಆರ್ಥಿಕತೆ ಈಗ ಕಚ್ಛಾ ತೈಲದ ಮೇಲೆ ನಿಂತಿದೆ. ತೈಲ ಬೆಲೆ ಏರಿದರೆ ಭಾರತಕ್ಕೆ ಅಪಾಯ ಹೆಚ್ಚುತ್ತದೆ. ತೈಲಬೆಲೆ (crude oil price) ಒಂದು ಬ್ಯಾರಲ್​ಗೆ 10 ಡಾಲರ್​ನಷ್ಟು ಏರಿದರೆ ಹಣದುಬ್ಬರ 50 ಬೆಸಿಸ್ ಪಾಯಿಂಟ್​ಗಳಷ್ಟು ಹೆಚ್ಚುತ್ತದೆ. ಕರೆಂಟ್ ಅಕೌಂಟ್ ಕೊರತೆ ಕೂಡ 30 ಬೇಸಿಸ್ ಅಂಕಗಳಷ್ಟು ಹೆಚ್ಚುತ್ತದೆ ಎಂದು ಮಾರ್ಗನ್ ಸ್ಟಾನ್ಲೀ ವರದಿ ಎಚ್ಚರಿಸಿದೆ.

ಸದ್ಯ ಭಾರತಕ್ಕೆ ಕಚ್ಛಾ ತೈಲ ಒಂದು ಬ್ಯಾರಲ್​ಗೆ 85ರಿಂದ 90 ಡಾಲರ್ ಬೆಲೆಗೆ ಸಿಗುತ್ತಿದೆ. ಹೀಗಾಗಿ, ಆರ್ಥಿಕತೆಯನ್ನು ಸಮತೋಲನದಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತಿದೆ. ಇದೇ ಕಾರಣಕ್ಕೆ ಆರ್​ಬಿಐ ಕೂಡ ಬಡ್ಡಿದರ ಹೆಚ್ಚಿಸದೇ ಹಾಗೇ ಯಥಾಸ್ಥಿತಿ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಒಂದು ವೇಳೆ ಕಚ್ಛಾ ತೈಲ ಬೆಲೆ 110 ಡಾಲರ್​ಗಿಂತ ಮೇಲೇರಿಬಿಟ್ಟರೆ ಭಾರತದ ಆರ್ಥಿಕತೆಗೆ ಭಾರೀ ಸಂಕಷ್ಟ ಆಗುತ್ತದೆ ಎಂಬುದು ಮಾರ್ಗನ್ ಸ್ಟಾನ್ಲೀ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಡುಗೆ ಮನೆ ವೆಚ್ಚ: ಅಕ್ಟೋಬರ್​ನಲ್ಲಿ ಕಡಿಮೆ ಆಗಿದ್ದ ಬೆಲೆ ನವೆಂಬರ್​ನಲ್ಲಿ ತುಟ್ಟಿ; ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ದುಬಾರಿ

ಭಾರತಕ್ಕೆ ಬೇಕಾದ ಕಚ್ಛಾ ತೈಲದಲ್ಲಿ ಶೇ. 80ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಸ್ವಲ್ಪ ತೈಲ ಬೆಲೆ ವ್ಯತ್ಯಾಸವಾದರೂ ಅದರ ಪರಿಣಾಮ ಭಾರತದ ಆರ್ಥಿಕತೆ ಮೇಲೆ ಆಗುತ್ತದೆ. ಒಂದು ವೇಳೆ, ತೈಲ ಬೆಲೆ ಇನ್ನಷ್ಟು ಹೆಚ್ಚಳವಾದರೆ ಹಣದುಬ್ಬರ ಸಹಜವಾಗಿ ಹೆಚ್ಚುತ್ತದೆ. ಆರ್​ಬಿಐ ಕೂಡ ಬಡ್ಡಿದರ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗುತ್ತದೆ ಎಂಬುದು ಮಾರ್ಗನ್ ಸ್ಟಾನ್ಲೀಯ ಆರ್ಥಿಕ ತಜ್ಞರ ವ್ಯಾಖ್ಯಾನ.

95 ಡಾಲರ್​ವರೆಗಿನ ಬೆಲೆ ಓಕೆ…

ತಜ್ಞರ ಪ್ರಕಾರ, ಕಚ್ಛಾ ತೈಲ ಬೆಲೆ ಒಂದು ಬ್ಯಾರಲ್​ಗೆ 95 ಡಾಲರ್​ವರೆಗೂ ಇದ್ದರೂ ಆರ್ಥಿಕತೆ ತಡೆದುಕೊಳ್ಳಬಹುದು. ಆರ್​ಬಿಐ ಕೂಡ ಬಡ್ಡಿದರ ಹೆಚ್ಚಿಸುವ ಅನಿವಾರ್ಯತೆ ಇರುವುದಿಲ್ಲ. ಆದರೆ, ಅದಕ್ಕಿಂತ ಬೆಲೆ ಹೆಚ್ಚಾದರೆ ಮಾತ್ರ ಕಷ್ಟ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಆರ್ಥಿಕ ಅಸಮಾನತೆಯಲ್ಲಿ ಹೆಚ್ಚಳ; ಬಡತನದಲ್ಲಿ ಇಳಿಮುಖ: ವಿಶ್ವಸಂಸ್ಥೆ ಯುಎನ್​ಡಿಪಿ ವರದಿಯಲ್ಲಿ ಇನ್ನೂ ಕೆಲ ಕುತೂಹಲಕಾರಿ ಸಂಗತಿ

ಚುನಾವಣಾ ಫಲಿತಾಂಶದ ಭಯ…

ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ಆಗ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೋ? ಈಗಿನ ಆಡಳಿತ ಪಕ್ಷ ಸೋತು, ಹೊಸ ಪಕ್ಷ ಅಧಿಕಾರಕ್ಕೆ ಬಂದರೆ ಅನಿಶ್ಚಿತ ಸ್ಥಿತಿ ಬರಬಹುದು. ಹೊಸ ನೀತಿ ಜಾರಿಗೆ ಬರಬಹುದು. ಕಳೆದ ಕೆಲ ವರ್ಷಗಳಿಂದ ಮಾಡಿದ ಸುಧಾರಣೆಗಳು ನಿರರ್ಥಕ ಆಗಿಬಿಡಬಹುದು ಎಂಬುದು ಮಾರ್ಗನ್ ಸ್ಟಾನ್ಲೀ ಆರ್ಥಿಕ ತಜ್ಞರ ಕಳವಳ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ