ಅಡುಗೆ ಮನೆ ವೆಚ್ಚ: ಅಕ್ಟೋಬರ್ನಲ್ಲಿ ಕಡಿಮೆ ಆಗಿದ್ದ ಬೆಲೆ ನವೆಂಬರ್ನಲ್ಲಿ ತುಟ್ಟಿ; ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ದುಬಾರಿ
Meals Cost: ಅಕ್ಟೋಬರ್ ತಿಂಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡರಲ್ಲೂ ಬೆಲೆ ಇಳಿಕೆ ಆಗಿರುವುದು ಕಂಡುಬಂದಿದೆ. ಕ್ರಿಸಿಲ್ ರಿಸರ್ಚ್ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಮನೆಯಲ್ಲಿ ಮಾಡಿದ ಸಸ್ಯಾಹಾರ ಅಡುಗೆ ವೆಚ್ಚ ಶೇ. 5ರಷ್ಟು ಕಡಿಮೆ ಆಗಿದೆ. ಮನೆಯಲ್ಲಿ ಮಾಡಿದ ಮಾಂಸಾಹಾರದ ವೆಚ್ಚ ಶೇ. 7ರಷ್ಟು ಕಡಿಮೆ ಆಗಿದೆ. ಇದು ಕಳೆದ ವರ್ಷದ ಅಕ್ಟೋಬರ್ನ ವೆಚ್ಚಕ್ಕೆ ಮಾಡಲಾದ ಹೋಲಿಕೆಯಾಗಿದೆ.
ಭಾರತದಲ್ಲಿ ಸಾಮಾನ್ಯ ಜನರಿಗೆ ಕಂಡೂಕಾಣದಂತೆ ಬರೆಹಾಕುವ ಬೆಲೆ ಏರಿಕೆಯಲ್ಲಿ (price rise) ಆಹಾರದ್ದೂ ಒಂದು. ತರಕಾರಿ, ಬೇಳೆ ಕಾಳು, ಎಣ್ಣೆ ಬೆಲೆ ಏರಿದಷ್ಟೂ ಹೋಟೆಲ್ ಊಟವೂ ತುಟ್ಟಿಯಾಗುತ್ತದೆ. ಹೋಟೆಲ್ ಮಾತ್ರವಲ್ಲ, ಮನೆಯ ಅಡುಗೆ ಮನೆ ವೆಚ್ಚವೂ (home cooked food) ಹೆಚ್ಚುತ್ತದೆ. ಅದರಲ್ಲೂ ಅಡುಗೆಯಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಈರುಳ್ಳಿ, ಟೊಮೆಟೋ ಬೆಲೆಯಲ್ಲಿನ ವ್ಯತ್ಯಯ ಬಹಳ ಮುಖ್ಯ. ಅಕ್ಟೋಬರ್ ತಿಂಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡರಲ್ಲೂ ಬೆಲೆ ಇಳಿಕೆ ಆಗಿರುವುದು ಕಂಡುಬಂದಿದೆ. ಕ್ರಿಸಿಲ್ ರಿಸರ್ಚ್ (CRISIL Research) ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಮನೆಯಲ್ಲಿ ಮಾಡಿದ ಸಸ್ಯಾಹಾರ ಅಡುಗೆ ವೆಚ್ಚ ಶೇ. 5ರಷ್ಟು ಕಡಿಮೆ ಆಗಿದೆ. ಮನೆಯಲ್ಲಿ ಮಾಡಿದ ಮಾಂಸಾಹಾರದ ವೆಚ್ಚ ಶೇ. 7ರಷ್ಟು ಕಡಿಮೆ ಆಗಿದೆ. ಇದು ಕಳೆದ ವರ್ಷದ ಅಕ್ಟೋಬರ್ನ ವೆಚ್ಚಕ್ಕೆ ಮಾಡಲಾದ ಹೋಲಿಕೆಯಾಗಿದೆ.
ವೆಚ್ಚದ ಲೆಕ್ಕಾಚಾರ ಹೇಗೆ?
ಭಾರತದ ಎಲ್ಲಾ ಭಾಗಗಳಲ್ಲಿ ಒಂದು ಮನೆಯಲ್ಲಿ ತಯಾರಾಗುವ ಅಡುಗೆಗೆ ಸರಾಸರಿಯಾಗಿ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ನೋಡಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಅಡುಗೆಯ ವೆಚ್ಚ ವಿಭಿನ್ನವಾಗಿರುತ್ತದೆ. ಹೀಗಾಗಿ, ಸರಾಸರಿ ಲೆಕ್ಕ ಮಾಡಲಾಗುತ್ತದೆ.
ಅಡುಗೆ ವೆಚ್ಚದ ಮೇಲೆ ಪ್ರಭಾವಿಸುವ ಸಂಗತಿಗಳು
- ಅಡುಗೆ ಅನಿಲ (ಶೇ. 14)
- ಈರುಳ್ಳಿ (ಶೇ. 10)
- ಬೇಳೆಕಾಳುಗಳು (ಶೇ. 9)
- ಟೊಮೆಟೋ, ಆಲೂಗಡ್ಡೆ ಮತ್ತು ತರಕಾರಿಗಳು
- ಸಾಂಬಾರ ಪದಾರ್ಥಗಳು
- ಅಡುಗೆ ಎಣ್ಣೆ
- ಮಾಂಸ (ಮಾಂಸಾಹಾರಕ್ಕೆ)
ಅಕ್ಟೋಬರ್ನಲ್ಲಿ ಊಟದ ವೆಚ್ಚ ಕಡಿಮೆ ಆಗಲು ಕಾರಣಗಳು
ಅಕ್ಟೋಬರ್ ತಿಂಗಳಲ್ಲಿ ಮನೆಯಲ್ಲಿ ತಯಾರಿಸಲಾದ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಅಡುಗೆಯ ವೆಚ್ಚ ತುಸು ಕಡಿಮೆ ಆಗಿದೆ. ಗ್ಯಾಸ್ ಬೆಲೆ ಕಡಿಮೆ ಆಗಿದ್ದು, ಟೊಮೆಟೋ, ಈರುಳ್ಳಿ ಬೆಲೆ ಕಡಿಮೆ ಆಗಿದ್ದು ಸಸ್ಯಾಹಾರ ಅಡುಗೆ ವೆಚ್ಚ ಕಡಿಮೆ ಆಗಲು ಕಾರಣವಾಗಿದೆ.
ಇನ್ನು, ಬ್ರಾಯ್ಲರ್ ಕೋಳಿಯ ಬೆಲೆ ಕಡಿಮೆ ಆಗಿದ್ದರಿಂದ ಮಾಂಸಾಹಾರ ಅಡುಗೆ ವೆಚ್ಚವೂ ಕಡಿಮೆ ಆಗಿದೆ.
ಇದನ್ನೂ ಓದಿ: ವಿಶ್ವದಲ್ಲಿ ಅತಿಹೆಚ್ಚು ಹೊತ್ತು ಕೆಲಸ ಮಾಡುವವರಲ್ಲಿ ಭಾರತೀಯರು; ಸಿರಿವಂತ ದೇಶಗಳಲ್ಲಿ ಕೆಲಸ ಅವಧಿ ಕಡಿಮೆ
ನವೆಂಬರ್ನಲ್ಲಿ ಅಡುಗೆ ವೆಚ್ಚ ಏರಿಕೆ ಸಾಧ್ಯತೆ
ಕ್ರಿಸಿಲ್ ರಿಸರ್ಚ್ ಪ್ರಕಾರ ನವೆಂಬರ್ನಲ್ಲಿ ಭಾರತದಲ್ಲಿ ಅಡುಗೆ ವೆಚ್ಚ ಹೆಚ್ಚಾಗಲಿದೆ. ಅಡುಗೆ ಅನಿಲ ದರವನ್ನು ಹೆಚ್ಚಿಸಲಾಗಿದೆ. ಈರುಳ್ಳಿ ಬೆಲೆ 100 ರೂಗಿಂತ ಮೇಲಿದೆ. ಇವೆರಡು ಅಂಶಗಳು ಅಡುಗೆ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ