
ನವದೆಹಲಿ, ನವೆಂಬರ್ 27: ಭಾರತ ಮತ್ತು ಚೀನಾ (China) ಸಾಂಸ್ಕೃತಿಕವಾಗಿ ಸಾಮೀಪ್ಯ ಇರುವ ದೇಶಗಳು. ಆದರೆ, ಉದ್ಯಮ ಕ್ಷೇತ್ರಕ್ಕೆ ಬಂದರೆ ಬಹಳ ಅಂತರ ಇದೆ. ಭಾರತದ ಉದ್ಯಮಿಯೊಬ್ಬರು ಎರಡೂ ದೇಶಗಳ ನಡುವೆ ಬ್ಯುಸಿನೆಸ್ ಕ್ಷೇತ್ರದಲ್ಲಿ ಎಂತಹ ವ್ಯತ್ಯಾಸ ಇದೆ ಎಂದು ನಿದರ್ಶನ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಅಪ್ ಅಂಡ್ ರನ್ ಎನ್ನುವ ಕಂಪನಿಯ ಸಂಸ್ಥಾಪಕರಾದ ಚಾಣಕ್ಯ ಶಾ (Chanakya Shah) ಅವರ ಪ್ರಕಾರ ಭಾರತೀಯರಿಗೆ ಹೋಲಿಸಿದರೆ ಚೀನೀಯರು ಹೆಚ್ಚು ಬದ್ಧತೆ ಇರುವ ಜನ. ವೇಗ, ಶಿಸ್ತು ಮತ್ತು ವೃತ್ತಿಪರತೆ ಉಳ್ಳವರು.
‘ಚೈನೀ ವೆಂಡರ್ಗಳು (ಮಾರಾಟಗಾರರು) ಬಹಳ ಚುರುಕು, ಶಿಸ್ತು, ಹಾಗೂ ತಮ್ಮ ಬ್ಯುಸಿನೆಸ್ ಬಗ್ಗೆ ಗಂಭೀರವಾಗಿರುವವರು. ನೀವು ಅವರಿಗೆ ಯಾವುದೇ ದಿನ ಅಥವಾ ಸಮಯ ಮೆಸೇಜ್ ಮಾಡಿದರೂ ಕ್ಷಣಗಳಲ್ಲಿ ಉತ್ತರ ಕೊಡುತ್ತಾರೆ. ಅವರ ಈ ಧೋರಣೆಯು ಇತರ ಜನರಿಗಿಂತ ಅವರನ್ನು ವಿಶೇಷವಾಗಿಸುತ್ತದೆ’ ಎಂದು ಎನರ್ಜಿ ಡ್ರಿಂಕ್ಸ್ ಸೆಕ್ಟರ್ನ ಅಪ್ ಅಂಡ್ ಗೋ ಕಂಪನಿಯ ಸಂಸ್ಥಾಪಕರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿರಳ ಭೂ ಖನಿಜ ಹಿಡಿದು ಅಮೆರಿಕವನ್ನೂ ಬಗ್ಗಿಸುತ್ತಿರುವ ಚೀನಾ; 7,280 ಕೋಟಿ ರೂನ ಭಾರತದ ಪ್ಲಾನ್ ಹಿಂದಿದೆ ದೂರದೃಷ್ಟಿ
‘ಚೀನೀ ಮಾರಾಟಗಾರರಿಂದ ನಿಮಗೆ ಒಳ್ಳೆಯ ಬೆಲೆ, ವೇಗದ ಬೆಂಬಲ ಸಿಗುತ್ತದೆ. ಅವರು ನಿಮ್ಮೊಂದಿಗೆ ಕೆಲಸ ಮಾಡಲು ನಿಜವಾಗಿಯೂ ಬಯಸುತ್ತಾರೆ. ಭಾರತದಲ್ಲಿ ಇದು ಉಲ್ಟಾ. ಇಲ್ಲಿ ಸ್ಪಂದನೆ ಸಿಗುವುದು ನಿಧಾನ. ಕೆಲವೊಮ್ಮೆ ನಿಮಗೆ ರಿಪ್ಲೈ ಬರೋದೇ ಇಲ್ಲ. ಅವರು ನೀಡುವ ಪಟ್ಟಿ ತೀರಾ ಅಸ್ಪಷ್ಟವಾಗಿರುತ್ತದೆ. ಈ ವಿಚಾರದಲ್ಲಿ ಭಾರತೀಯರು ಸುಧಾರಣೆ ಕಂಡರೆ ಬಹಳಷ್ಟು ಸ್ಟಾರ್ಟಪ್ ಸಂಸ್ಥಾಪಕರಿಗೆ ಸಹಾಯವಾಗುತ್ತದೆ. ಭಾರತವನ್ನು ನಿಜವಾಗಿಯೂ ಸ್ವಾವಂಬನೆ ಎಡೆಗೆ ಕೊಂಡೊಯ್ಯಬಹುದು’ ಎಂದು ಚಾಣಕ್ಯ ಶಾ ಅಭಿಪ್ರಾಯಪಟ್ಟಿದ್ದಾರೆ.
ಚಾಣಕ್ಯ ಶಾ ಅವರ ಎಕ್ಸ್ ಪೋಸ್ಟ್
Chinese vendors are quick, disciplined and serious about business. You message them any time or day and they reply in seconds. That attitude gives them a big edge over people who aren’t “go-getters”.
You get better prices, faster support, and they actually want to work with you.… pic.twitter.com/wAAVIOxrkd
— Chanakya (@ChanakyaShah) November 25, 2025
ಅವರ ಈ ಎಕ್ಸ್ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿವೆ. ಹಲವು ಮಂದಿ ಇವರ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಭಾರತದ ಸರಬರಾಜುದಾರರ ಜೊತೆ ಡೀಲ್ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಕೆಲವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್
‘ತಂತ್ರಜ್ಞಾನದಲ್ಲಿ ನಾವು ಖಂಡಿತವಾಗಿ ಚೀನಾಗಿಂತ ಹಿಂದಿದ್ದೇವೆ. ಆದರೆ, ಧೋರಣೆ ಮತ್ತು ಮನೋಭಾವದಲ್ಲೂ ಹಿಂದಿದ್ದೇವೆ. ಯಾವ ಕ್ಲೈಂಟ್ ಆದರೂ ಸಣ್ಣವರೆಂದು ಚೀನೀಯರು ಭಾವಿಸುವುದಿಲ್ಲ. ಡೀಲ್ ಪೂರ್ಣಗೊಳಿಸಲು ಶ್ರಮಿಸುತ್ತಲೇ ಇರುತ್ತಾರೆ’ ಎಂದು ಒಬ್ಬರು ಉತ್ತರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Thu, 27 November 25