ಓಗಿಲ್ವಿ ಸಿಇಒ ಆಗಿ ನೇಮಕಗೊಂಡ ಭಾರತ ಮೂಲದ ದೇವಿಕಾ ಬುಲ್ಚಂದಾನಿ

ಜಾಗತಿಕ ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ ಸಂಸ್ಥೆ ಓಗಿಲ್ವಿಯ ಸಿಇಓ ಆಗಿ ಭಾರತ ಮೂಲದ ದೇವಿಕಾ ಬುಲ್ಚಂದಾನಿ ಅವರು ನೇಮಕಗೊಂಡಿದ್ದಾರೆ. ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿರುವ ಆಂಡಿ ಮೈನ್ ಅವರ ಸ್ಥಾನವನ್ನು ತುಂಬಲಿದ್ದಾರೆ.

ಓಗಿಲ್ವಿ ಸಿಇಒ ಆಗಿ ನೇಮಕಗೊಂಡ ಭಾರತ ಮೂಲದ ದೇವಿಕಾ ಬುಲ್ಚಂದಾನಿ
ಓಗಿಲ್ವಿ ಸಿಇಒ ಆಗಿ ನೇಮಕಗೊಂಡ ಭಾರತ ಮೂಲದ ದೇವಿಕಾ ಬುಲ್ಚಂದಾನಿ
Follow us
TV9 Web
| Updated By: Rakesh Nayak Manchi

Updated on: Sep 09, 2022 | 1:03 PM

ಜಾಗತಿಕ ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ ಸಂಸ್ಥೆ ಓಗಿಲ್ವಿ(Ogilvy)ಯ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO)ಯಾಗಿ ಭಾರತ ಮೂಲದ ದೇವಿಕಾ ಬುಲ್ಚಂದಾನಿ ಅವರು ನೇಮಕಗೊಂಡಿದ್ದಾರೆ. ಬುಲ್ಚಂದಾನಿ ಅವರು ಸದ್ಯ ಸಿಇಓ ಆಗಿರುವ ಆಂಡಿ ಮೈನ್ ಅವರು ನಂತರ ಅಧಿಕಾರವನ್ನು ಹಿಡಿಯಲಿದ್ದಾರೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬುಲ್ಚಂದಾನಿ ಅವರು ಜಾಗತಿಕ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿರುವ ಮೈನ್‌ ಅವರ ಸ್ಥಾನವನ್ನು ತುಂಬಲಿದ್ದು, ವರ್ಷಾಂತ್ಯದವರೆಗೆ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬುಲ್ಚಂದಾನಿ ಅವರು ಸಿಎಓ ಆಗಿ ಅಧಿಕಾರ ವಹಿಸಿದ ನಂತರ 93 ದೇಶಗಳಲ್ಲಿ 131 ಕಛೇರಿಗಳಲ್ಲಿ ಸೃಜನಶೀಲ ನೆಟ್‌ವರ್ಕ್‌ನ ವ್ಯವಹಾರದ ಎಲ್ಲಾ ಅಂಶಗಳಿಗೆ ಜವಾಬ್ದಾರರಾಗಿರುತ್ತಾರೆ. ಅಷ್ಟೇ ಅಲ್ಲದೆ ಅದರ ಜಾಹೀರಾತು, ಸಾರ್ವಜನಿಕ ಸಂಬಂಧಗಳು, ಅನುಭವ, ಸಲಹಾ ಮತ್ತು ಆರೋಗ್ಯ ಘಟಕಗಳು ಇವರ ಅಧಿಕಾರ ವ್ಯಾಪ್ತಿಯಡಿ ಬರಲಿದೆ.

ಓಗಿಲ್ವಿ ಜಾಗತಿಕ ಪ್ರಮುಖ ಮಾರ್ಕೆಟಿಂಗ್ ಮತ್ತು ಸಂವಹನ ಗುಂಪು WPP ಭಾಗವಾಗಿದೆ. ಬುಲ್ಚಂದಾನಿ ಅವರು ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳುತ್ತಿದ್ದಂತೆ WPPನ ಕಾರ್ಯಕಾರಿ ಸಮಿತಿಯನ್ನು ಸಹ ಸೇರಿಕೊಳ್ಳುತ್ತಾರೆ ಎಂದು ಹೇಳಿಕೆ ತಿಳಿಸಿದೆ.

ದೇವಿಕಾ ಅವರು ಉದ್ಯಮದಲ್ಲಿ ದೇವ್ ಎಂದು ಜನಪ್ರಿಯವಾಗಿದ್ದಾರೆ. ಇವರು ತಮ್ಮ ಬಾಲ್ಯ ಮತ್ತು ಪ್ರೌಢಾವಸ್ಥೆಯನ್ನು ಭಾರತದಲ್ಲಿ ಕಳೆದರು. ಡೆಹ್ರಾಡೂನ್‌ನ ವೆಲ್‌ಹ್ಯಾಮ್ ಬಾಲಕಿಯರ ಶಾಲೆಗೆ ಸೇರುವ ಮೊದಲು ಅವರು ಪಂಜಾಬ್‌ನ ಅಮೃತಸರದಲ್ಲಿ ತಮ್ಮ ಆರಂಭಿಕ ದಿನಗಳನ್ನು ಕಳೆದರು. ನಂತರ ಅವರು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಮನೋವಿಜ್ಞಾನದಲ್ಲಿ ಪದವಿ ಪಡೆದರು. ತದನಂತರ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್