ಇವರ ಬಳಿ 20ಕ್ಕೂ ಹೆಚ್ಚು ಮನೆಗಳಿವೆ, ಆದರೂ ಬಾಡಿಗೆ ಮನೆಯಲ್ಲಿ ವಾಸ; ಕಾರಣ ಗೊತ್ತಾ?

Ravi Sharma follows Rentvesting strategy for property investment: ಆಸ್ಟ್ರೇಲಿಯಾದಲ್ಲಿರುವ ಭಾರತ ಮೂಲದ ರವಿ ಶರ್ಮಾ (32 ವರ್ಷ) ಸ್ವಂತ ಕಂಪನಿ ಹೊಂದಿರುವ ವ್ಯಕ್ತಿ. ಇವರು ಆಸ್ಟ್ರೇಲಿಯಾದ ವಿವಿಧೆಡೆ 20ಕ್ಕೂ ಅಧಿಕ ಮನೆಗಳ ಮಾಲೀಕರಾಗಿದ್ದಾರೆ. ಆದರೆ, ಸಿಡ್ನಿ ನಗರದಲ್ಲಿ ಇವರು ಬಾಡಿಗೆ ಮನೆಯಲ್ಲಿದ್ದಾರೆ. ಅದೇ ಸಿಡ್ನಿಯಲ್ಲಿ ಇವರು ಎರಡು ಸ್ವಂತ ಮನೆಗಳನ್ನೂ ಹೊಂದಿದ್ದಾರೆ. ಆದರೂ ಕೂಡ ಬಾಡಿಗೆ ಮನೆಯಲ್ಲಿರೋದು ಯಾಕೆ?

ಇವರ ಬಳಿ 20ಕ್ಕೂ ಹೆಚ್ಚು ಮನೆಗಳಿವೆ, ಆದರೂ ಬಾಡಿಗೆ ಮನೆಯಲ್ಲಿ ವಾಸ; ಕಾರಣ ಗೊತ್ತಾ?
ಮನೆ

Updated on: Feb 18, 2026 | 5:02 PM

ನವದೆಹಲಿ, ಫೆಬ್ರುವರಿ 18: ಮನೆ ಹೊಂದುವುದು ಎಲ್ಲರಿಗೂ ಇರುವ ಕನಸು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಒಂದು ಮನೆ ಕಟ್ಟಿಕೊಂಡರೆ ಸಾಕು ಎನ್ನುವಂತಾಗಿರುತ್ತದೆ. ತಮಗೆ ಸ್ವಂತ ಮನೆಯ ಸಹವಾಸವೇ ಬೇಡ, ಬಾಡಿಗೆ ಮನೆ ಸಾಕು ಎಂದೂ ಹೇಳುವವರಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಭಾರತ ಮೂಲದ ವ್ಯಕ್ತಿಯೊಬ್ಬರು 20ಕ್ಕೂ ಹೆಚ್ಚು ಪ್ರಾಪರ್ಟಿಗಳನ್ನು ಹೊಂದಿದ್ದರೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರಂತೆ. ಇವರ ಹೆಸರು ರವಿ ಶರ್ಮಾ (Ravi Sharma). 32 ವರ್ಷದ ಇವರು ಸರ್ಚ್ ಪ್ರಾಪರ್ಟಿ ಬಯರ್ಸ್ ಏಜೆನ್ಸಿ ಸಂಸ್ಥೆಯ ಸಂಸ್ಥಾಪಕರು.

ರವಿ ಶರ್ಮಾ ಅವರು ಆಸ್ಟ್ರೇಲಿಯಾದ ವಿವಿಧೆಡೆ ಹೊಂದಿರುವ 20ಕ್ಕೂ ಅಧಿಕ ಮನೆಗಳ ಒಟ್ಟು ಮೌಲ್ಯ 25 ಮಿಲಿಯನ್ ಎಯುಡಿ, ಅಥವಾ ಸುಮಾರು 160 ಕೋಟಿ ರೂ. ಆದರೆ, ತಮ್ಮದೇ ಮನೆಗಳನ್ನು ಬಿಟ್ಟು ಇವರು ಸಿಡ್ನಿಯ ಮೆಕ್ವಾರೀ ಪಾರ್ಕ್​ನಲ್ಲಿರುವ ಪ್ರತಿಷ್ಠಿತ ಅಪಾರ್ಟ್ಮೆಂಟ್​ವೊಂದರಲ್ಲಿ ಮೂರು ಬೆಡ್​ರೂಮ್​ಗಳ ಪೆಂಟ್​ಹೌಸ್ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

ಸ್ವಂತ ಮನೆ ಇದ್ದೂ ಬಾಡಿಗೆ ಮನೆಯಲ್ಲಿ ಯಾಕೆ ವಾಸ?

ರವಿ ಶರ್ಮಾ ಅವರು ರೆಂಟ್​ವೆಸ್ಟಿಂಗ್ (Rentvesting) ಎನ್ನುವ ತಂತ್ರ ಬಳಸುತ್ತಾರೆ. ನೀವು ಯಾವ ಏರಿಯಾದಲ್ಲಿ ಇರಬಯಸುತ್ತೀರೋ ಅಲ್ಲಿ ಪ್ರಾಪರ್ಟಿ ದರ ಹೆಚ್ಚಿದ್ದರೆ ಅಂಥ ಕಡೆ ಬಾಡಿಗೆ ಮನೆಯಲ್ಲಿ ವಾಸ ಇರುವುದು ರೆಂಟ್​ವೆಸ್ಟಿಂಗ್ ತಂತ್ರಗಾರಿಕೆ. ಕಡಿಮೆ ಬೆಲೆ ಇರುವ ಕಡೆ ಪ್ರಾಪರ್ಟಿ ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚೆಚ್ಚು ಕಡೆ ರಿಯಲ್ ಎಸ್ಟೇಟ್​ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ.

ಆಸ್ಟ್ರೇಲಿಯಾದಲ್ಲಿ ರೆಂಟ್​ವೆಸ್ಟಿಂಗ್ ತಂತ್ರಗಾರಿಕೆ ಟ್ರೆಂಡಿಂಗ್​ನಲ್ಲಿದೆ. ಸಿಡ್ನಿಯಂತಹ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ ಬಹಳ ಅಧಿಕ ಇದೆ. ಆದರೆ ಇಲ್ಲಿಯೇ ವಾಸಿಸಲು ಜನರು ಇಷ್ಟಪಡುತ್ತಾರೆ. ಹೀಗಾಗಿ, ಸಿಡ್ನಿಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದು, ಬೇರೆ ಪ್ರದೇಶಗಳಲ್ಲಿ ಮನೆ ಖರೀದಿಗೆ ಹೆಚ್ಚು ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ರವಿಶರ್ಮಾ ಅವರ ಈ ಬಾಡಿಗೆ ಮನೆ ತಂತ್ರಗಾರಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ರವಿಶರ್ಮಾ ನಿರ್ಧಾರ ಜಾಣತನದ್ದು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ಮನೆ ಎನ್ನುವುದು ಲಾಭಕ್ಕಾಗಿ ಇರುವುದಲ್ಲ. ಹೆಚ್ಚು ಮನೆಗಳನ್ನು ಹೊಂದಿರುವುದು ಅಕ್ರಮ ಮತ್ತು ಅನೈತಿಕ ಎಂದೂ ಟ್ರೋಲ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ