ನವದೆಹಲಿ, ಡಿಸೆಂಬರ್ 18: ಭಾರತದಲ್ಲಿಇಸ್ರೋಗೆ ಸೀಮಿತವಾಗಿದ್ದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದ ಬಳಿಕ ಸಾಕಷ್ಟು ಸ್ಟಾರ್ಟಪ್ಗಳು ಆರಂಭಗೊಂಡಿವೆ. ವರದಿ ಪ್ರಕಾರ ಹಲವು ಸ್ಟಾರ್ಟಪ್ಗಳಿಗೆ ಸುಲಭವಾಗಿ ಬಂಡವಾಳವೂ ಸಿಕ್ಕುತ್ತಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Union Minister Jitendra Singh) ನೀಡಿರುವ ಮಾಹಿತಿ ಪ್ರಕಾರ ಭಾರತದ ನವೋದ್ದಿಮೆಗಳು (ಸ್ಟಾರ್ಟಪ್) ಈ ಹಣಕಾಸು ವರ್ಷದ (2023-24ರಲ್ಲಿ) 9 ತಿಂಗಳಲ್ಲಿ 1,000 ಕೋಟಿ ರೂಗೂ ಹೆಚ್ಚು ಮೊತ್ತದ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಿವೆಯಂತೆ.
ಭಾರತದ ಈಗಿನ ಸ್ಪೇಸ್ ಎಕನಾಮಿ ಅಥವಾ ಬಾಹ್ಯಾಕಾಶ ಕ್ಷೇತ್ರವು 8 ಬಿಲಿಯನ್ ಡಾಲರ್ ಬಲ ಮಾತ್ರ ಹೊಂದಿದೆ. ಆದರೆ, 2040ರಷ್ಟರಲ್ಲಿ ಆ ಆರ್ಥಿಕತೆಯ ಗಾತ್ರ ಹಲವು ಪಟ್ಟು ಹೆಚ್ಚಾಗಲಿದೆ. ಆರ್ಥರ್ ಡಿ ಲಿಟಲ್ ವರದಿ ಪ್ರಕಾರ ಭಾರತದ ಸ್ಪೇಸ್ ಎಕನಾಮಿ 2040ರಷ್ಟರಲ್ಲಿ 100 ಬಿಲಿಯನ್ ಡಾಲರ್ ಮುಟ್ಟಬಹುದು ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಫೋಸಿಸ್ನಲ್ಲಿ ಸ್ಯಾಲರಿ ಹೈಕ್; ಸರಾಸರಿ ಹೆಚ್ಚಳ ಶೇ. 10ಕ್ಕಿಂತ ಕಡಿಮೆ; ಕೆಳಸ್ತರದವರಿಗೆ ಅದೂ ಇಲ್ಲ
ಇಸ್ರೋ ಈವರೆಗೂ 430ಕ್ಕೂ ಹೆಚ್ಚು ವಿದೇಶೀ ಸೆಟಿಲೈಟ್ಗಳನ್ನು ಆಗಸಕ್ಕೆ ಹೊತ್ತೊಯ್ದಿದೆ. ಯೂರೋಪಿಯನ್ ಸೆಟಿಲೈಟ್ ಉಡಾವಣೆಯಿಂದ 290 ಮಿಲಿಯನ್ ಯೂರೋಗಿಂತಲೂ ಹೆಚ್ಚು ಹಣ ಗಳಿಸಿದೆ. ಅಮೆರಿಕನ್ ಸೆಟಿಲೈಟ್ಗಳ ಉಡಾವಣೆ ಮೂಲಕ 170 ಮಿಲಿಯನ್ ಡಾಲರ್ಗೂ ಹೆಚ್ಚು ಹಣ ಸಂಪಾದಿಸಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದಾರೆ. ಖಾಸಗಿಯವರಿಗೂ ಈ ಕ್ಷೇತ್ರದಲ್ಲಿ ಅವಕಾಶ ಸಿಗುವಂತೆ ಮುಕ್ತಗೊಳಿಸಿದ್ದಾರೆ. ಇದಾದ ಬಳಿಕ ಭಾರತದಲ್ಲಿ ಸ್ಪೇಸ್ ಸ್ಟಾರ್ಟಪ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೇವಲ ನಾಲ್ಕು ವರ್ಷದಲ್ಲಿ ಬಾಹ್ಯಾಕಾಶ ಉದ್ದಿಮೆಗಳ ಸಂಖ್ಯೆ 1,180ಕ್ಕೆ ಹೆಚ್ಚಾಗಿದೆ ಎಂದು ಜಿತೇಂದ್ರ ಸಿಂಗ್ ವಿವರ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ