ಇನ್ಫೋಸಿಸ್​ನಲ್ಲಿ ಸ್ಯಾಲರಿ ಹೈಕ್; ಸರಾಸರಿ ಹೆಚ್ಚಳ ಶೇ. 10ಕ್ಕಿಂತ ಕಡಿಮೆ; ಕೆಳಸ್ತರದವರಿಗೆ ಅದೂ ಇಲ್ಲ

Infosys Salary Hike: ಏಪ್ರಿಲ್​ನಲ್ಲಿ ಸಂಬಳ ಹೆಚ್ಚಳ ಮಾಡಬೇಕಿದ್ದ ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ತಡವಾಗಿ ವೇತನ ಪರಿಷ್ಕರಣೆ ಮಾಡಿದೆ. ವರದಿ ಪ್ರಕಾರ ಪ್ರವೇಶ ಮಟ್ಟದವರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಸಂಬಳ ಹೆಚ್ಚಳ ಆಗಿದೆ. ಸೀನಿಯರ್ ಮ್ಯಾನೇಜ್ಮೆಂಟ್ ಮೇಲಿನವರಿಗೆ ಶೇ. 10ಕ್ಕಿಂತ ತುಸು ಹೆಚ್ಚು ಸಂಬಳ ಹೆಚ್ಚಳವಾಗಿದೆ. ಉಳಿದವರಿಗೆ ಇನ್ನೂ ಕಡಿಮೆ ಇದೆ ಎನ್ನಲಾಗಿದೆ.

ಇನ್ಫೋಸಿಸ್​ನಲ್ಲಿ ಸ್ಯಾಲರಿ ಹೈಕ್; ಸರಾಸರಿ ಹೆಚ್ಚಳ ಶೇ. 10ಕ್ಕಿಂತ ಕಡಿಮೆ; ಕೆಳಸ್ತರದವರಿಗೆ ಅದೂ ಇಲ್ಲ
ಇನ್ಫೋಸಿಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 18, 2023 | 10:24 AM

ಬೆಂಗಳೂರು, ಡಿಸೆಂಬರ್ 18: ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಟೆಕ್ನಾಲಜೀಸ್ (Infosys) ತನ್ನ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಮಾಡಿದೆ. ಕೆಲ ತಿಂಗಳ ಹಿಂದೆಯೇ ಸ್ಯಾಲರಿ ಹೈಕ್ ಆಗಬೇಕಿತ್ತಾದರೂ ಬೇರೆ ಬೇರೆ ಕಾರಣಕ್ಕೆ ವಿಳಂಬಗೊಳ್ಳುತ್ತಾ ಬಂದಿತ್ತು. ಹೆಚ್ಚಿನ ಉದ್ಯೋಗಿಗಳು ಈಗಾಗಲೇ ವೇತನ ಪರಿಷ್ಕರಣೆಯ ಪತ್ರಗಳನ್ನು ಪಡೆದಿದ್ದಾರೆ. ನವೆಂಬರ್ 1ರಿಂದ ಹೊಸ ಸಂಬಳ ಅನ್ವಯ ಆಗಲಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

‘ನಿಮ್ಮ ಬದ್ಧತೆ ಮತ್ತು ಕ್ಷಮತೆಯನ್ನು ಗುರುತಿಸಿ ಸಂಬಳ ಪರಿಷ್ಕರಿಸಲು ಖುಷಿಯಾಗಿದೆ. ನವೆಂಬರ್ 1ರಿಂದ ಇದು ಅನ್ವಯ ಆಗುತ್ತದೆ. ಇವತ್ತಿನ ಸವಾಲುಗಳನ್ನು ಎದುರಿಸಿ ನಿಲ್ಲಲು ಹಾಗೂ ಎಲ್ಲಾ ರೀತಿಯಲ್ಲೂ ಯಶಸ್ಸು ಖಾತ್ರಿಪಡಿಸಲು ನಿಮ್ಮ ಅಸೀಮ ಬೆಂಬಲ ಮತ್ತು ಪ್ರಯತ್ನಗಳಿಗೆ ನಾವು ಧನ್ಯವಾದ ಹೇಳುತ್ತೇವೆ’ ಎಂದು ವೇತನ ಪರಿಷ್ಕರಣೆಯ ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಸಾವರೀನ್ ಗೋಲ್ಡ್ ಬಾಂಡ್: ಗ್ರಾಮ್​ಗೆ 6,199 ರೂ; ಆನ್ಲೈನ್​ನಲ್ಲಿ ಖರೀದಿಸಿದರೆ ಡಿಸ್ಕೌಂಟ್; ಈ ಸ್ಕೀಮ್ ಯಾಕೆ ಬೆಸ್ಟ್?

ಪ್ರವೇಶ ಸ್ತರದ ಉದ್ಯೋಗಗಳಿಗೆ ಇಲ್ಲ ವೇತನ ಪರಿಷ್ಕರಣೆ

ಈಗಿನ ಸಂಬಳ ಹೆಚ್ಚಳವು ಪ್ರವೇಶ ಮಟ್ಟದ ಉದ್ಯೋಗಿಗಳಿಗೆ ಇಲ್ಲ ಎಂಬುದು ತಿಳಿದುಬಂದಿದೆ. ಅಂದರೆ ಇನ್ನೂ ಆರಂಭಿಕ ಹಂತದಲ್ಲಿರುವ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ ಮಾಡಲಾಗಿಲ್ಲ. ಉಳಿದಂತೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಭಾಗ್ಯ ಸಿಕ್ಕಿದೆ. ವರದಿ ಪ್ರಕಾರ, ಸರಾಸರಿ ಸಂಬಳ ಹೆಚ್ಚಳ ಶೇ. 10ಕ್ಕಿಂತಲೂ ಕಡಿಮೆ ಇರುವ ಸಾಧ್ಯತೆ ಇದೆ.

‘ಬಹಳಷ್ಟು ಉದ್ಯೋಗಿಗಳಿಗೆ ಶೇ. 10ಕ್ಕಿಂತಲೂ ಕಡಿಮೆ ಸಂಬಳ ಹೆಚ್ಚಳ ಆಗಿದೆ. ಕೆಲವರಿಗೆ ಶೇ. 10ಕ್ಕಿಂತ ತುಸು ಹೆಚ್ಚ ಸ್ಯಾಲರಿ ಹೈಕ್ ಆಗಿದೆ. ಹೀಗಾಗಿ, ಸರಾಸರಿಯು ಶೇ. 10ಕ್ಕಿಂತಲೂ ಕಡಿಮೆ ಇರಬಹುದು,’ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ: ಹೈಡ್ರೋಜನ್ ಉತ್ಪಾದನೆಗೆ ಬೇಕಾದ ಎಲೆಕ್ಟ್ರೋಲೈಸರ್ ಘಟಕಕ್ಕೆ 21 ಕಂಪನಿಗಳಿಂದ ಬಿಡ್; ಪೈಪೋಟಿಯಲ್ಲಿ ಅಂಬಾನಿ, ಅದಾನಿ, ಜಿಂದಾಲ್

ಬಹಳಷ್ಟು ವಿಳಂಬವಾಗಿ ಆಗಿದೆ ಸಂಬಳ ಹೆಚ್ಚಳ

ಇನ್ಫೋಸಿಸ್​ನಲ್ಲಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲೇ ಸಂಬಳ ಹೆಚ್ಚಳ ಜಾರಿಯಾಗುತ್ತದೆ. ಸೀನಿಯರ್ ಮ್ಯಾನೇಜ್ಮೆಂಟ್ ಮಟ್ಟದಲ್ಲಿರುವವರಿಗೆ ಮಾತ್ರ ಜುಲೈನಲ್ಲಿ ಸ್ಯಾಲರಿ ಪರಿಷ್ಕರಣೆ ಆಗುತ್ತದೆ. ಆದರೆ, ಈ ಬಾರಿ ಮಾತ್ರ ಆರೇಳು ತಿಂಗಳು ವಿಳಂಬವಾಗಿದೆ. ಸಂಬಳ ಹೆಚ್ಚಳವೂ ಏಪ್ರಿಲ್​ಗೆ ಪೂರ್ವಾನ್ವಯ ಆಗುತ್ತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ