Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Economy: ಭಾರತದ ಆರ್ಥಿಕ ವೈಭವದ ಹಾದಿಯಲ್ಲಿ 25 ವರ್ಷದ ಪ್ಲಾನ್ ಸಿದ್ಧ: ಪ್ರಧಾನಿ ಮೋದಿ

Narendra Modi at Surat: ತಾನು ಮೂರನೇ ಅವಧಿಗೆ ಪ್ರಧಾನಿಯಾದರೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡುತ್ತೇನೆ ಎಂದಿದ್ದಾರೆ ಪ್ರಧಾನಿ ಮೋದಿ. ತನ್ನ ಸರ್ಕಾರ ಮುಂದಿನ 25 ವರ್ಷಕ್ಕೆ ಆರ್ಥಿಕ ಬೆಳವಣಿಗೆಗೆ ಗುರಿ ನಿಗದಿ ಮಾಡಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಪ್ರಧಾನಿ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ಡೈಮಂಡ್ ಬೋರ್ಸ್ ಉದ್ಘಾಟನೆ ಮಾಡಿದ ಮೋದಿ, ಇದು ಮೋದಿ ಗ್ಯಾರಂಟಿಯ ಫಲ ಎಂದು ವರ್ಣಿಸಿದ್ದಾರೆ.

Indian Economy: ಭಾರತದ ಆರ್ಥಿಕ ವೈಭವದ ಹಾದಿಯಲ್ಲಿ 25 ವರ್ಷದ ಪ್ಲಾನ್ ಸಿದ್ಧ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2023 | 3:54 PM

ಸೂರತ್, ಡಿಸೆಂಬರ್ 17: ಭಾರತದ ಆರ್ಥಿಕ ಬೆಳವಣಿಗೆಗೆ ಸರ್ಕಾರ ಮುಂದಿನ 25 ವರ್ಷಗಳಿಗೆ ಯೋಜನೆ ಹಾಕಿದೆ. ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್​ನ ಸೂರತ್​ನಲ್ಲಿ ಡೈಮಂಡ್ ಬೋರ್ಸ್ (Surat Diamond Bourse) ಉದ್ಘಾಟನೆ ಮಾಡಿ ಮಾತನಾಡುತ್ತಿದ್ದ ಪ್ರಧಾನಿಗಳು, ಮುಂದಿನ 25 ವರ್ಷಕ್ಕೆ ಗುರಿ ನಿಗದಿ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆಯೋ, 10 ಟ್ರಿಲಿಯನ್ ಡಾಲರ್ ಆರ್ಥಿಕತೆಯೋ ಒಟ್ಟಾರೆ ಮುಂದಿ 25 ವರ್ಷಗಳಿಗೆ ಸರ್ಕಾರ ಗುರಿ ನಿಗದಿ ಮಾಡಲಾಗಿದೆ. ತಾನು ಮೂರನೇ ಅವಧಿಗೆ ಪ್ರಧಾನಿ ಆದರೆ ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡಲು ಬದ್ಧನಾಗಿದ್ದೇನೆ ಎಂದಿದ್ದಾರೆ.

ಮೋದಿ ಗ್ಯಾರಂಟಿ ಎಸ್​ಡಿಬಿ

ಸೂರತ್ ಡೈಮಂಡ್ ಬೋರ್ಸ್ ಅತಿಹೆಚ್ಚು ಕಚೇರಿ ಸ್ಥಳಾವಕಾಶ ಇರುವ ವಿಶ್ವದ ಅತಿದೊಡ್ಡ ಕಟ್ಟಡ ಸಮುಚ್ಚಯವಾಗಿದೆ. ಅಮೆರಿಕದ ಪೆಂಟಗಾನ್​ಗಿಂತಲೂ ಇದು ಬೃಹತ್ತಾದು. ಇಂದು ಡಿ. 17ರಂದು ಮೋದಿ ಈ ಎಸ್​ಜಿಬಿಯ ಉದ್ಘಾಟನೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸೂರತ್ ಡೈಮಂಡ್ ಬೋರ್ಸ್ ಮೋದಿ ಗ್ಯಾರಂಟಿಯಿಂದ ಸೃಷ್ಟಿಯಾಗಿದ್ದು ಎಂದಿದ್ದಾರೆ.

ಇದನ್ನೂ ಓದಿ: ಹೈಡ್ರೋಜನ್ ಉತ್ಪಾದನೆಗೆ ಬೇಕಾದ ಎಲೆಕ್ಟ್ರೋಲೈಸರ್ ಘಟಕಕ್ಕೆ 21 ಕಂಪನಿಗಳಿಂದ ಬಿಡ್; ಪೈಪೋಟಿಯಲ್ಲಿ ಅಂಬಾನಿ, ಅದಾನಿ, ಜಿಂದಾಲ್

ಸೂರತ್ ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಟಾಪ್-10 ನಗರಗಳಲ್ಲಿ ಒಂದು. ಸೂರತ್​ನ ಸ್ಟ್ರೀಟ್ ಫುಡ್, ಕೌಶಲ್ಯ ಅಭಿವೃದ್ಧಿ ಕೆಲಸ ಎಲ್ಲವೂ ಅದ್ಭುತ. ಒಂದು ಕಾಲದಲ್ಲಿ ಸೂರತ್ ಅನ್ನು ಸೂರ್ಯ ನಗರಿ ಎನ್ನುತ್ತಿದ್ದರು. ಇವತ್ತು ಇಲ್ಲಿನ ಜನರು ತಮ್ಮ ಪರಿಶ್ರಮದಿಂದ ಸೂರತ್ ಅನ್ನು ಡೈಮಂಡ್ ನಗರಿಯನ್ನಾಗಿ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸೂರತ್ ಜನತೆಯನ್ನು ಕೊಂಡಾಡಿದ್ದಾರೆ.

ಮುಂಬೈನಲ್ಲಿ ಡೈಮಂಡ್ ಮಾರಾಟ ಕೇಂದ್ರ ಇತ್ತಾದರೂ ಡೈಮಂಡ್ ಮಾರುಕಟ್ಟೆ ಸೂರತ್​ನಲ್ಲೇ ಇರುವುದು. ಡೈಮಂಡ್ ಪಾಲಿಶಿಂಗ್ ಇತ್ಯಾದಿ ಸಂಬಂಧಿತ ಉದ್ಯಮವೆಲ್ಲವೂ ಸೂರತ್​ನಲ್ಲೇ ನೆಲಸಿದೆ. ಮೋದಿ ಹೇಳಿದ ಪ್ರಕಾರ ಈ ಉದ್ಯಮವು 8 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಈಗ ಸೂರತ್ ಡೈಂಡ್ ಬೋರ್ಸ್ ಆರಂಭವಾದ ಬಳಿಕ ಒಂದೂವರೆ ಲಕ್ಷ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಇದನ್ನೂ ಓದಿ: ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ: ನರೇಂದ್ರ ಮೋದಿ

ಸೂರತ್​ನ ಡ್ರೀಮ್ ಸಿಟಿಯೊಳಗೆ 35 ಎಕರೆ ಜಾಗದಲ್ಲಿ ಸೂರತ್ ಡೈಮಂಡ್ ಬೋರ್ಸ್ ಕಟ್ಟಲಾಗಿದೆ. ಒಂಬತ್ತು ಟವರ್​ಗಳ ಸಮುಚ್ಚಯ ಇದಾಗಿದೆ. ಒಂದೊಂದು ಟವರ್ ಕೂಡ 15 ಮಹಡಿಯ ಕಟ್ಟಡವಾಗಿದೆ. ಒಟ್ಟು 4,200ಕ್ಕೂ ಹೆಚ್ಚು ಕಚೇರಿಗಳಿಗೆ ಸ್ಥಳಾವಕಾಶ ಇದೆ. ಒಂದೊಂದು ಕಚೇರಿಯೂ ಕೂಡ 300ರಿಂದ 1 ಲಕ್ಷ ಚದರ ಅಡಿಯ ವಿಸ್ತೀರ್ಣದ್ದಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ