ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸತತ ಎರಡನೇ ಸೆಷನ್ನಲ್ಲಿಯೂ ಸೆಪ್ಟೆಂಬರ್ 20, 2021ರ ಸೋಮವಾರ ಇಳಿಕೆ ಕಂಡವು. ಲೋಹದ ಕಂಪೆನಿ ಸ್ಟಾಕ್ಗಳಲ್ಲಿ ಕುಸಿತವು ಈ ಇಳಿಕೆಗೆ ದೊಡ್ಡ ಕೊಡುಗೆ ನೀಡಿತು. ಈ ವಾರದಲ್ಲಿ ವಿವಿಧ ಕೇಂದ್ರ ಬ್ಯಾಂಕ್ಗಳ ಸಭೆ ಇರುವುದರಿಂದ ಹೂಡಿಕೆದಾರರು ಸಹ ಬಹಳ ಎಚ್ಚರಿಕೆಯಿಂದ ಇದ್ದಾರೆ. ಸೋಮವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 524.96 ಪಾಯಿಂಟ್ಸ್ ಅಥವಾ ಶೇ 0.89ರಷ್ಟು ಇಳಿಕೆ ಕಂಡು, 58,490.93 ಪಾಯಿಂಟ್ಸ್ನಲ್ಲಿ ವ್ಯವಹಾರ ಚುಕ್ತಾ ಮಾಡಿದೆ ಹಾಗೂ ನಿಫ್ಟಿ 188.30 ಪಾಯಿಂಟ್ಸ್ ಅಥವಾ ಶೇ 1.07ರಷ್ಟು ಕುಸಿದು, ವಹಿವಾಟು ಮುಗಿಸಿದೆ. “ಭಾರೀ ಏರಿಳಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ದೌರ್ಬಲ್ಯ, ಲೋಹ ಮತ್ತು ಪಿಎಸ್ಯು ಬ್ಯಾಂಕ್ಗಳಲ್ಲಿ ಕರಡಿ (ಬೇರ್) ಹಿಡಿತದಿಂದಾಗಿ ಮಾರುಕಟ್ಟೆ ಇಳಿಕೆ ಕಾಣುವಂತಾಯಿತು,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ವ್ಯವಹಾರ ನಡೆಸುತ್ತಿದ್ದಾರೆ. ಅಮೆರಿಕದ ದುರ್ಬಲ ಉದ್ಯೋಗ ಡೇಟಾ, ಹಣದುಬ್ಬರದಲ್ಲಿನ ಇಳಿಕೆ, ಅಮೆರಿಕ ಕೇಂದ್ರ ಬ್ಯಾಂಕ್ನ ಹಣಕಾಸು ನೀತಿಯ ನಿರೀಕ್ಷೆ ಇವೆಲ್ಲವೂ ಇಂದಿನ ವ್ಯವಹಾರದ ಮೇಲೆ ಪರಿಣಾಮವನ್ನು ಬೀರಿದೆ. ಬಿಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಹತ್ತಿರ ಹತ್ತಿರ ತಲಾ 2 ಪರ್ಸೆಂಟ್ನಷ್ಟು ಕುಸಿದವು. ಎಫ್ಎಂಸಿಜಿ ಹೊರತುಪಡಿಸಿ, ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲೇ ಕೊನೆಗೊಂಡವು ಲೋಹದ ಸೂಚ್ಯಂಕ ಹತ್ತಿರಹತ್ತಿರ ಶೇ 7ರಷ್ಟು ಕುಸಿತ ಕಂಡಿತು. ವಾಹನ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್, ತೈಲ ಮತ್ತು ಅನಿಲ, ಪವರ್ ಹಾಗೂ ರಿಯಾಲ್ಟಿ ಸೂಚ್ಯಂಕ ಶೇ 1ರಿಂದ 2ರಷ್ಟು ಕುಸಿದವು. ಕೆಲ ಮಟ್ಟಿಗೆ ಎಫ್ಎಂಸಿಜಿ ಸ್ಟಾಕ್ಗಳಲ್ಲಿ ಖರೀದಿ ಕಂಡುಬಂತು.
ಇನ್ನು ಝೀ ಎಂಟರ್ಟೇನ್ಮೆಂಟ್, ಇಂಡಿಯನ್ ಹೋಟೆಲ್ಸ್ ಮತ್ತು ಪಿವಿಆರ್ ಕಂಪೆನಿ ಷೇರುಗಳ ವಾಲ್ಯೂಮ್ ಶೇ 500ಕ್ಕೂ ಜಾಸ್ತಿ ಇತ್ತು. ಡಾಬರ್, ಐಟಿಸಿ, ಲಾರ್ಸನ್ ಅಂಡ್ ಟೂಬ್ರೋ ಇನ್ಫೋಟೆಕ್ ಮತ್ತು ಟೆಕ್ ಮಹೀಂದ್ರಾ ಸೇರಿ 200 ಸ್ಟಾಕ್ಗಳು ಬಿಎಸ್ಇಯಲ್ಲಿ ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಹಿಂದೂಸ್ತಾನ್ ಯುನಿಲಿವರ್ ಶೇ 2.87
ಐಟಿಸಿ ಶೇ 1.12
ಬಜಾಜ್ ಫಿನ್ಸರ್ವ್ ಶೇ 1.06
ಎಚ್ಸಿಎಲ್ ಟೆಕ್ ಶೇ 1.02
ಬ್ರಿಟಾನಿಯಾ ಶೇ 0.81
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟಾಟಾ ಸ್ಟೀಲ್ ಶೇ -9.58
ಜೆಎಸ್ಡಬ್ಲ್ಯು ಸ್ಟೀಲ್ ಶೇ -7.20
ಹಿಂಡಾಲ್ಕೋ ಶೇ -6.06
ಯುಪಿಎಲ್ ಶೇ -4.95
ಎಸ್ಬಿಐ ಶೇ -3.67
ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?
(Indian Stock Market In Bear Grip Sensex Down By More Than 500 Points And Nifty 188 Points)