Stock Market: ಎರಡು ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ 5.31 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

ಷೇರು ಮಾರುಕಟ್ಟೆಯಲ್ಲಿ ಕಳೆದ ಎರಡು ದಿನದಲ್ಲಿ 5.31 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಯಾವುದರಲ್ಲಿ ಎಷ್ಟು ನಷ್ಟ ಎಂಬುದರ ವಿವರ ಇಲ್ಲಿದೆ.

Stock Market: ಎರಡು ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ 5.31 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 20, 2021 | 11:47 PM

ವಿದೇಶೀ ಮಾರುಕಟ್ಟೆಯಲ್ಲಿನ ಟ್ರೆಂಡ್ ಮಧ್ಯೆಯೇ ಹೂಡಿಕೆದಾರರ ಸಂಪತ್ತು ಕೇವಲ ಎರಡು ದಿನಗಳಲ್ಲಿ ಈಕ್ವಿಟಿ ಮಾರುಕಟ್ಟೆ ಕುಸಿತದಲ್ಲಿ 5.31 ಲಕ್ಷ ಕೋಟಿ ರುಪಾಯಿಗಳಷ್ಟು ಕುಸಿದಿದೆ. ಸೋಮವಾರ (ಸೆಪ್ಟೆಂಬರ್​ 20, 2021) ಸತತ ಎರಡನೇ ಸೆಷನ್​ನಲ್ಲಿ ಇಳಿಕೆ ಕಂಡು, ಬಿಎಸ್‌ಇ ಸೆನ್ಸೆಕ್ಸ್ 58,490.93ಕ್ಕೆ ಬಂದಿದ್ದು, 524.96 ಪಾಯಿಂಟ್ಸ್​ಗಳು ಅಥವಾ ಶೇ 0.89ಕ್ಕೆ ಕುಸಿದಿದೆ. ಈ ಮಧ್ಯೆ, ಇಂದು 626.2 ಪಾಯಿಂಟ್‌ಗಳ ಕುಸಿತದೊಂದಿಗೆ 58,389.69ಕ್ಕೆ ತಲುಪಿತ್ತು. ಈ ಹಿಂದಿನ ಸೆಷನ್​ನಲ್ಲಿ ಇದು 59,015.89ಕ್ಕೆ ಇತ್ತು. 125.27 ಪಾಯಿಂಟ್ಸ್​ಗಳು ಅಥವಾ ಶೇ 0.21ರಷ್ಟು ಇಳಿದಿತ್ತು. ದುರ್ಬಲ ಟ್ರೆಂಡ್​ ಅನುಸರಿಸಿ, ಬಿಎಸ್‌ಇ-ಲಿಸ್ಟೆಡ್​ ಕಂಪೆನಿಗಳ ಮಾರುಕಟ್ಟೆ ಬಂಡವಾಳವು ಎರಡು ದಿನಗಳಲ್ಲಿ 5,31,261.2 ಕೋಟಿ ರೂಪಾಯಿಗಳಷ್ಟು ಕುಸಿದು, 2,55,47,093.92 ಕೋಟಿ ರೂಪಾಯಿಗೆ ತಲುಪಿತು.

ಈ ಟ್ರೆಂಡ್​ ಕುರಿತು ಪ್ರತಿಕ್ರಿಯಿಸಿದ ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್, “ಹೆಚ್ಚಿನ ಏರಿಳಿತ ಮತ್ತು ದುರ್ಬಲ ಜಾಗತಿಕ ಭಾವನೆಗಳ ನಂತರ, ದೇಶೀಯ ಮಾರುಕಟ್ಟೆಯು ಲೋಹ ಮತ್ತು ಪಿಎಸ್‌ಯು ಬ್ಯಾಂಕ್​ಗಳ ಕರಡಿ ಹಿಡಿತದಲ್ಲಿ ಕೊನೆಗೊಂಡಿತು”. “ಜಾಗತಿಕ ಮಾರುಕಟ್ಟೆಗಳು ಋಣಾತ್ಮಕ ವಹಿವಾಟು ನಡೆಸಿದ್ದು, ಹೂಡಿಕೆದಾರರು ಈ ವಾರ ನಿಗದಿಯಾಗಿದ್ದ ಹಲವು ಕೇಂದ್ರೀಯ ಬ್ಯಾಂಕ್ ನೀತಿ ಸಭೆಗಳಿಗಿಂತ ಮುಂಚಿತವಾಗಿ ಜಾಗರೂಕರಾಗಿದ್ದಾರೆ,” ಎನ್ನಲಾಗಿದೆ.

ಸೂಚ್ಯಂಕದಲ್ಲಿ ಅತಿದೊಡ್ಡ ಪ್ರಮಾಣದ ನಷ್ಟ ಟಾಟಾ ಸ್ಟೀಲ್ ಕಂಡಿದ್ದು, ಶೇ 9.53ರಷ್ಟು ಕುಸಿದಿದೆ. ಅದರ ನಂತರ ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಕುಸಿದಿದೆ. ಈ ಮಧ್ಯೆ, ಎಚ್‌ಯುಎಲ್, ಬಜಾಜ್ ಫಿನ್‌ಸರ್ವ್, ಐಟಿಸಿ, ಎಚ್‌ಸಿಎಲ್ ಟೆಕ್, ನೆಸ್ಲೆ ಇಂಡಿಯಾ, ಬಜಾಜ್ ಫೈನಾನ್ಸ್ ಮತ್ತು ಆರ್‌ಐಎಲ್ ಗಳಿಕೆ ಕಂಡಿತು. ವಲಯವಾರು, ಬಿಎಸ್‌ಇ ಲೋಹ, ಮೂಲ ವಸ್ತುಗಳು, ರಿಯಾಲ್ಟಿ, ವಿದ್ಯುತ್ ಮತ್ತು ಯುಟಿಲಿಟಿ ಸೂಚ್ಯಂಕಗಳು ಶೇ 6.80ರ ವರೆಗೂ ಇಳಿಕೆಯಾಗಿದ್ದು, ಎಫ್‌ಎಂಸಿಜಿ ಹೆಚ್ಚಿನ ಮಟ್ಟದಲ್ಲಿ ಕೊನೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ 1.84ರ ವರೆಗೂ ಇಳಿದವು.

ಜೂಲಿಯಸ್ ಬೇರ್ ಕಾರ್ಯನಿರ್ವಾಹಕ ನಿರ್ದೇಶಕ ಮಿಲಿಂದ್ ಮುಚಾಲಾ ಮಾತನಾಡಿ, “ಜಾಗತಿಕ ಹೂಡಿಕೆದಾರರ ಮನಸ್ಸಿನಲ್ಲಿ ಆಡುವ ಎರಡು ಪ್ರಮುಖ ಅಂಶಗಳು ಮುಂಬರುವ ಫೆಡ್ ಮೀಟಿಂಗ್ ಮತ್ತು ಚೀನಾದ ಪ್ರಮುಖ ಆಸ್ತಿ ಮಾರಾಟಗಾರ ಕಂಪೆನಿಯ ಮೇಲೆ ಒತ್ತಡ ಬಂದಿದ್ದರಿಂದ ಅಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ನಿರ್ಮಾಣ ಆಗಿದೆ,” ಎಂದಿದ್ದಾರೆ.

ಇದನ್ನೂ ಓದಿ: Closing Bell: ಕರಡಿ ಹಿಡಿತಕ್ಕೆ ನಲುಗಿದ ಷೇರುಪೇಟೆ; ಸೆನ್ಸೆಕ್ಸ್ 524 ಪಾಯಿಂಟ್ಸ್, ನಿಫ್ಟಿ 188 ಪಾಯಿಂಟ್ಸ್ ಕುಸಿತ

(Stock Market Investors Lost Rs 5.31 Lakh Crores In Two Days Here Is The Details)

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ