Closing Bell: ಕರಡಿ ಹಿಡಿತಕ್ಕೆ ನಲುಗಿದ ಷೇರುಪೇಟೆ; ಸೆನ್ಸೆಕ್ಸ್ 524 ಪಾಯಿಂಟ್ಸ್, ನಿಫ್ಟಿ 188 ಪಾಯಿಂಟ್ಸ್ ಕುಸಿತ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ ಭಾರೀ ಇಳಿಕೆಯನ್ನು ಕಂಡಿವೆ. ಇದರ ಹಿಂದಿನ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

Closing Bell: ಕರಡಿ ಹಿಡಿತಕ್ಕೆ ನಲುಗಿದ ಷೇರುಪೇಟೆ; ಸೆನ್ಸೆಕ್ಸ್ 524 ಪಾಯಿಂಟ್ಸ್, ನಿಫ್ಟಿ 188 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 20, 2021 | 5:44 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸತತ ಎರಡನೇ ಸೆಷನ್​ನಲ್ಲಿಯೂ ಸೆಪ್ಟೆಂಬರ್ 20, 2021ರ ಸೋಮವಾರ ಇಳಿಕೆ ಕಂಡವು. ಲೋಹದ ಕಂಪೆನಿ ಸ್ಟಾಕ್​ಗಳಲ್ಲಿ ಕುಸಿತವು ಈ ಇಳಿಕೆಗೆ ದೊಡ್ಡ ಕೊಡುಗೆ ನೀಡಿತು. ಈ ವಾರದಲ್ಲಿ ವಿವಿಧ ಕೇಂದ್ರ ಬ್ಯಾಂಕ್​ಗಳ ಸಭೆ ಇರುವುದರಿಂದ ಹೂಡಿಕೆದಾರರು ಸಹ ಬಹಳ ಎಚ್ಚರಿಕೆಯಿಂದ ಇದ್ದಾರೆ. ಸೋಮವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 524.96 ಪಾಯಿಂಟ್ಸ್ ಅಥವಾ ಶೇ 0.89ರಷ್ಟು ಇಳಿಕೆ ಕಂಡು, 58,490.93 ಪಾಯಿಂಟ್ಸ್​ನಲ್ಲಿ ವ್ಯವಹಾರ ಚುಕ್ತಾ ಮಾಡಿದೆ ಹಾಗೂ ನಿಫ್ಟಿ 188.30 ಪಾಯಿಂಟ್ಸ್​ ಅಥವಾ ಶೇ 1.07ರಷ್ಟು ಕುಸಿದು, ವಹಿವಾಟು ಮುಗಿಸಿದೆ. “ಭಾರೀ ಏರಿಳಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ದೌರ್ಬಲ್ಯ, ಲೋಹ ಮತ್ತು ಪಿಎಸ್​ಯು ಬ್ಯಾಂಕ್​ಗಳಲ್ಲಿ ಕರಡಿ (ಬೇರ್​) ಹಿಡಿತದಿಂದಾಗಿ ಮಾರುಕಟ್ಟೆ ಇಳಿಕೆ ಕಾಣುವಂತಾಯಿತು,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ವ್ಯವಹಾರ ನಡೆಸುತ್ತಿದ್ದಾರೆ. ಅಮೆರಿಕದ ದುರ್ಬಲ ಉದ್ಯೋಗ ಡೇಟಾ, ಹಣದುಬ್ಬರದಲ್ಲಿನ ಇಳಿಕೆ, ಅಮೆರಿಕ ಕೇಂದ್ರ ಬ್ಯಾಂಕ್​ನ ಹಣಕಾಸು ನೀತಿಯ ನಿರೀಕ್ಷೆ ಇವೆಲ್ಲವೂ ಇಂದಿನ ವ್ಯವಹಾರದ ಮೇಲೆ ಪರಿಣಾಮವನ್ನು ಬೀರಿದೆ. ಬಿಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್​ ಸೂಚ್ಯಂಕಗಳು ಹತ್ತಿರ ಹತ್ತಿರ ತಲಾ 2 ಪರ್ಸೆಂಟ್​ನಷ್ಟು ಕುಸಿದವು. ಎಫ್​ಎಂಸಿಜಿ ಹೊರತುಪಡಿಸಿ, ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲೇ ಕೊನೆಗೊಂಡವು ಲೋಹದ ಸೂಚ್ಯಂಕ ಹತ್ತಿರಹತ್ತಿರ ಶೇ 7ರಷ್ಟು ಕುಸಿತ ಕಂಡಿತು. ವಾಹನ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್, ತೈಲ ಮತ್ತು ಅನಿಲ, ಪವರ್ ಹಾಗೂ ರಿಯಾಲ್ಟಿ ಸೂಚ್ಯಂಕ ಶೇ 1ರಿಂದ 2ರಷ್ಟು ಕುಸಿದವು. ಕೆಲ ಮಟ್ಟಿಗೆ ಎಫ್​ಎಂಸಿಜಿ ಸ್ಟಾಕ್​ಗಳಲ್ಲಿ ಖರೀದಿ ಕಂಡುಬಂತು.

ಇನ್ನು ಝೀ ಎಂಟರ್​ಟೇನ್​ಮೆಂಟ್, ಇಂಡಿಯನ್ ಹೋಟೆಲ್ಸ್ ಮತ್ತು ಪಿವಿಆರ್ ಕಂಪೆನಿ ಷೇರುಗಳ ವಾಲ್ಯೂಮ್ ಶೇ 500ಕ್ಕೂ ಜಾಸ್ತಿ ಇತ್ತು. ಡಾಬರ್, ಐಟಿಸಿ, ಲಾರ್ಸನ್ ಅಂಡ್ ಟೂಬ್ರೋ ಇನ್ಫೋಟೆಕ್ ಮತ್ತು ಟೆಕ್​ ಮಹೀಂದ್ರಾ ಸೇರಿ 200 ಸ್ಟಾಕ್​ಗಳು ಬಿಎಸ್​ಇಯಲ್ಲಿ ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಹಿಂದೂಸ್ತಾನ್ ಯುನಿಲಿವರ್ ಶೇ 2.87 ಐಟಿಸಿ ಶೇ 1.12 ಬಜಾಜ್ ಫಿನ್​ಸರ್ವ್​ ಶೇ 1.06 ಎಚ್​ಸಿಎಲ್​ ಟೆಕ್ ಶೇ 1.02 ಬ್ರಿಟಾನಿಯಾ ಶೇ 0.81

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಟಾಟಾ ಸ್ಟೀಲ್ ಶೇ -9.58 ಜೆಎಸ್​ಡಬ್ಲ್ಯು ಸ್ಟೀಲ್ ಶೇ -7.20 ಹಿಂಡಾಲ್ಕೋ ಶೇ -6.06 ಯುಪಿಎಲ್​ ಶೇ -4.95 ಎಸ್​ಬಿಐ ಶೇ -3.67

ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್​ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?

(Indian Stock Market In Bear Grip Sensex Down By More Than 500 Points And Nifty 188 Points)

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್