Sensex Today: ಭಾರತದ ಷೇರುಮಾರುಕಟ್ಟೆಗೆ ಈ ವಾರ ಶುಭಾರಂಭ; ಬ್ಯಾಂಕ್ ಮತ್ತು ಆಟೊಮೊಬೈಲ್ ಕಂಪನಿಗಳ ಷೇರುಗಳಿಗೆ ಭರ್ಜರಿ ಬೇಡಿಕೆ

|

Updated on: Jun 05, 2023 | 10:58 AM

Stock Markets Gain On June 5th Morning Trade: 30 ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ ಮತ್ತು 50 ಷೇರುಗಳ ನಿಫ್ಟಿ ಸೂಚ್ಯಂಕ ಜೂನ್ 5ರ ವಹಿವಾಟಿನಲ್ಲಿ ಉತ್ತಮ ಏರಿಕೆ ಪಡೆದಿವೆ. ಇಲ್ಲಿ ಮಾತ್ರವಲ್ಲ ಏಷ್ಯಾದ ಇತರ ಷೇರುಮಾರುಕಟ್ಟೆಗಳಲ್ಲೂ ಅಂಕಗಳು ಏರಿವೆ.

Sensex Today: ಭಾರತದ ಷೇರುಮಾರುಕಟ್ಟೆಗೆ ಈ ವಾರ ಶುಭಾರಂಭ; ಬ್ಯಾಂಕ್ ಮತ್ತು ಆಟೊಮೊಬೈಲ್ ಕಂಪನಿಗಳ ಷೇರುಗಳಿಗೆ ಭರ್ಜರಿ ಬೇಡಿಕೆ
ಷೇರುಮಾರುಕಟ್ಟೆ
Follow us on

ಮುಂಬೈ: ಇಂದು ಸೋಮವಾರ ಬೆಳಗಿನ ವಹಿವಾಟಿನಲ್ಲಿ ಭಾರತದ ಷೇರುಮಾರುಕಟ್ಟೆಗಳು (Stock Markets) ಗರಿಗೆದರಿವೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ (30-Share BSE Sensex) 367 ಅಂಕಗಳನ್ನು ಗಳಿಸಿದರೆ, ನಿಫ್ಟಿ50 ಇಂಡೆಕ್ಸ್ 90 ಪಾಯಿಂಟ್​ಗಳಷ್ಟು ಹೆಚ್ಚಿಸಿಕೊಂಡಿದೆ. 30 ಕಂಪನಿಗಳ ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ 62,915 ಅಂಕಗಳಲ್ಲಿದ್ದು, 63 ಸಾವಿರ ಗಡಿ ಮುಟ್ಟುವ ಸನ್ನಾಹದಲ್ಲಿದೆ. ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ 18,625 ಅಂಕಗಳಿಗೆ ಏರಿದೆ. ಆಟೊಮೊಬೈಲ್ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಹಲವು ಕಂಪನಿಗಳ ಷೇರುಗಳಿಗೆ ಇಂದು ಬೇಡಿಕೆ ಬಂದಿದೆ.

ಟೆಕ್ ಮಹೀಂದ್ರ, ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್, ಇಂಡಸ್​ಇಂಡ್ ಬ್ಯಾಂಕ್ ಇತ್ಯಾದಿ ಷೇರುಗಳು ಹಿನ್ನಡೆ ಕಂಡಿವೆ. ಇದು ಬಿಟ್ಟರೆ ಉಳಿದಂತೆ ಸೆನ್ಸೆಕ್ಸ್​ನಲ್ಲಿ 15ಕ್ಕೂ ಹೆಚ್ಚು ಷೇರುಗಳು ಸಕಾರಾತ್ಮಕ ಸ್ಪಂದನೆ ಪಡೆದಿವೆ. ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫೈನ್​ಸರ್ವ್, ಎಚ್​ಡಿಎಫ್​ಸಿ, ಎಸ್​ಬಿಐ, ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿವೆ. ಇಂಡಸ್​ಇಂಡ್ ಬ್ಯಾಂಕ್ ಷೇರುಗಳು ಸಂಜೆಯ ವೇಳೆಗೆ ಪಾಸಿಟಿವ್ ಪಟ್ಟಿಗೆ ಸೇರುವ ನಿರೀಕ್ಷೆ ಇದೆ.

ಇದನ್ನೂ ಓದಿGiga Factory: ಭಾರತದಲ್ಲಿ ಮೊದಲ ಬಾರಿಗೆ ಲಿಥಿಯಮ್ ಅಯಾನ್ ಸೆಲ್ ತಯಾರಿಕೆ; ಟಾಟಾದಿಂದ ಗೀಗಾ ಫ್ಯಾಕ್ಟರಿ ಸ್ಥಾಪನೆಗೆ ಒಪ್ಪಂದ

ಎನ್​ಟಿಪಿಸಿ, ಪವರ್​ಗ್ರಿಡ್ ಕಾರ್ಪೊರೇಷನ್, ಟೈಟಾನ್, ಮಾರುತಿ, ಇನ್ಫೋಸಿಸ್, ಸನ್​ಫಾರ್ಮಾ, ರಿಲಾಯನ್ಸ್, ವಿಪ್ರೋ, ಅಲ್ಟ್ರಾಟೆಕ್, ಹೆಚ್​ಸಿಎಲ್ ಟೆಕ್, ಐಟಿಸಿ ಮೊದಲಾದ ಕಂಪನಿಗಳ ಷೇರುಗಳೂ ಉತ್ತಮವಾಗಿ ವಹಿವಾಟು ಕಾಣುತ್ತಿವೆ.

ಷೇರುಪೇಟೆ ಮಿಂಚಲು ಅಮೆರಿಕದ ಬೆಳವಣಿಗೆ ಕಾರಣವಾ?

ಅಮೆರಿಕವನ್ನು ಸಾಲದ ಸುಳಿಯಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ಸಹಾಯವಾಗುವಂತೆ ಅಲ್ಲಿನ ಸರ್ಕಾರ ಕಳೆದ ವಾರಾಂತ್ಯದಲ್ಲಿ ಡೆಟ್ ಸೀಲಿಂಗ್ ಅನ್ನು ತೆರವುಗಳಿಸುವ ಶಾಸನಕ್ಕೆ ಅನುಮೋದನೆ ಕೊಟ್ಟಿತು. ಈ ಬೆಳವಣಿಗೆ ಆದ ಬೆನ್ನಲ್ಲೇ ಅಮೆರಿಕದ ಷೇರುಪೇಟೆಗಳು ಗರಿಗೆದರಿ ನಿಂತವು. ಜಾಗತಿಕ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್ ಬೆಲೆ ಶೇ. 1.17ರಷ್ಟು ಹೆಚ್ಚಿತು. ಬ್ರೆಂಟ್ ಕ್ರೂಡ್​ನಲ್ಲಿ ಒಂದು ಬ್ಯಾರಲ್ ಕಚ್ಛಾತೈಲದ ಬೆಲೆ 77.02 ಡಾಲರ್ ಇತ್ತು.

ಇದನ್ನೂ ಓದಿHiring Tips: ಯಾರನ್ನು ಹೈರಿಂಗ್ ಮಾಡಿಕೊಳ್ಳಬೇಕು? ಇಂಥವರು ಬೇಡ… 4 ನೇಮಕಾತಿ ಸೂತ್ರ ಬಿಚ್ಚಿಟ್ಟ ನೆಟ್​ಫ್ಲಿಕ್ಸ್ ಒಡೆಯ ಮಾರ್ಕ್ ರಾಂಡೋಲ್ಫ್

ಇದು ವಿಶ್ವದ ಇತರ ಪ್ರಮುಖ ಷೇರುಮಾರುಕಟ್ಟೆಗಳ ಮೇಲೆ ಪಾಸಿಟಿವ್ ಪರಿಣಾಮ ಬೀರಿದೆ. ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜಪಾನ್, ಚೀನಾ ಮತ್ತು ಹಾಂಕಾಂಗ್​ನಲ್ಲಿರುವ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ.

ಈ ವಾರ ಸೋನಾಲಿಸ್ ಕನ್ಸೂಮರ್ ಪ್ರಾಡಕ್ಟ್ಸ್ ಐಪಿಒ

ನ್ಯೂಟ್ರಿಷನ್ ಬಾರ್ ಮತ್ತು ಹೆಲ್ತಿ ಸ್ನ್ಯಾಕ್ಸ್ ಉತ್ಪನ್ನಗಳ ವಿತರಕ ಸಂಸ್ಥೆ ಸೋನಾಲಿಸ್ ಕನ್ಸೂಮರ್ ಪ್ರಾಡಕ್ಟ್ಸ್ ಈ ವಾರ ಐಪಿಒಗೆ ತೆರೆದುಕೊಳ್ಳುತ್ತಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾದ ಮಾರುಕಟ್ಟೆಗಳಲ್ಲಿ ಸದ್ಯ ಚಾಲನೆಯಲ್ಲಿರುವ ಈ ಕಂಪನಿಯ ಐಪಿಒ ಜೂನ್ 7ರಂದು ಆರಂಭವಾಗಲಿದ್ದು ಜೂನ್ 9ರವರೆಗೂ ಇರಲಿದೆ. 2.83 ಕೋಟಿ ರೂ ಬಂಡವಾಳ ಸಂಗ್ರಹಿಸುವ ಗುರಿಯೊಂದಿಗೆ ಕಂಪನಿಯು ಐಪಿಒನಲ್ಲಿ 9.44 ಲಕ್ಷ ಷೇರುಗಳನ್ನು ಮಾರುತ್ತಿದೆ. ಇದರ ಒಂದು ಷೇರು ಬೆಲೆ 30 ರೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ