AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Giga Factory: ಭಾರತದಲ್ಲಿ ಮೊದಲ ಬಾರಿಗೆ ಲಿಥಿಯಮ್ ಅಯಾನ್ ಸೆಲ್ ತಯಾರಿಕೆ; ಟಾಟಾದಿಂದ ಗೀಗಾ ಫ್ಯಾಕ್ಟರಿ ಸ್ಥಾಪನೆಗೆ ಒಪ್ಪಂದ

India's First Lithium Ion Cell Production: ಗುಜರಾತ್​ನಲ್ಲಿ ಭಾರತದ ಮೊದಲ ಲಿಥಿಯಮ್ ಅಯಾನ್ ಸೆಲ್ ತಯಾರಿಕೆ ಫ್ಯಾಕ್ಟರಿ ನಿರ್ಮಾಣವಾಗಲಿದ್ದು ಟಾಟಾ ಗ್ರೂಪ್ ಮತ್ತು ಗುಜರಾತ್ ಸರ್ಕಾರದ ಮಧ್ಯೆ ಒಡಂಬಡಿಕೆ ಆಗಿದೆ.

Giga Factory: ಭಾರತದಲ್ಲಿ ಮೊದಲ ಬಾರಿಗೆ ಲಿಥಿಯಮ್ ಅಯಾನ್ ಸೆಲ್ ತಯಾರಿಕೆ; ಟಾಟಾದಿಂದ ಗೀಗಾ ಫ್ಯಾಕ್ಟರಿ ಸ್ಥಾಪನೆಗೆ ಒಪ್ಪಂದ
ಟಾಟಾ ಗ್ರೂಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 04, 2023 | 8:13 PM

ಗಾಂಧಿನಗರ: ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಅವಶ್ಯವಾಗಿರುವ ಬ್ಯಾಟರಿಗೆ ಲಿಥಿಯಮ್ ಅಯಾನ್ ಸೆಲ್​ಗಳು (Lithium Ion Cell) ತಯಾರಿಕೆಗಾಗಿ ಗುಜರಾತ್​ನಲ್ಲಿ ಫ್ಯಾಕ್ಟರಿ ಸ್ಥಾಪನೆಯಾಗಲಿದೆ. ಭಾರತದಲ್ಲಿ ಲಿಥಿಯಮ್ ಅಯಾನ್ ಸೆಲ್​ಗಳು ತಯಾರಾಗಲಿರುವುದು ಇದೇ ಮೊದಲು. ಟಾಟಾ ಗ್ರೂಪ್ ಗುಜರಾತ್​ನಲ್ಲಿ ಗೀಗಾ ಫ್ಯಾಕ್ಟರಿ ಸ್ಥಾಪನೆ ಮಾಡುತ್ತಿದೆ. ಗುಜರಾತ್ ಸರ್ಕಅರ ಮತ್ತು ಟಾಟಾ ಗ್ರೂಪ್ ಮಧ್ಯೆ ಒಡಂಬಡಿಕೆ ಆಗಿದ್ದು, ಬರೋಬ್ಬರಿ 13,000 ಕೋಟಿ ರೂಗಳಷ್ಟು ಆರಂಭಿಕ ಬಂಡವಾಳ ಹೂಡಿಕೆ ಆಗುವ ನಿರೀಕ್ಷೆ ಇದೆ.

ಈ ಗಿಗಾ ಫ್ಯಾಕ್ಟರಿಯಲ್ಲಿ 20 ಗಿಗಾಹರ್ಟ್ಜ್​ನಷ್ಟು ಲಿಥಿಯಂ ಅಯಾನ್ ಸೆಲ್​ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. 13,000 ಕೋಟಿ ರೂಗಳ ಆರಂಭಿಕ ಹೂಡಿಕೆಯಿಂದ ನೇರವಾಗಿ ಮತ್ತು ಪರೋಕ್ಷವಾಗಿ 13,000 ಮಂದಿಗೆ ಉದ್ಯೋಗ ಸೃಷ್ಟಿ ಆಗುವ ಅಂದಾಜಿದೆ.

ಇದನ್ನೂ ಓದಿBengalurean’s Case: ಬ್ಯಾಗ್ ಹಾಳಾಗಿದ್ದಕ್ಕೆ ಕುವೇತ್ ಏರ್​ವೇಸ್​ನಿಂದ ಪರಿಹಾರ ಕಕ್ಕಿಸಿದ ಬೆಂಗಳೂರಿಗ; ಗ್ರಾಹಕರ ಹಕ್ಕಿಗೆ ಇದೊಂದು ಮಾದರಿ

ಗುಜರಾತ್ ರಾಜಧಾನಿ ಗಾಂಧಿನಗರ್​ನಲ್ಲಿ ಅಲ್ಲಿನ ಸರ್ಕಾರ ಮತ್ತು ಟಾಟಾ ಗ್ರೂಪ್ ಮಧ್ಯೆ ಎಂಒಯು ಆಗಿದೆ. ಟಾಟಾ ಗ್ರೂಪ್​ನ ಅಂಗಸಂಸ್ಥೆ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸಲ್ಯೂಷನ್ಸ್ ಪ್ರೈ ಲಿ ಸಂಸ್ಥೆಯ ಸಿಇಒ ಹಾಗೂ ಗುಜರಾತ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿಜಯ್ ನೆಹ್ರಾ ಅವರು ಸಿಎಂ ಭೂಪೇಂದ್ರ ಪಟೇಲ್ ಉಪಸ್ಥಿತಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಭವಿಷ್ಯದಲ್ಲಿ ಬಹಳ ಬೇಡಿಕೆಗೆ ಬರುವ ಲಿಥಿಯಂ ಅಯಾನ್ ಬ್ಯಾಟರಿ

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಲಿಥಿಯಮ್ ಅಯಾನ್ ಸೆಲ್​ಗಳು ಅಗತ್ಯವಿವೆ. ವಿಶ್ವಸಂಸ್ಥೆಯ ನಿರ್ದೇಶನದ ಮೇರೆಗೆ ಭಾರತ ಕಾರ್ಬನ್ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸುವತ್ತ ಗಮನ ಕೊಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ 2030ರಷ್ಟರಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬಳಕೆ ಕಡಿಮೆ ಮಾಡಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಕೆಯಾಗಬೇಕು ಹಾಗೂ ದೇಶದಲ್ಲಿ ಇಂಗಾಲ ಹೊರಸೂಸುವಿಕೆಯು ಶೇ. 50ರಷ್ಟು ಕಡಿಮೆ ಆಗಬೇಕೆಂದು ಗುರಿ ಇಟ್ಟಿದೆ.

ಇದನ್ನೂ ಓದಿHiring Tips: ಯಾರನ್ನು ಹೈರಿಂಗ್ ಮಾಡಿಕೊಳ್ಳಬೇಕು? ಇಂಥವರು ಬೇಡ… 4 ನೇಮಕಾತಿ ಸೂತ್ರ ಬಿಚ್ಚಿಟ್ಟ ನೆಟ್​ಫ್ಲಿಕ್ಸ್ ಒಡೆಯ ಮಾರ್ಕ್ ರಾಂಡೋಲ್ಫ್

ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚೆಚ್ಚು ತಯಾರಾಗುವ ನಿರೀಕ್ಷೆ ಇದೆ. ಇದರಿಂದ ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಬೇಡಿಕೆ ವಿಪರೀತ ಇರಲಿದೆ. ಈಗ ಸದ್ಯ ಈ ಬ್ಯಾಟರಿಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಟಾಟಾ ಗ್ರೂಪ್​ನಿಂದ ಗಿಗಾ ಫ್ಯಾಕ್ಟರಿ ಸ್ಥಾಪನೆ ಆಗುವುದರಿಂದ ಭಾರತಕ್ಕೆ ನಾನಾ ಅನುಕೂಲಗಳಾಗುತ್ತವೆ. ಆಮದು ವೆಚ್ಚ ಕಡಿಮೆ ಆಗುವುದು, ಹಾಗೂ ಕಡಿಮೆ ಬೆಲೆಗೆ ಬ್ಯಾಟರಿ ದೊರೆಯುವುದು ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಕಡಿಮೆ ಆಗುವುದು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?