Bengalurean’s Case: ಬ್ಯಾಗ್ ಹಾಳಾಗಿದ್ದಕ್ಕೆ ಕುವೇತ್ ಏರ್​ವೇಸ್​ನಿಂದ ಪರಿಹಾರ ಕಕ್ಕಿಸಿದ ಬೆಂಗಳೂರಿಗ; ಗ್ರಾಹಕರ ಹಕ್ಕಿಗೆ ಇದೊಂದು ಮಾದರಿ

Rajendran Gets Compensation From Kuwait Airways: ಬೆಂಗಳೂರಿನ ಕುಟುಂಬವೊಂದು ತಮ್ಮ ಲಗೇಜ್ ಬ್ಯಾಗ್ ಹಾಳಾಯಿತು ಮತ್ತು ಅನಗತ್ಯವಾಗಿ ಹೆಚ್ಚುವರಿ ಫ್ಲೈಟ್​ಗೆ ಹಣ ತೆರಬೇಕಾಯಿತು ಎಂದು ಆರೋಪಿಸಿ ಎಂದು ಏರ್​ಲೈನ್ಸ್ ಸಂಸ್ಥೆ ವಿರುದ್ಧ ಮೊಕದ್ದಮೆ ಹಾಕಿ ಪರಿಹಾರ ಕಕ್ಕಿಸಿದ ಘಟನೆ ನಡೆದಿದೆ.

Bengalurean's Case: ಬ್ಯಾಗ್ ಹಾಳಾಗಿದ್ದಕ್ಕೆ ಕುವೇತ್ ಏರ್​ವೇಸ್​ನಿಂದ ಪರಿಹಾರ ಕಕ್ಕಿಸಿದ ಬೆಂಗಳೂರಿಗ; ಗ್ರಾಹಕರ ಹಕ್ಕಿಗೆ ಇದೊಂದು ಮಾದರಿ
ಕುವೇತ್ ಏರ್​ವೇಸ್
Follow us
|

Updated on: Jun 04, 2023 | 3:41 PM

ನವದೆಹಲಿ: ನಮ್ಮಲ್ಲಿ ಬಹುತೇಕರು ನಮ್ಮ ಗ್ರಾಹಕ ಹಕ್ಕುಗಳ (Consumer Rights) ಬಗ್ಗೆ ಅರಿತಿರುವುದೇ ಇಲ್ಲ. ಬಹಳಷ್ಟು ಬಾರಿ ಹಣ ಕಳೆದುಕೊಂಡು ಸುಮ್ಮನಾಗುತ್ತೇವೆ. ಇಂಥ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಟುಂಬವೊಂದು ತಮ್ಮ ಲಗೇಜ್ ಬ್ಯಾಗ್ ಹಾಳಾಯಿತು ಮತ್ತು ಅನಗತ್ಯವಾಗಿ ಹೆಚ್ಚುವರಿ ಫ್ಲೈಟ್​ಗೆ ಹಣ ತೆರಬೇಕಾಯಿತು ಎಂದು ಆರೋಪಿಸಿ ಎಂದು ಏರ್​ಲೈನ್ಸ್ ಸಂಸ್ಥೆ ವಿರುದ್ಧ ಮೊಕದ್ದಮೆ ಹಾಕಿ ಪರಿಹಾರ ಕಕ್ಕಿಸಿದ ಘಟನೆ ಇತ್ತೀಚೆಗೆ ನಡೆದಿದ್ದು ಎಲ್ಲರಿಗೂ ಅದು ಮಾದರಿ ಎನಿಸಿದೆ. ಬೆಂಗಳೂರಿನ ಅಲಸೂರಿನ ನಿವಾಸಿ ಎಸ್ ರಾಜೇಂದ್ರನ್ ಹಾಗೂ ಅವರ ಕುಟುಂಬದವರಿಗೆ ಕುವೇತ್ ಏರ್​ಲೈನ್ಸ್ ಸಂಸ್ಥೆ 59,620 ರುಪಾಯಿ ಮೊತ್ತದ ಟಿಕೆಟ್ ಹಣ, 25 ಸಾವಿರ ರೂ ಪರಿಹಾರ ಹಾಗೂ 5 ಸಾವಿರ ರೂ ವ್ಯಾಜ್ಯ ವೆಚ್ಚದ ಹಣವನ್ನು ಕೊಟ್ಟಿದೆ. ಇದು ಐದು ವರ್ಷದ ಹೋರಾಟದ ಫಲ. ಇಲ್ಲಿ ಬೆಂಗಳೂರಿನ ಈ ಕುಟುಂಬಕ್ಕೆ ಎಷ್ಟು ಪರಿಹಾರ ಸಿಕ್ಕಿತು ಎಂಬುದಕ್ಕಿಂತ ಹೆಚ್ಚಾಗಿ ಗ್ರಾಹಕರ ಹಕ್ಕುಗಳಿಗೆ ಎಷ್ಟರಮಟ್ಟಿಗೆ ರಕ್ಷಣೆ ಇದೆ ಎಂಬುದು ವೇದ್ಯವಾಗುವ ಪ್ರಕರಣ ಇದು.

ಟರ್ಕಿಗೆ ರಜೆಗೆ ಹೋದಾಗ ಆದ ಘಟನೆ

2017ರಲ್ಲಿ ಅಲಸೂರಿನ ಎಸ್ ರಾಜೇಂದ್ರನ್, ಅವರ ಪತ್ನಿ ಹಾಗೂ ಕುಟುಂಬದ ಮೂವರು ಇತರರು ರಜೆಯ ಮೇಲೆ ಟರ್ಕಿಗೆ ಹೋಗಲು ನಿರ್ಧರಿಸುತ್ತಾರೆ. ನೇರವಾಗಿ ಫ್ಲೈಟ್ ಇಲ್ಲದ ಕಾರಣ ವಿವಿಧ ವಿಮಾನಗಳ ಮೂಲಕ ಅವರು ಪ್ರಯಾಣಿಸಬೇಕಾಗುತ್ತದೆ. ಬೆಂಗಳೂರಿನಿಂದ ಮುಂಬೈಗೆ, ಮತ್ತೆ ಅಲ್ಲಿಂದ ಟರ್ಕಿಯ ಇಸ್ತಾಂಬುಲ್​ಗೆ, ಹಾಗೂ ಅಲ್ಲಿಂದ ಕಾಯ್​ಸೆರಿಗೆ ಬೇರೆ ಬೇರೆ ಫ್ಲೈಟ್ ಬುಕ್ ಮಾಡುತ್ತಾರೆ.

ಇಂಥ ಕನೆಕ್ಟೆಡ್ ಫ್ಲೈಟ್​ಗಳಲ್ಲಿ ಒಂದು ತಪ್ಪಿಹೋದರೂ ಇತರ ವಿಮಾನಗಳು ನಮ್ಮ ತಪ್ಪಿಹೋಗುತ್ತವೆ. ಬೆಂಗಳೂರಿನಿಂದ ಮುಂಬೈಗೆ ಸರಿಯಾದ ಸಮಯಕ್ಕೆ ಹೋದರೂ, ಮುಂಬೈನಿಂದ ಇಸ್ಲಾಂಬುಲ್​ಗೆ ಹೋಗುವ ವಿಮಾನ ವಿಳಂಬಗೊಂಡಿದೆ. ಇದರಿಂದ ಕಾಯ್ಸೆರಿಗೆ ಹೋಗಬೇಕಾದ ಫ್ಲೈಟ್ ಮಿಸ್ ಆಗಿದೆ. ಇವರು ಬೇರೊಂದು ಫ್ಲೈಟ್ ಬುಕ್ ಮಾಡಿ ಕಾಯ್​ಸೆರಿಗೆ ಹೋಗಬೇಕಾಗುತ್ತದೆ.

ಇದನ್ನೂ ಓದಿToxic Bosses: ಬಾಸ್​ಗಳ ಸಹವಾಸ ಸಾಕೆಂದು ಕೆಲಸ ಬಿಟ್ಟವರೇ ಹೆಚ್ಚಂತೆ; ಭಾರತದಲ್ಲಿ ಕುತೂಹಲ ಮೂಡಿಸುತ್ತವೆ ರೆಸಿಗ್ನೇಶನ್ ಕಾರಣಗಳು

ಕೆಲವೊಮ್ಮೆ ಇಂಥದ್ದು ಆಗುವುದು ಸಹಜ. ಆದರೆ, ಇವರು ವಾಪಸ್ ಬರುವಾಗಲೂ ಇದೇ ರೀತಿಯ ತೊಂದರೆ ಆಗಿದೆ. ಇಸ್ತಾಂಬುಲ್​ನಿಂದ ಮುಂಬೈಗೆ ಬರುವ ಫ್ಲೈಟ್ ವಿಳಂಬಗೊಂಡಿದೆ. ಈ ಕಾರಣಕ್ಕೆ ಮುಂಬೈನಿಗೆ ಬೆಂಗಳೂರಿಗೆ ಬರುವ ಫ್ಲೈಟ್ ಮಿಸ್ ಆಗಿದೆ. ಹೋಗಬೇಕಾದಾಗ ಮತ್ತು ಬರಬೇಕಾದಾಗ ವಿಳಂಬಗೊಂಡ ವಿಮಾನವು ಕುವೇತ್ ಏರ್​ಲೈನ್ಸ್​ಗೆ ಸೇರಿದ್ದೇ ಆಗಿದ್ದವು.

ಈ ಗೋಳು ಇದಷ್ಟೇ ಅಲ್ಲ, ಇಡೀ ಪ್ರಯಾಣದಲ್ಲಿ ರಾಜೇಂದ್ರನ್ ಕುಟುಂಬ ಸದಸ್ಯರಿಗೆ ಸೇರಿದ ಲಗೇಜುಗಳಲ್ಲಿ ಮೂರು ಬ್ಯಾಗುಗಳು ತಪ್ಪಿಹೋಗಿದ್ದವು. ಇವರು ಬೆಂಗಳೂರಿಗೆ ವಾಪಸ್ ಬಂದು ಎರಡು ದಿನವಾದ ಬಳಿಕ ಈ 3 ಬ್ಯಾಗುಗಳು ತಲುಪಿವೆ. ಅಷ್ಟೇ ಅಲ್ಲ ಈ ಬ್ಯಾಗುಗಳಿಗೆ ಹಾನಿ ಕೂಡ ಆಗಿತ್ತು.

ಇದನ್ನೂ ಓದಿStartups: ಬೆಂಗಳೂರಾ, ಮುಂಬೈಯಾ? ಕಂಪನಿ ನಡೆಸಲು ಕಷ್ಟವಾಗುವ ನಗರ ಯಾವುದು? ಸಿಇಒಗಳು ಹೇಳೋದಿದು

ವಿಮಾನ ವಿಳಂಬಗೊಂಡ ಕಾರಣಕ್ಕೆ ಎರಡು ಬಾರಿ ರಾಜೇಂದ್ರನ್ ಅವರು ಬೇರೆ ಫ್ಲೈಟ್ ಬುಕ್ ಮಾಡಬೇಕಾದಂತಾಗಿತ್ತು. ಬೆಂಗಳೂರಿಗೆ ಬರುತ್ತಲೇ ರಾಜೇಂದ್ರನ್ ಅವರು ಕುವೈತ್ ಏರ್​ವೇಸ್​ನ ಹೆಲ್ಪ್​ಲೈನ್ ನಂಬರ್​ಗೆ ಕರೆ ಮಾಡಿ, ಹೆಚ್ಚುವರಿ ಫ್ಲೈಟ್​ಗಳ ಟಿಕೆಟ್ ಹಣವನ್ನು ರೀಫಂಡ್ ಮಾಡುವಂತೆ ಕೇಳಿದರು. ಅದರೆ, ಸಂಸ್ಥೆಯಿಂದ ಸರಿಯಾದ ಸ್ಪಂದನೆ ಬರದಿದ್ದಾಗ ರಾಜೇಂದ್ರನ್ ಅವರು ಸೇವಾ ಲೋಪದ ಆರೋಪ ಮಾಡಿ ತಮ್ಮ ವಕೀಲರ ಮೂಲಕ ದೂರು ಕೊಟ್ಟಿದ್ದಾರೆ.

ಕೋರ್ಟ್​ನಲ್ಲಿ ಈ ಪ್ರಕರಣದ ವಿಚಾರಣೆ ಆಗಿ ಏಪ್ರಿಲ್ ತಿಂಗಳಲ್ಲಿ ನ್ಯಾಯಾಧೀಶರು ತೀರ್ಪು ಕೊಟ್ಟಿದ್ದು, ಕುವೇತ್ ಏರ್ವೇಸ್​ನಿಂದ ಸೇವಾ ಲೋಪ ಆಗಿರುವ ಆರೋಪವನ್ನು ಎತ್ತಿಹಿಡಿದಿದೆ. ಇಡೀ ಪ್ರಯಣದಲ್ಲಿ ರಾಜೇಂದ್ರನ್ ಕುಟುಂಬದ ಸಮಸ್ಯೆಗಳಿಗೆ ಏರ್​ವೇಸ್ ಸರಿಯಾಗಿ ಸ್ಪಂದಿಸಿಲ್ಲ ಎಂದು ಹೇಳಿರುವ ಜಡ್ಜ್​ಗಳು, ದೂರುದಾರರ ಕುಟುಂಬಕ್ಕೆ ಹೆಚ್ಚುವರಿ ವಿಮಾನಗಳ ಟಿಕೆಟ್ ಮೊತ್ತವಾದ 59,620 ರೂ ಹಣ, 25000 ರೂ ಪರಿಹಾರ ಹಾಗೂ ಕೇಸು ನಿರ್ವಹಣೆಯ ವೆಚ್ಚವಾದ 5000 ರೂ ಹಣವನ್ನು ನೀಡಬೇಕೆಂದು ಕುವೇತ್ ಏರ್​ವೇಸ್ ಸಂಸ್ಥೆಗೆ ಆದೇಶಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ