Startups: ಬೆಂಗಳೂರಾ, ಮುಂಬೈಯಾ? ಕಂಪನಿ ನಡೆಸಲು ಕಷ್ಟವಾಗುವ ನಗರ ಯಾವುದು? ಸಿಇಒಗಳು ಹೇಳೋದಿದು

Mumbai CEOs Meeting: ಮುಂಬೈನಲ್ಲಿ ಬಾಡಿಗೆ ತುಸು ದುಬಾರಿಯಾದರೂ ಪರವಾಗಿಲ್ಲ, ಕಂಪನಿ ನಡೆಸಲು ಬೆಂಗಳೂರು, ಗುರುಗ್ರಾಮ್​ನಂತಹ ನಗರಗಳಿಗಿಂತ ಮುಂಬೈ ಎಷ್ಟೋ ವಾಸಿ ಎಂದು ಅಲ್ಲಿನ ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆ.

Startups: ಬೆಂಗಳೂರಾ, ಮುಂಬೈಯಾ? ಕಂಪನಿ ನಡೆಸಲು ಕಷ್ಟವಾಗುವ ನಗರ ಯಾವುದು? ಸಿಇಒಗಳು ಹೇಳೋದಿದು
ಸ್ಟಾರ್ಟಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2023 | 3:56 PM

ಮುಂಬೈ: ಬೆಂಗಳೂರು ಒಂದು ರೀತಿಯಲ್ಲಿ ಸ್ಟಾರ್ಟಪ್​ಗಳ ನಗರಿ ಎನಿಸಿದೆ. ದೇಶದ ಬಹುತೇಕ ಸ್ಟಾರ್ಟಪ್​ಗಳು ಬೆಂಗಳೂರಿನಲ್ಲೇ ಇವೆ. ಇಲ್ಲಿ ವಿವಿಧ ಕೌಶಲ್ಯಗಳಿರುವ ಜನರು ಕೆಲಸಕ್ಕೆ ಸಿಗುತ್ತಾರೆ. ಒಳ್ಳೆಯ ಹವಾಮಾನದ ಅನುಕೂಲತೆಗಳಿವೆ. ಭಾರೀ ಟ್ರಾಫಿಕ್ ಕಿರಿಕಿರಿ ಹೊರತುಪಡಿಸಿದರೆ ಬೆಂಗಳೂರು ಸರ್ವರನ್ನೂ ಆಕರ್ಷಿಸುವ ನಗರಿ. ಅಂತೆಯೇ ಕಂಪನಿಗಳ ಪ್ರಹಾಹವೇ ಬೆಂಗಳೂರಿನಲ್ಲಿದೆ. ಆದರೆ, ಮುಂಬೈನಲ್ಲಿ ಕಂಪನಿ ಸ್ಥಾಪಿಸುವ ಉದ್ಯಮಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಮುಂಬೈನಲ್ಲಿ ಬಾಡಿಗೆ ತುಸು ದುಬಾರಿಯಾದರೂ ಪರವಾಗಿಲ್ಲ, ಕಂಪನಿ ನಡೆಸಲು ಬೆಂಗಳೂರು, ಗುರುಗ್ರಾಮ್​ನಂತಹ ನಗರಗಳಿಗಿಂತ ಮುಂಬೈ ಎಷ್ಟೋ ವಾಸಿ ಎಂದು ಅಲ್ಲಿನ ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿ ಆಫೀಸ್ ಸ್ಥಳದ ವೆಚ್ಚವೇನೂ ಸಮಸ್ಯೆ ಅಲ್ಲ. ಬೆಂಗಳೂರಿನಲ್ಲಿ ಕಚೇರಿ ಸ್ಥಳಕ್ಕೆ ಇರುವಷ್ಟೇ ಬೆಲೆ ಮುಂಬೈನಲ್ಲೂ ಇರುವುದು. ಗುರುಗ್ರಾಂಗೆ ಹೋಲಿಸದರೆ ಆಫೀಸ್ ಸ್ಪೇಸ್ ಬೆಲೆ ಶೇ. 10ರಷ್ಟು ಹೆಚ್ಚಿರಬಹುದು. ಆದರೆ, ಉದ್ಯೋಗಿಗಳ ವಿಚಾರವನ್ನು ನೋಡಿದರೆ ಈ ಹೆಚ್ಚುವರಿ ಕಚೇರಿ ವೆಚ್ಚ ದೊಡ್ಡದೇನಲ್ಲ ಎಂದು ವಿವಿಧ ಸಿಇಒಗಳು ಹೇಳಿದ್ದಾರೆ.

ಇದನ್ನೂ ಓದಿMSP: ರಾಗಿ, ಜೋಳ ಇತ್ಯಾದಿ ಮುಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ ಸಾಧ್ಯತೆ; ಈ ವರ್ಷ ಗೋಧಿ ಖರೀದಿಯಲ್ಲಿ ಸರ್ಕಾರ ದಾಖಲೆ

2023ರ ಟಿಐಇ ಕಾನ್ ಮುಂಬೈ (TiE Con Mumbai) ಕಾರ್ಯಕ್ರಮದಲ್ಲಿ ಅಪ್​ಗ್ರಾಡ್ ಎಂಡಿ ಮಯಂಕ್ ಕುಮಾರ್, ಎರುಡಿಟಸ್ ಸಂಸ್ಥಾಪಕ ಅಶ್ವಿನ್ ದಮೇರಾ, ಹಾಪ್ಟಿಕ್ ಸಿಇಒ ಆಕೃತ್ ವೈಶ್, ಮುಂಬೈ ತಂತ್ರಜ್ಞಾನ ಉದ್ದಿಮೆದಾರರ ಸಂಘದ ಮುಖ್ಯಸ್ಥ ಶ್ರೀವತ್ಸ ಪ್ರಭಾಕರ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಾ ಕಂಪನಿಗಳನ್ನು ನಡೆಸಲು ಬೆಂಗಳೂರಿಗಿಂತ ಮುಂಬೈ ಬೆಟರ್ ಎಂದಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗಿಗಳು ಬಿಟ್ಟುಹೋಗುವ ಪ್ರಮಾಣ ಹೆಚ್ಚು

ಬೆಂಗಳೂರಿನಲ್ಲಿ ಅಟ್ರಿಶನ್ ರೇಟ್ ತೀರಾ ಹೆಚ್ಚಿದೆ. ಅಂದರೆ ಉದ್ಯೋಗಿಗಳು ಬಿಟ್ಟುಹೋಗುವ ಪ್ರಮಾಣ ಬಹಳ ಹೆಚ್ಚು. ಆದರೆ, ಮುಂಬೈನಲ್ಲಿ ಅಟ್ರಿಶನ್ ರೇಟ್ ಬಹಳ ಕಡಿಮೆ. ಇಲ್ಲಿಯ ಕಂಪನಿಗಳು ಬಹಳ ವ್ಯವಸ್ಥಿತವಾಗಿರುತ್ತವೆ. ಬೆಂಗಳೂರಿನಂಥ ನಗರಗಳಿಗೆ ಹೋದರೆ ಅಲ್ಲಿಯ ಟೀಸ್ಟಾಲ್​ಗಳಲ್ಲಿ ಉದ್ಯೋಗಿಗಳನ್ನು ಸೆಳೆಯಲು ಐದಾರು ರೆಕ್ರೂಟರುಗಳು ಕಾಯುತ್ತಿರುತ್ತಾರೆ ಎಂದು ಈ ಚರ್ಚೆಯಲ್ಲಿ ಒಬ್ಬರು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿLocker Rules: ಬ್ಯಾಂಕ್ ಲಾಕರ್ ಹಾಳಾದರೆ ಯಾರು ಹೊಣೆ? ಆರ್​ಬಿಐ ನಿಯಮಗಳು ಬದಲಾಗಿವೆ; ಒಪ್ಪಂದ ನವೀಕರಿಸುವ ಮುನ್ನ ತಿಳಿದಿರಿ, ಇಲ್ಲಿದೆ ಡೀಟೇಲ್ಸ್

ಇನ್ನು, ಬೆಂಗಳೂರಿನಲ್ಲಿ ಇರುವ ಸ್ಟಾರ್ಟಪ್​ಗಳು ಹೆಚ್ಚು ಸುಲಭವಾಗಿ ಬಂಡವಾಳ ಸೆಳೆಯುತ್ತವೆ ಎಂಬ ಅಭಿಪ್ರಾಯವನ್ನೂ ಮುಂಬೈನ ಸಿಇಒಗಳು ತಳ್ಳಿಹಾಕಿದ್ದಾರೆ. ಬಂಡವಾಳ ಕಲೆಹಾಕಲು ಬೆಂಗಳೂರಲ್ಲೇ ಇರಬೇಕೆಂದು ಹೇಳುವುದು ತಪ್ಪು. ಅದರ ಅಗತ್ಯ ಇಲ್ಲ ಎಂದೊಬ್ಬರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್