MSP: ರಾಗಿ, ಜೋಳ ಇತ್ಯಾದಿ ಮುಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ ಸಾಧ್ಯತೆ; ಈ ವರ್ಷ ಗೋಧಿ ಖರೀದಿಯಲ್ಲಿ ಸರ್ಕಾರ ದಾಖಲೆ

Kharif Crops May Get Higher MSP From Government: ರೈತರ ಮುಂಗಾರು ಬೆಳೆಗಳಿಗೆ ಇರುವ ಎಂಎಸ್​ಪಿಯನ್ನು ಶೇ. 3ರಿಂದ 8ರಷ್ಟು ಏರಿಸುವ ಸಾಧ್ಯತೆ ಇದೆ. ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಸರ್ಕಾರ ಹೆಚ್ಚು ದರ ಕೊಟ್ಟು ಖರೀದಿಸಬಹುದು ಎನ್ನಲಾಗಿದೆ. ಕ್ವಿಂಟಾಲ್ ರಾಗಿಗೆ ಬೆಂಬಲ ಬೆಲೆ 4,000 ರೂಗೆ ಏರುವ ನಿರೀಕ್ಷೆ ಇದೆ.

MSP: ರಾಗಿ, ಜೋಳ ಇತ್ಯಾದಿ ಮುಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಳ ಸಾಧ್ಯತೆ; ಈ ವರ್ಷ ಗೋಧಿ ಖರೀದಿಯಲ್ಲಿ ಸರ್ಕಾರ ದಾಖಲೆ
ಖಾರಿಫ್ ಬೆಳೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2023 | 12:25 PM

ನವದೆಹಲಿ: ಈ ವರ್ಷದ ಮುಂಗಾರು ಬೆಳೆ ಅಥವಾ ಖಾರಿಫ್ ಬೆಳೆಗಳಿಗೆ (Kharif Crops) ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ದೊರೆತಿದೆ. ಅದರ ಪ್ರಕಾರ ವಿವಿಧ ಬೆಳೆಗಳಿಗೆ ಇರುವ ಎಂಎಸ್​ಪಿಯನ್ನು (Minimum Support Price) ಶೇ. 3ರಿಂದ 8ರಷ್ಟು ಏರಿಸುವ ಸಾಧ್ಯತೆ ಇದೆ. ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಸರ್ಕಾರ ಹೆಚ್ಚು ದರ ಕೊಟ್ಟು ಖರೀದಿಸಬಹುದು ಎನ್ನಲಾಗಿದೆ. 2040 ರೂ ಇರುವ ಭತ್ತದ ಎಂಎಸ್​ಪಿ ದರವನ್ನು 2,200 ರೂವರೆಗೂ ಏರಿಸುವ ಸಾಧ್ಯತೆ ಇದೆ. ಕ್ವಿಂಟಾಲ್ ರಾಗಿಗೆ ಇರುವ 3,578 ರೂ ಬೆಂಬಲ ಬೆಲೆಯನ್ನು 4,000 ರೂಗೆ ಏರಿಸಬಹುದು ಎನ್ನಲಾಗುತ್ತಿದೆ.

ಗೋಧಿ ಇತ್ಯಾದಿ ಹಿಂಗಾರು ಬೆಳೆಗಳಿಗೆ ಸರ್ಕಾರ ಇತ್ತೀಚೆಗೆ ಎಂಎಸ್​ಪಿ ದರ ಹೆಚ್ಚಿಸಿತ್ತು. ಈಗ ಮುಂಗಾರು ಬೆಳೆಗೂ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಬಹುದು.

ಮುಂಗಾರು ಬೆಳೆಗಳಿಗೆ ಸದ್ಯ ಇರುವ ಎಂಎಸ್​ಪಿ ದರಗಳ ಪಟ್ಟಿ (2022-23)

  • ಭತ್ತ: ಕ್ವಿಂಟಾಲ್​ಗೆ 2040 ರೂ
  • ಜೋಳ (ಹೈಬ್ರಿಡ್): ಕ್ವಿಂಟಾಲ್​ಗೆ 2970 ರೂ
  • ಮೆಕ್ಕೆ ಜೋಳ: ಕ್ವಿಂಟಾಲ್​ಗೆ 1,962 ರೂ
  • ಬಿಳಿ ಜೋಳ: 2,350 ರೂ
  • ರಾಗಿ: ಕ್ವಿಂಟಾಲ್​ಗೆ 3578 ರೂ
  • ತೊಗರಿಬೇಳೆ: 6,600 ರೂ
  • ಹೆಸರುಕಾಳು: 7,755 ರೂ
  • ಶೇಂಗಾ: 5,850 ರೂ
  • ಉದ್ದಿನಬೇಳೆ: 6,600 ರೂ
  • ಸೋಯಾ: 4,300 ರೂ

ಇದನ್ನೂ ಓದಿUPI: ಪೇಟಿಎಂ, ಫೋನ್​ಪೇ ಇತ್ಯಾದಿ ಬಳಸಿ ಜನರು ಮೇ ತಿಂಗಳಲ್ಲಿ ನಡೆಸಿದ ವಹಿವಾಟು 14 ಲಕ್ಷ ಕೋಟಿ ರೂ

ಐದು ತಿಂಗಳಲ್ಲಿ 262 ಲಕ್ಷ ಟನ್ ಗೋಧಿ ಖರೀದಿಸಿದ ಸರ್ಕಾರ

ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಈ ವರ್ಷ ಇದೂವರೆಗೂ ಕೇಂದ್ರ ಸರ್ಕಾರ ರೈತರಿಂದ 262 ಲಕ್ಷ ಟನ್​ಗಳಷ್ಟು ಗೋಧಿ ಖರೀದಿ ಮಾಡಿದೆ. ಒಟ್ಟು 47,000 ಕೋಟಿ ರೂ ಹಣವನ್ನು ಈ ಗೋಧಿ ಬೆಳೆದ ರೈತರಿಗೆ ತಲುಪಿಸಲಾಗಿದೆ. 21.27 ಲಕ್ಷ ರೈತರಿಗೆ ಅನುಕೂಲವಾಗಿದೆ.

ಕಳೆದ ವರ್ಷ (2022) ಕೇಂದ್ರ ಸರ್ಕಾರ ಎಂಎಸ್​ಪಿ ದರದಲ್ಲಿ ರೈತರಿಂದ 188 ಲಕ್ಷ ಟನ್​ಗಳಷ್ಟು ಗೋಧಿ ಖರೀದಿ ಮಾಡಿತ್ತು. ಈ ವರ್ಷ ಕೇವಲ 5 ತಿಂಗಳಲ್ಲಿ ಆ ಮೊತ್ತವನ್ನು ಮೀರಿಸಿ ಖರೀದಿ ಡೆದಿದೆ. ಹಿಂಗಾರು ಋತು ಅಥವಾ ರಾಬಿ ಋತುವಿನ ಬೆಳೆಯಾದ ಗೋಧಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್​ಗೆ 2,125 ರೂಗೆ ನಿಗದಿ ಮಾಡಿದೆ.

ಇದನ್ನೂ ಓದಿArecanut Price 01 ಜೂನ್: ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಹಿಂಗಾರು ಬೆಳೆಗಳಿಗೆ ಇರುವ ಎಂಎಸ್​ಪಿ ದರ (2023-24)

  • ಗೋಧಿ: ಕ್ವಿಂಟಾಲ್​ಗೆ 2,125 ರೂ
  • ಬಾರ್ಲಿ: 1,634 ರೂ
  • ಸಾಸಿವೆ: 5,450 ರೂ
  • ಅವರೆ: 6,000 ರೂ
  • ಕಡಲೆ: 5,335 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ