Toxic Bosses: ಬಾಸ್​ಗಳ ಸಹವಾಸ ಸಾಕೆಂದು ಕೆಲಸ ಬಿಟ್ಟವರೇ ಹೆಚ್ಚಂತೆ; ಭಾರತದಲ್ಲಿ ಕುತೂಹಲ ಮೂಡಿಸುತ್ತವೆ ರೆಸಿಗ್ನೇಶನ್ ಕಾರಣಗಳು

Resignation Reasons: ಉದ್ಯೋಗಿಗಳು ಹೆಚ್ಚು ಸಂಬಳದ ಆಸೆಗೆ ಕೆಲಸ ಬದಲಿಸುತ್ತಾರೆ ಎಂಬ ಅಭಿಪ್ರಾಯವನ್ನೇ ಸಾಮಾನ್ಯೀಕರಿಸಲಾಗುತ್ತದೆ. ಆದರೆ, ಕೆಟ್ಟ ಬಾಸ್ ಹಾಗು ಕೆಟ್ಟ ಕೆಲಸದ ವಾತಾವರಣವೇ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ಕೆಲಸ ಬಿಡಲು ಕಾರಣ ಎಂಬ ಅಂಶ ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ.

Toxic Bosses: ಬಾಸ್​ಗಳ ಸಹವಾಸ ಸಾಕೆಂದು ಕೆಲಸ ಬಿಟ್ಟವರೇ ಹೆಚ್ಚಂತೆ; ಭಾರತದಲ್ಲಿ ಕುತೂಹಲ ಮೂಡಿಸುತ್ತವೆ ರೆಸಿಗ್ನೇಶನ್ ಕಾರಣಗಳು
ರಾಜೀನಾಮೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2023 | 7:00 PM

ಕಳೆದ ಎರಡು ವರ್ಷಗಳಿಂದ ಲೇ ಆಫ್, ರಾಜೀನಾಮೆಗಳು ಭಾರತದ ಕಾರ್ಪೊರೇಟ್ ವಲಯವನ್ನು ಅಲುಗಾಡಿಸುತ್ತಾ ಬರುತ್ತಿದೆ. ಕಂಪನಿ ತನಗೆ ಉಪಯೋಗವಲ್ಲ ಎನಿಸಿದ ಉದ್ಯೋಗಿಗಳನ್ನು ಕೆಲಸದಿಂದ ಲೇ ಆಫ್ ಮಾಡುತ್ತವೆ. ಆದರೆ, ಉದ್ಯೋಗಿಗಳು ರಾಜೀನಾಮೆ (Resignation) ನೀಡಲು ಏನು ಕಾರಣ? ಉದ್ಯೋಗಿಗಳು ಹೆಚ್ಚು ಸಂಬಳದ ಆಸೆಗೆ ಕೆಲಸ ಬದಲಿಸುತ್ತಾರೆ ಎಂಬ ಅಭಿಪ್ರಾಯವನ್ನೇ ಸಾಮಾನ್ಯೀಕರಿಸಲಾಗುತ್ತದೆ. ಆದರೆ, ಕೆಟ್ಟ ಬಾಸ್ (Toxic Boss) ಹಾಗು ಕೆಟ್ಟ ಕೆಲಸದ ವಾತಾವರಣವೇ (Toxic Work Environment) ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ಕೆಲಸ ಬಿಡಲು ಕಾರಣ ಎಂಬ ಅಂಶ ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ.

ಹರಪ್ಪ ಇನ್ಸೈಟ್ಸ್ (Harappa Insights) ಎಂಬ ಸಂಸ್ಥೆ 2022ರ ಮೇ ಮತ್ತು ಜೂನ್ ಅವಧಿಯಲ್ಲಿ ವೃತ್ತಿಪರ ಉದ್ಯೋಗಿಗಳ ಸಮೀಕ್ಷೆ ನಡೆಸಿ ಒಂದಷ್ಟು ಕುತೂಹಲಕಾರಿ ಮಾಹಿತಿ ಕಲೆ ಹಾಕಿದೆ. ಅದರ ಪ್ರಕಾರ ಕೆಟ್ಟ ಬಾಸ್ ಮತ್ತು ಕೆಟ್ಟ ಕೆಲಸದ ವಾತಾರಣ ಉದ್ಯೋಗಿಗಳ ರಾಜೀನಾಮೆಗೆ ಪ್ರಮುಖ ಎರಡು ಕಾರಣಗಳಂತೆ. ಹೆಚ್ಚಿನ ಸಂಬಳದ ಆಸೆಗೆ ಕೆಲಸ ಬಿಡುವವರ ಸಂಖ್ಯೆ ನಿರೀಕ್ಷಿಸಿದಷ್ಟಿಲ್ಲ ಎಂಬುದು ಹರಪ್ಪ ಇನ್​ಸೈಟ್ಸ್ ಸಂಸ್ಥೆಯ ಸಮೀಕ್ಷೆಯಿಂದ ಗೊತ್ತಾಗುತ್ತದೆ.

ಇದನ್ನೂ ಓದಿStartups: ಬೆಂಗಳೂರಾ, ಮುಂಬೈಯಾ? ಕಂಪನಿ ನಡೆಸಲು ಕಷ್ಟವಾಗುವ ನಗರ ಯಾವುದು? ಸಿಇಒಗಳು ಹೇಳೋದಿದು

ಹರಪ್ಪ ಇನ್​ಸೈಟ್ಸ್ ಸಮೀಕ್ಷೆ ಪ್ರಕಾರ ಉದ್ಯೋಗಿಗಳು ಕೆಲಸ ಬಿಡಲು ಪ್ರಮುಖ ಕಾರಣಗಳೇನು?

  1. ಕೆಟ್ಟ ಬಾಸ್: ಶೇ. 58ರಷ್ಟು ಉದ್ಯೋಗಿಗಳು ಕೊಟ್ಟ ಕಾರಣ
  2. ಕೆಟ್ಟ ಕೆಲಸದ ವಾತಾವರಣ: ಶೇ. 54ರಷ್ಟು ಉದ್ಯೋಗಿಗಳು ಕೊಟ್ಟ ಕಾರಣ
  3. ವೃತ್ತಿಯಲ್ಲಿ ಏಳಿಗೆ ಇಲ್ಲದಿರುವುದು: ಶೇ. 42
  4. ಕಂಪನಿ ಮತ್ತು ವೈಯಕ್ತಿಕ ಮೌಲ್ಯಗಳು ಸರಿಹೊಂದದಿರುವುದು: ಶೇ. 33
  5. ಕೆಲಸದಲ್ಲಿ ಸಾಮರ್ಥ್ಯ ತೋರಲು ವಿಫಲ: ಶೇ. 27
  6. ಒಳ್ಳೆಯ ಸಂಬಳ ಪಡೆಯಲು: ಶೇ. 20
  7. ವಿದೇಶಗಳಲ್ಲಿ ಕೆಲಸದ ಅವಕಾಶ: ಶೇ. 19
  8. ವರ್ಕ್ ಫ್ರಂ ಹೋಮ್ ಅವಕಾಶ: ಶೇ. 11
  9. ಉನ್ನತ ವ್ಯಾಸಂಗಕ್ಕಾಗಿ: ಶೇ. 6

ಇದನ್ನೂ ಓದಿGreen FD: ಗ್ರೀನ್ ಫಿಕ್ಸೆಡ್ ಡೆಪಾಸಿಟ್; ಗ್ರಾಹಕರ ಹಣದಿಂದ ಯಾರಿಗೆ ಸಾಲ? ಬ್ಯಾಂಕುಗಳಿಂದ ಆರ್​ಬಿಐಗೆ ಮಾಹಿತಿ ಕಡ್ಡಾಯ; ಇದೇನಿದು ಗ್ರೀನ್ ಎಫ್​ಡಿ?

ಇನ್ನೊಂದು ಕುತೂಹಲ ಸಂಗತಿ ಎಂದರೆ ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡಕ್ಕೂ ಅನುಕೂಲವಾಗುವಂತಹ ಕೆಲಸದ ಅವಕಾಶ ಸಿಕ್ಕರೆ ಕಡಿಮೆ ಸಂಬಳಕ್ಕೂ ಹೋಗಲು ಸಿದ್ಧ ಎಂದು ಹೇಳುವವರ ಸಂಖ್ಯೆ ಶೇ. 61ರಷ್ಟಿದೆಯಂತೆ. ಆದರೆ, ಬ್ಯುಸಿನೆಸ್, ಟಾರ್ಗೆಟ್, ಕಾಂಪಿಟೀಶನ್ ಮಂತ್ರಗಳನ್ನು ಹೇಳುವ ಕಾರ್ಪೊರೇಟ್ ಕಂಪನಿಗಳು ವರ್ಕ್ ಲೈಫ್ ಬ್ಯಾಲನ್ಸ್ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಡಿಮೆ ಎನ್ನುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್