India Foreign Exchange Reserve: ಭಾರತದ ವಿದೇಶೀ ವಿನಿಮಯ ಮೀಸಲು 9.646 ಶತಕೋಟಿ ಯುಎಸ್​ಡಿ ಕುಸಿತ

| Updated By: Srinivas Mata

Updated on: Mar 18, 2022 | 8:46 PM

ಭಾರತದ ವಿದೇಶೀ ವಿನಿಮಯ ಮೀಸಲು 9.646 ಬಿಲಿಯನ್​ ಯುಎಸ್​ಡಿ ಕಡಿಮೆಯಾಗಿ 622.75 ಬಿಲಿಯನ್ ಯುಎಸ್​ಡಿ ತಲುಪಿದೆ. ಈ ಬಗ್ಗೆ ಇನ್ನಷ್ಟು ವಿವರಣೆ ಇಲ್ಲಿದೆ.

India Foreign Exchange Reserve: ಭಾರತದ ವಿದೇಶೀ ವಿನಿಮಯ ಮೀಸಲು 9.646 ಶತಕೋಟಿ ಯುಎಸ್​ಡಿ ಕುಸಿತ
ಸಾಂದರ್ಭಿಕ ಚಿತ್ರ
Follow us on

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಇತ್ತೀಚಿನ ಮಾಹಿತಿ ಪ್ರಕಾರ, ಮಾರ್ಚ್ 11, 2022ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶೀ ವಿನಿಮಯ ಮೀಸಲು (Foreign Exchange Reserve) 9.646 ಶತಕೋಟಿ ಯುಎಸ್​ಡಿಯಿಂದ 622.275 ಶತಕೋಟಿ ಯುಎಸ್​ಡಿಗೆ ಕುಸಿತ ಕಂಡಿದೆ. ಮಾರ್ಚ್ 4ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ಮೀಸಲು ಯುಎಸ್​ಡಿ 394 ಮಿಲಿಯನ್ ಏರಿಕೆಯಾಗಿ, ಯುಎಸ್​ಡಿ 631.92 ಶತಕೋಟಿಗೆ ತಲುಪಿತ್ತು. ಸೆಪ್ಟೆಂಬರ್ 3, 2021ಕ್ಕೆ ಕೊನೆಗೊಂಡ ವಾರದಲ್ಲಿ ಇದು ಯುಎಸ್​ಡಿ 642.453 ಶತಕೋಟಿ ತಲುಪಿ, ಜೀವಮಾನದ ಗರಿಷ್ಠ ಮಟ್ಟವನ್ನು ಮುಟ್ಟಿತು. ವರದಿಯ ವಾರದಲ್ಲಿ, ಒಟ್ಟಾರೆ ಮೀಸಲುಗಳ ಪ್ರಮುಖ ಅಂಶವಾದ ವಿದೇಶೀ ಕರೆನ್ಸಿ ಆಸ್ತಿಗಳ (ಎಫ್‌ಸಿಎ) ಕುಸಿತದಿಂದಾಗಿ ಮೀಸಲು ಪ್ರಮಾಣವು ಕುಸಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಬಿಡುಗಡೆ ಮಾಡಿದ ಸಾಪ್ತಾಹಿಕ ಅಂಕಿ-ಅಂಶಗಳು ತೋರಿಸಿವೆ.

ಮಾರ್ಚ್ 11ಕ್ಕೆ ಕೊನೆಗೊಂಡ ವಾರದಲ್ಲಿ ಎಫ್​ಸಿಎ ಯುಎಸ್​ಡಿ 11.108 ಶತಕೋಟಿ ಕುಸಿದು, ಯುಎಸ್​ಡಿ 554.359 ಶತಕೋಟಿಗೆ ಇಳಿದಿದೆ. ಡಾಲರ್ ಪರಿಭಾಷೆಯಲ್ಲಿ ತಿಳಿಸುವುದಾದರೆ, ವಿದೇಶಿ ಕರೆನ್ಸಿ ಸ್ವತ್ತುಗಳು ವಿದೇಶಿ ವಿನಿಮಯ ಮೀಸಲುಗಳಲ್ಲಿ ಹೊಂದಿರುವ ಯುರೋ, ಪೌಂಡ್ ಮತ್ತು ಯೆನ್‌ನಂತಹ ಅಮೆರಿಕದ್ದಲ್ಲದ​ ಘಟಕಗಳ ಹೆಚ್ಚಳ ಅಥವಾ ಸವಕಳಿಯ ಪರಿಣಾಮವನ್ನು ಒಳಗೊಂಡಿದೆ.

ವರದಿಯ ವಾರದಲ್ಲಿ ಚಿನ್ನದ ಸಂಗ್ರಹವು ಯುಎಸ್​ಡಿ 1.522 ಶತಕೋಟಿ ಜಾಸ್ತಿಯಾಗಿ, ಯುಎಸ್​ಡಿ 43.842 ಶತಕೋಟಿಗೆ ಏರಿದೆ ಎಂದು ಅಂಕಿಅಂಶಗಳು ತೋರಿಸಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ವಿಶೇಷ ಡ್ರಾಯಿಂಗ್ ಹಕ್ಕುಗಳು (SDRs) ಯುಎಸ್​ಡಿ 53 ದಶಲಕ್ಷ ಇಳಿಕೆಯಿಂದ ಯುಎಸ್​ಡಿ 18.928 ಶತಕೋಟಿಗೆ ಇಳಿದಿದೆ ಎಂದು ಆರ್​ಬಿಐ ಹೇಳಿದೆ. ವರದಿಯ ವಾರದಲ್ಲಿ ಐಎಂಎಫ್​ನೊಂದಿಗೆ ದೇಶದ ಮೀಸಲು ಸ್ಥಾನವು ಯುಎಸ್​ಡಿ 7 ದಶಲಕ್ಷ ಕುಸಿತದಿಂದ ಯುಎಸ್​ಡಿ 5.146 ಶತಕೋಟಿಗೆ ಇಳಿದಿದೆ ಎಂದು ಡೇಟಾ ತೋರಿಸಿದೆ.

ಇದನ್ನೂ ಓದಿ: GDP: ದೇಶವು ಶೇಕಡಾ 15ರಷ್ಟು ಉತ್ಪಾದನೆಯನ್ನು ಶಾಶ್ವತವಾಗಿ ಕಳೆದುಕೊಂಡಿದೆ ಎಂದ ಆರ್​ಬಿಐ ಡೆಪ್ಯೂಟಿ ಗವರ್ನರ್