GDP: ದೇಶವು ಶೇಕಡಾ 15ರಷ್ಟು ಉತ್ಪಾದನೆಯನ್ನು ಶಾಶ್ವತವಾಗಿ ಕಳೆದುಕೊಂಡಿದೆ ಎಂದ ಆರ್​ಬಿಐ ಡೆಪ್ಯೂಟಿ ಗವರ್ನರ್

ಕೊರೊನಾದಿಂದ ಶೇ 15ರಷ್ಟು ಉತ್ಪಾದನೆ ಶಾಶ್ವತವಾಗಿ ಕಳೆದುಹೋಗಿದ್ದು, ಅದರಿಂದ ಜೀವನೋಪಾಯ ನಷ್ಟವಾಗಿದೆ ಎಂದು ಆರ್​ಬಿಐ ಗವರ್ನರ್ ಮೈಕೇಲ್ ಡಿ ಪಾತ್ರಾ ಹೇಳಿದ್ದಾರೆ.

GDP: ದೇಶವು ಶೇಕಡಾ 15ರಷ್ಟು ಉತ್ಪಾದನೆಯನ್ನು ಶಾಶ್ವತವಾಗಿ ಕಳೆದುಕೊಂಡಿದೆ ಎಂದ ಆರ್​ಬಿಐ ಡೆಪ್ಯೂಟಿ ಗವರ್ನರ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 23, 2022 | 11:56 PM

ಭಾರತದ ಒಟ್ಟು ಜಿಡಿಪಿ (Gross Domestic Product) ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜು ಶೇ 9.2 ಎಂದುಕೊಂಡ ನಂತರವೂ ಕೊರೊನಾ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಕೇವಲ ಶೇಕಡಾ 1ಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಈ ಅಂಶವು ಹಣದುಬ್ಬರಕ್ಕೆ ಆರಾಮದಾಯಕ ಅನುಕೂಲ ಜತೆಗೆ ಸೇರಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಅಕಾಮಡೆಟಿವ್ ಹಣಕಾಸು ನೀತಿಯೊಂದಿಗೆ ಮುಂದುವರಿದಿದೆ ಎಂದು ಪುಣೆ ಇಂಟರ್‌ನ್ಯಾಷನಲ್ ಸೆಂಟರ್ ಬುಧವಾರ ಆಯೋಜಿಸಿದ್ದ ವಾರ್ಷಿಕ ಏಷ್ಯಾ ಆರ್ಥಿಕ ಚರ್ಚೆ ವೇಳೆ ಆರ್‌ಬಿಐ ಡೆಪ್ಯೂಟಿ ಗವರ್ನರ್ ಮೈಕೆಲ್ ಡಿ ಪಾತ್ರಾ ಅವರು ತಿಳಿಸಿದ್ದಾರೆ. ಕೊರೊನಾಗೆ ಮುಂಚೆಯೇ 2017ರಲ್ಲಿ ಭಾರತದ ಬೆಳವಣಿಗೆಯ ಕುಸಿತ ಪ್ರಾರಂಭವಾಯಿತು ಎಂದು ಸ್ಪಷ್ಟಪಡಿಸುತ್ತಾ, ಕೇಂದ್ರ ಬ್ಯಾಂಕ್‌ನಲ್ಲಿ ನಿರ್ಣಾಯಕ ಹಣಕಾಸು ನೀತಿ ವಿಭಾಗವನ್ನು ನೋಡಿಕೊಳ್ಳುವ ಪಾತ್ರಾ, ದೇಶವು ಶೇಕಡಾ 15 ರಷ್ಟು ಉತ್ಪಾದನೆಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದು, ಅದರಿಂದ ಜೀವನೋಪಾಯದ ನಷ್ಟವೂ ಆಗಿದೆ ಎಂದು ಹೇಳಿದ್ದಾರೆ.

ಹಣದುಬ್ಬರದ ವಿರುದ್ಧದ ಕ್ರಮದಲ್ಲಿ ಭಾರತವು ವಕ್ರರೇಖೆಯ ಹಿಂದೆ ಇದೆ ಎಂಬ ಅಂಶವನ್ನು ಅವರು ನಿರಾಕರಿಸಿದ್ದು, ಇತರ ದೇಶಗಳು ದರಗಳನ್ನು ಹೆಚ್ಚಿಸಲು ಪ್ರಾರಂಭಿಸಿದ್ದರಿಂದ ಜನವರಿಯಲ್ಲಿ ಬೆಲೆ ಏರಿಕೆಯು ಗರಿಷ್ಠವಾಗಿದೆ ಎಂದು ಹೇಳಿದರು. ಪಾತ್ರಾ ಇನ್ನೂ ಮುಂದುವರಿದು, ಆರ್‌ಬಿಐ “ಎಲ್ಲವನ್ನೂ ಸಹಜ ಸ್ಥಿತಿಗೆ ತರುವುದಕ್ಕೆ ಬೇಕಾದಷ್ಟು ಸಮಯವನ್ನು ಆಯ್ಕೆ ಮಾಡುವ ಹಕ್ಕನ್ನು ಉಳಿಸಿಕೊಂಡಿದೆ,” ಎಂದು ಹೇಳಿದ್ದಾರೆ. “ಹಣದುಬ್ಬರಕ್ಕೆ ಸಂಬಂಧಿಸಿದಂತೆ ಭಾರತವು ಆರಾಮದಾಯಕ ಸ್ಥಿತಿಯಲ್ಲಿದೆ. ಮತ್ತು ಬೆಳವಣಿಗೆಯನ್ನು ಬೆಂಬಲಿಸಲು ನಮಗೆ ಅವಕಾಶ ಇದೆ ಹಾಗೂ ನಾವು ಅದನ್ನು ಮಾಡುತ್ತೇವೆ. ಏಕೆಂದರೆ ನಾವು ಕಳೆದುಹೋದ ಉತ್ಪಾದನೆ, ಕಳೆದುಹೋದ ಜೀವನೋಪಾಯಗಳೊಂದಿಗೆ ವ್ಯವಹರಿಸುತ್ತಿದ್ದೇವೆ,” ಎಂದು ಪಾತ್ರಾ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಜನವರಿಯಲ್ಲಿ ಶೇ 6.01ರ ದರದೊಂದಿಗೆ ಹಣದುಬ್ಬರವು ಗರಿಷ್ಠ ಮಟ್ಟವಾಗಿದೆ ಮತ್ತು ಡಿಸೆಂಬರ್ 2021ರ ತ್ರೈಮಾಸಿಕದ ವೇಳೆಗೆ ಆರ್‌ಬಿಐನ ಗುರಿಯ ಶೇ 4ಕ್ಕೆ ಇಳಿಕೆ ಆಗಲಿದೆ ಎಂದು ಅವರು ಹೇಳಿದ್ದಾರೆ. ಬೆಳವಣಿಗೆಯ ಬಗ್ಗೆ ಮಾತನಾಡುತ್ತಾ, 2020ರಲ್ಲಿ ಕೊರೊನಾ ರೋಗ ಪ್ರವೇಶಿಸಿದ ವೇಳೆ ಕಟ್ಟುನಿಟ್ಟಾದ ಲಾಕ್‌ಡೌನ್‌ ಘೋಷಿಸಿದ್ದರಿಂದ ಭಾರತವು 2020-21ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಕುಗ್ಗುವುದಕ್ಕೆ ಕಾರಣವಾಗಿ, ಪೆರುವಿನ ನಂತರ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

“ಮತ್ತು, ನೀವು ಹಣಕಾಸಿನ ಉತ್ತೇಜನವನ್ನು ಹೊರತುಪಡಿಸಿ ನೋಡುವುದಾದರೆ ಭಾರತವು ಪೆರುವಿನ ಕುಸಿತವನ್ನೂ ಮೀರಿಸುತ್ತದೆ. ಆದ್ದರಿಂದ ನಾವು ವಿಶ್ವದ ಆಳವಾದ ಆರ್ಥಿಕ ಹಿಂಜರಿತದಿಂದ ಹೊರಬಂದಿದ್ದೇವೆ,” ಎಂದು ಪಾತ್ರಾ ಸೇರಿಸಿದ್ದಾರೆ. ಹಣದುಬ್ಬರದ ಬಗ್ಗೆ ತಿಳಿಸುತ್ತಾ, ಮೂಲ ಪರಿಣಾಮಗಳ ಕಾರಣದಿಂದಾಗಿ ಹಣದುಬ್ಬರ ಮಟ್ಟವು ಸಂಪೂರ್ಣವಾಗಿ ಎತ್ತರದಲ್ಲಿದೆ. ಆದರೆ ಹಣದುಬ್ಬರದಲ್ಲಿನ ವೇಗ ಅಥವಾ ತಿಂಗಳಿಂದ ತಿಂಗಳ ಬದಲಾವಣೆಯು ನೆಗೆಟಿವ್​ ಆಗಿದೆ ಮತ್ತು ಹಣದುಬ್ಬರವನ್ನು ತಗ್ಗಿಸುತ್ತದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ.

“ನಮ್ಮ ಅರ್ಥದಲ್ಲಿ ಮುಖ್ಯ ಹಣದುಬ್ಬರವು ಜನವರಿಯಲ್ಲಿ ಉತ್ತುಂಗಕ್ಕೇರಿದೆ ಮತ್ತು ಇಲ್ಲಿಂದ 2022ರ ಕೊನೆಯ ತ್ರೈಮಾಸಿಕದ ವೇಳೆಗೆ ಇದು ಶೇಕಡಾ ನಾಲ್ಕು ಗುರಿಗೆ ಇಳಿಯುತ್ತದೆ. ಇದು ನಮಗೆ ನೀತಿ ದರಗಳನ್ನು ಕಡಿಮೆ ಮಾಡಲು ಮತ್ತು ಅಕಾಮಡೇಟಿವ್ ನಿಲವಿನೊಂದಿಗೆ ಪರಿಶ್ರಮಿಸಲು ಸ್ಥಳಾವಕಾಶವನ್ನು ಒದಗಿಸಿದೆ. ಇದರಿಂದ ನಾವು ಚೇತರಿಕೆಯನ್ನು ವೇಗಗೊಳಿಸಲು ಮತ್ತು ವಿಸ್ತರಿಸಲು ಎಲ್ಲ ಶಕ್ತಿಗಳನ್ನು ಕೇಂದ್ರೀಕರಿಸಬಹುದು,” ಎಂದಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಅಬಕಾರಿ ಸುಂಕಗಳಲ್ಲಿನ ಕಡಿತವು ಇನ್ನೂ ಆರ್ಥಿಕತೆಯ ಮೂಲಕ ಕೆಲಸ ಮಾಡುತ್ತಿದೆ ಮತ್ತು ಈ ಒತ್ತಡಗಳನ್ನು ನಿಗ್ರಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: FY27ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿಯಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಲಿದೆ ಎಂದ ಸಿಇಎ ಅನಂತ ನಾಗೇಶ್ವರನ್

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ