India GDP: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 9.2ಕ್ಕೆ ರೂ. 147.5 ಲಕ್ಷ ಕೋಟಿಗೆ ಬೆಳವಣಿಗೆ ನಿರೀಕ್ಷೆ
ಹಣಕಾಸು ವರ್ಷ 2022ರಲ್ಲಿ ಜಿಡಿಪಿ ಶೇಕಡಾ 9.2ರಷ್ಟು ಬೆಳವಣಿಗೆ ಆಗಬಹುದು ಮತ್ತು 147.5 ಲಕ್ಷ ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜು ಮಾಡಲಾಗಿದೆ.
2022ರ ಮಾರ್ಚ್ಗೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (GDP) ಶೇ 9.2ಕ್ಕೆ ರೂ. 147.5 ಲಕ್ಷ ಕೋಟಿಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಚೌಧರಿ, ಹೂಡಿಕೆ ಮತ್ತು ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದಿದ್ದಾರೆ. “ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಬಿಡುಗಡೆ ಮಾಡಿದ ಜಿಡಿಪಿಯ ಮೊದಲ ಮುಂಗಡ ಮತ್ತು ಮೊದಲ ಪರಿಷ್ಕೃತ ಅಂದಾಜಿನ ಪ್ರಕಾರ, ನೈಜ ಜಿಡಿಪಿಯ ಗಾತ್ರವನ್ನು 2014-15ರಲ್ಲಿ ಇದ್ದ ರೂ. 105.3 ಲಕ್ಷ ಕೋಟಿಯಿಂದ 2020-21ರಲ್ಲಿ ರೂ. 135.6 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ ಮತ್ತು ಅಂದಾಜಿಸಲಾಗಿದೆ. 2021-22ರಲ್ಲಿ ರೂ. 147.5 ಲಕ್ಷ ಕೋಟಿ ಆಗಲಿದೆ,” ಎಂದು ಅವರು ಹೇಳಿದ್ದಾರೆ.
ಮೊದಲ ಮುಂಗಡ ಅಂದಾಜಿನ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಶೇ 9.2ರಷ್ಟು ವಿಸ್ತರಿಸಿದ ನಂತರ ಭಾರತೀಯ ಆರ್ಥಿಕತೆಯು ಹಣಕಾಸು ವರ್ಷ 2023ರಲ್ಲಿ ಶೇ 8ರಿಂದ ಶೇ 8.5ಕ್ಕೆ ಬೆಳೆಯಲಿದೆ ಎಂದು ಹಣಕಾಸು ಸಚಿವಾಲಯವು 2021-22ರ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದೆ. ಜಾಗತಿಕ ಏಜೆನ್ಸಿಗಳ ಮುನ್ಸೂಚನೆಗಳನ್ನು ಉಲ್ಲೇಖಿಸಿ, ಕಳೆದ ಹಣಕಾಸು ವರ್ಷದಲ್ಲಿ ಕಂಡ ಶೇ 7.3ರ ಸಂಕೋಚನದಿಂದ ಆರ್ಥಿಕತೆಯ ಬಲವಾದ ಮರುಕಳಿಸುವಿಕೆ ಹಣಕಾಸು ವರ್ಷ 2022-24ರಲ್ಲಿ ಅದನ್ನು “ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ” ಎಂಬುದಾಗಿ ಇರಿಸಿದೆ ಎಂದು ಸಮೀಕ್ಷೆ ಹೇಳಿದೆ.
ಎಲ್ಲ ಸ್ಥೂಲ ಸೂಚಕಗಳು ಆರ್ಥಿಕತೆಯು ಸವಾಲುಗಳನ್ನು ಎದುರಿಸಲು ಉತ್ತಮ ಸ್ಥಿತಿಯಲ್ಲಿದೆ ಎಂದು ಸೂಚಿಸಿದೆ. ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯಲ್ಲಿ ಚೇತರಿಕೆಗೆ ಸಹಾಯ ಮಾಡಿದೆ ಎಂದು ವರದಿ ಹೇಳಿದೆ. “ವ್ಯಾಪಕ ಲಸಿಕೆ ವ್ಯಾಪ್ತಿ, ಪೂರೈಕೆ ಕಡೆಯ ಸುಧಾರಣೆಗಳಿಂದ ಲಾಭಗಳು ಮತ್ತು ನಿಯಮಗಳ ಸರಾಗಗೊಳಿಸುವಿಕೆ, ದೃಢವಾದ ರಫ್ತು ಬೆಳವಣಿಗೆ ಮತ್ತು ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಹಣಕಾಸಿನ ಸ್ಥಳಾವಕಾಶ ಲಭ್ಯತೆ” ಮೂಲಕ ಬೆಳವಣಿಗೆಯನ್ನು ಬೆಂಬಲಿಸಲಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯು ನಿರೀಕ್ಷೆ ಮಾಡಿದ ಶೇ 9ರ ವಿಸ್ತರಣೆಗೆ ಹೋಲಿಸಿದರೆ ಮುಂದಿನ ಆರ್ಥಿಕ ವರ್ಷದ ಸಮೀಕ್ಷೆಯ ನಿರೀಕ್ಷೆಗಳು ಸಂಪ್ರದಾಯಬದ್ಧವಾಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಮೀಕ್ಷೆಯು ಶೇ 9.2ರಷ್ಟು ಬೆಳವಣಿಗೆಯ ದರವನ್ನು ಯೋಜಿಸಿದ್ದು, ಇದು ಕೈಗಾರಿಕಾ ವಲಯ ಶೇ 11.2ರ ಬೆಳವಣಿಗೆ ಮತ್ತು ಸೇವಾ ವಲಯ ಶೇ 8.2ರ ಬೆಳವಣಿಗೆಯನ್ನು ಹೊಂದಿದೆ. ಹಣಕಾಸು ವರ್ಷ 2022ರಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಯು ಶೇ 3.9ರಲ್ಲಿ ಕಂಡುಬಂದಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತೀಯ ಆರ್ಥಿಕತೆಯು ವೇಗವನ್ನು ಪಡೆದುಕೊಂಡಿದ್ದು, ಎರಡನೇ ಅಲೆಯ ನಂತರ ಕೊರೊನಾ ಸಂಬಂಧಿತ ಅಡೆತಡೆಗಳು ಗಮನಾರ್ಹವಾಗಿ ಕಡಿಮೆಯಾದ ಕಾರಣ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ.
ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಒಂದು ವರ್ಷದ ಹಿಂದಿನಿಂದ ಶೇ 8.4ರಷ್ಟು ಬೆಳವಣಿಗೆಯಾಗಿದ್ದು, ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗದ ದರಗಳಲ್ಲಿ ಒಂದಾಗಿದೆ. ಮೊದಲ ಮುಂಗಡ ಅಂದಾಜಿನ ಪ್ರಕಾರ, 2022ರ ಮಾರ್ಚ್ಗೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 9.2ರಷ್ಟು ಬೆಳೆಯಬಹುದು.
ಇದನ್ನೂ ಓದಿ: Economic Survey 2022: ಆಶಾದಾಯಕ ಬಜೆಟ್ನ ಮುನ್ಸೂಚನೆ ನೀಡಿದ ಆರ್ಥಿಕ ಸಮೀಕ್ಷೆ, ಶೇ 9 ದಾಟಿದ ಜಿಡಿಪಿ ಅಂದಾಜು