ಉತ್ತರಾಖಂಡದ ಹಿಮಪಾತ; ಕೊನೆಯ ಶವ ಪತ್ತೆಯಾಗುವ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಉತ್ತರಾಖಂಡದ ಚಮೋಲಿಯ ಮಾನಾ ಗ್ರಾಮದ ಬಳಿಯ ಬಿಆರ್‌ಒ ಶಿಬಿರದಲ್ಲಿ ಭಾರಿ ಹಿಮಪಾತ ಸಂಭವಿಸಿ 54 ಕಾರ್ಮಿಕರು ಹಿಮದ ಅಡಿಯಲ್ಲಿ ಸಿಲುಕಿದ್ದರು. ರಕ್ಷಣಾ ತಂಡಗಳು ಅವರಲ್ಲಿ 46 ಕಾರ್ಮಿಕರನ್ನು ರಕ್ಷಿಸಿವೆ. ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹಿಮಾಚಲ ಪ್ರದೇಶದ ಮೊಹಿಂದ್ರ ಪಾಲ್ ಮತ್ತು ಜಿತೇಂದ್ರ ಸಿಂಗ್, ಉತ್ತರ ಪ್ರದೇಶದ ಮಂಜಿತ್ ಯಾದವ್ ಮತ್ತು ಉತ್ತರಾಖಂಡದ ಅಲೋಕ್ ಯಾದವ್ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಯ 3ನೇ ದಿನವಾದ ಇಂದು ಹಿಮಪಾತದಲ್ಲಿ ಸಿಕ್ಕಿಬಿದ್ದ ಕೊನೆಯ ಕಾರ್ಮಿಕನ ಮೃತದೇಹವನ್ನು ಪತ್ತೆ ಮಾಡಲಾಗಿದೆ.
ಚಮೋಲಿ (ಮಾರ್ಚ್ 2): ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿಯ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಶಿಬಿರದಲ್ಲಿ ಭಾರಿ ಹಿಮಪಾತ ಸಂಭವಿಸಿ 54 ಕಾರ್ಮಿಕರು ಹಿಮದ ಕೆಳಗೆ ಹೂತು ಹೋಗಿದ್ದರು. ರಕ್ಷಣಾ ತಂಡಗಳು ಅವರಲ್ಲಿ 46 ಕಾರ್ಮಿಕರನ್ನು ರಕ್ಷಿಸಿವೆ. ಆದರೆ 8 ಕಾರ್ಮಿಕರು ದುರಂತವಾಗಿ ಸಾವನ್ನಪ್ಪಿದ್ದಾರೆ. ಇಂದು ಕೂಡ ಹುಡುಕಾಟ ಮುಂದುವರಿದಿತ್ತು. ಸುಧಾರಿತ ತಂತ್ರಜ್ಞಾನ ಮತ್ತು ವೈಮಾನಿಕ ಬೆಂಬಲವನ್ನು ಬಳಸಿಕೊಂಡು ಏಜೆನ್ಸಿಗಳು ಇಂದು ಒಟ್ಟು ನಾಲ್ವರ ಶವಗಳನ್ನು ಪತ್ತೆಹಚ್ಚಿವೆ. ಈ ಮೂಲಕ ಹಿಮಪಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಹಿಮಾಚಲ ಪ್ರದೇಶದ ಮೊಹಿಂದ್ರ ಪಾಲ್ ಮತ್ತು ಜಿತೇಂದ್ರ ಸಿಂಗ್, ಉತ್ತರ ಪ್ರದೇಶದ ಮಂಜಿತ್ ಯಾದವ್ ಮತ್ತು ಉತ್ತರಾಖಂಡದ ಅಲೋಕ್ ಯಾದವ್ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಯ 3ನೇ ದಿನವಾದ ಇಂದು ಹಿಮಪಾತದಲ್ಲಿ ಸಿಕ್ಕಿಬಿದ್ದ ಕೊನೆಯ ಕಾರ್ಮಿಕನ ಮೃತದೇಹವನ್ನು ಪತ್ತೆ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ