ಅಂಬರೀಶ್ ಮೊಮ್ಮಗನಿಗೆ ಕಲಘಟಗಿ ತೊಟ್ಟಿಲು; ಮಾರ್ಚ್ 14ರಂದು ನಾಮಕರಣ
ಚಿತ್ರಗಾರ ಕುಟುಂಬ ಸುಮಾರು 4 ತಲೆಮಾರುಗಳಿಂದ ತೊಟ್ಟಿಲು ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಕಲಾವಿದ ಶ್ರೀಧರ್ ಅವರು ರೆಬಲ್ ಸ್ಟಾರ್ ಅಂಬರೀಷ್ ಅವರ ಮೊಮ್ಮಗನಿಗಾಗಿ ವಿಶಿಷ್ಟವಾದ ಈ ತೊಟ್ಟಿಲು ತಯಾರಿಸಿದ್ದಾರೆ. ತೊಟ್ಟಿಲಲ್ಲಿ ಕೃಷ್ಣನ ಅವತಾರ, ದಶಾವತಾರದ ಚಿತ್ರ ಬಿಡಿಸಿದ್ದಾರೆ. ರಾಜ್ಕುಮಾರ್ ಮನೆಗೂ ಕಲಘಟಗಿ ತೊಟ್ಟಿಲು ಹೋಗಿತ್ತು.
ಅಭಿಷೇಕ ಅಂಬರೀಶ್ ಪುತ್ರನ ನಾಮಕರಣಕ್ಕೆ ಕಲಘಟಗಿಯಲ್ಲಿ ತೊಟ್ಟಿಲು ತಯಾರಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿಯ ಚಿತ್ರಗಾರ ಕುಟುಂಬದಿಂದ ತೊಟ್ಟಿಲು ನಿರ್ಮಾಣ ಮಾಡಲಾಗಿದೆ.ಕಲಾವಿದ ಶ್ರೀಧರ್ ಸೌಕಾರ್ ಅವರು ಕಳೆದ ಎರಡು ತಿಂಗಳಿಂದ ತೊಟ್ಟಿಲಿನ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 14ರಂದು ಅಂಬಿ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದೆ. ಈ ಮೊದಲು ಇದೇ ಚಿತ್ರಗಾರ ಮನೆಯಿಂದ ಯಶ್ ಮನೆಗೆ ತೊಟ್ಟಿಲು ಹೋಗಿತ್ತು. ಅಂಬರೀಶ್ (Ambareesh) ಆಸೆಯಂತೆ ಕಲಘಟಗಿಯಲ್ಲಿ ತೊಟ್ಟಿಲು ತಯಾರಿಸಲಾಗಿತ್ತು. ಈಗ ಅಂಬರೀಷ ಮೊಮ್ಮಗನ ನಾಮಕರಣಕ್ಕೂ ಕಲಘಟಗಿಯಿಂದ ತೊಟ್ಟಿಲು ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.