Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್

ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್

ಮಂಜುನಾಥ ಸಿ.
|

Updated on:Nov 24, 2024 | 2:26 PM

Ambhareesh: ಅಂಬರೀಶ್ ಅವರ ಆರನೇ ವರ್ಷದ ಪುಣ್ಯ ಸ್ಮರಣೆ ಇಂದು (ನವೆಂಬರ್ 24) ಸುಮಲತಾ ಅಂಬರೀಶ್, ರಾಕ್​ಲೈನ್ ವೆಂಕಟೇಶ್, ದೊಡ್ಡಣ್ಣ ಇನ್ನೂ ಕೆಲವರು ಕಂಠೀರವ ಸ್ಟುಡಿಯೋದ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಇಂದು (ನವೆಂಬರ್ 24) ಅಂಬರೀಶ್ ಅವರ ಆರನೇ ವರ್ಷದ ಪುಣ್ಯ ಸ್ಮರಣೆ. 2018ರ ನವೆಂಬರ್ 24 ರಂದು ಅವರು ನಿಧನ ಹೊಂದಿದ್ದರು. ಕಂಠೀರವ ಸ್ಟುಡಿಯೋದ ಅಂಬರೀಶ್ ಸಮಾಧಿಗೆ ಭೇಟಿ ನೀಡಿದ್ದ ಸುಮಲತಾ ಅಂಬರೀಶ್ ಅವರು ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಬರೀಶ್ ಗೆಳೆಯರಾದ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಇನ್ನೂ ಕೆಲವರು ಹಾಜರಿದ್ದರು. ಪೂಜೆ ಬಳಿಕ ಮಾತನಾಡಿದ ಸುಮಲತಾ ಅಂಬರೀಶ್ ಅವರು, ಅಭಿಷೇಕ್ ಅಂಬರೀಶ್​ಗೆ ಗಂಡು ಮಗು ಆಗಿದ್ದು, ಆ ಮೂಲಕ ಅಂಬರೀಶ್ ಅವರು ನಮ್ಮ ಮನೆಗೆ ಮರಳಿದ್ದಾರೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 24, 2024 02:26 PM