Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ

ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ರಮೇಶ್ ಬಿ. ಜವಳಗೇರಾ

Updated on: Nov 24, 2024 | 7:23 PM

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್​ 3ಕ್ಕೆ 3ರಲ್ಲಿ ಗೆದ್ದು ಬೀಗಿದ್ದು, ಇದರಿಂದ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಗೆ ಮುಖಭಂಗವಾಗಿದೆ. ಇನ್ನು ಈ ಸೋಲಿಗೆ ಯಡಿಯುರಪ್ಪ ಅವರ ಪುತ್ರ ವಿಜಯೇಂದ್ರ ಕಾರಣವೆಂದು ಯತ್ನಾಳ್ ಆರೋಪಿಸಿದ್ದು, ಇದಕ್ಕೆ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ದಾವಣಗೆರೆ, (ನವೆಂಬರ್ 24): ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರಣವೆಂದು ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಇದಕ್ಕೆ ಬಿಎಸ್​ವೈ ಬಣದ ಎಂಪಿ ರೇಣುಕಾಚಾರ್ಯ ಅವರು ಯತ್ನಾಳ್​ಗೆ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿಂದು ಮಾತನಾಡಿದ ರೇಣುಕಾಚಾರ್ಯ, ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ ಎಂದು ತಿರುಗೇಟು ನೀಡಿದ್ದಾರೆ.

ದಿನ ಬೆಳಗಾದ್ರೆ BSY, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ಯತ್ನಾಳ್​ ನೇರ ಕಾರಣ. ರಾಜ್ಯದ ಜನ ವಿಜಯೇಂದ್ರ ನಾಯಕತ್ವವನ್ನ ಒಪ್ಪಿದ್ದಾರೆ. ಬಸನಗೌಡ ಯತ್ನಾಳ್ ತಂಡಕ್ಕೆ ಬೆಲೆ ಕೊಡಬೇಡಿ. ಯಾವ ಕಾರಣಕ್ಕೂ ವಿಜಯೇಂದ್ರ ಅಧ್ಯಕ್ಷ ಸ್ಥಾನ ಬದಲಾಗಲ್ಲ. ಮುಂದಿನ ವಿಧಾನಸಭೆ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ. ಬಸನಗೌಡ ಯತ್ನಾಳ್ ತೋಳ, ವಿಜಯೇಂದ್ರ ಹೋರಿ. ಹೋರಿ ಮುಂದೆ ಓಡುತ್ತಿದ್ರೆ ತೋಳ ಹಿಂದೆ ಓಡುತ್ತಿತ್ತು. ತೋಳ ಏನು ನೋಡಿ ಓಡುತ್ತಿತ್ತು ಆದರೆ, ಅದು ಸಿಗಲಿಲ್ಲ ಎಂದು ವ್ಯಂಗ್ಯವಾಡಿದರು.