ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಪ್ರೀತಿಯ ಹಾರೈಕೆ
ನಟ ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಮುಂತಾದವರು ಸಾಮೂಹಿಕ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು. ಈ ವೇಳೆ ಅವರು ಮಾತನಾಡಿದರು. ‘ಇಲ್ಲಿರುವ ಎಲ್ಲಾ ರೈತರಿಗೆ ಮತ್ತು ರೈತರ ಮಕ್ಕಳಿಗೂ ಒಳ್ಳೆಯದಾಗಲಿ’ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಶುಭ ಕೋರಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಮಂಡ್ಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಎಲ್ಲರಿಗೂ ಅವರು ಶುಭ ಹಾರೈಸಿದರು. ‘ಇವತ್ತು ಮದುವೆ ಆದ ಎಲ್ಲ ಗಂಡು-ಹೆಣ್ಣಿಗೆ ಜೀವನ ಚೆನ್ನಾಗಿರಲಿ. ಜೀವನದಲ್ಲಿ ಖುಷಿ, ನೆಮ್ಮದಿ ಇರಲಿ. ಇಲ್ಲಿ ಇರುವ ಎಲ್ಲ ರೈತರಿಗೆ ಹಾಗೂ ರೈತರ ಮಕ್ಕಳಿಗೆ ಒಳ್ಳೆಯದಾಗಲಿ’ ಎಂದು ವಿಜಯಲಕ್ಷ್ಮಿ ಅವರು ಶುಭ ಕೋರಿದರು. ಈ ವೇಳೆ ನಟ ಧನ್ವೀರ್ ಕೂಡ ಮಾತನಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos