Flight Tickets: ಫುಯಲ್ ಚಾರ್ಜ್ ಹಿಂಪಡೆದ ಇಂಡಿಗೋ ಏರ್ಲೈನ್; ಇಳಿಕೆಯಾಗಲಿದೆ ವಿಮಾನ ಟಿಕೆಟ್ ಬೆಲೆ

|

Updated on: Jan 04, 2024 | 2:17 PM

Indigo Airline Removes Fuel Charges: ದೇಶದ ಅತಿದೊಡ್ಡ ವೈಮಾನಿಕ ಸಂಸ್ಥೆ ಇಂಡಿಗೋ ಏರ್ಲೈನ್ 3 ತಿಂಗಳ ಹಿಂದೆ ವಿಧಿಸಿದ್ದ ಫುಯಲ್ ಚಾರ್ಜ್ ಅನ್ನು ಹಿಂಪಡೆದುಕೊಂಡಿದೆ. ಅಕ್ಟೋಬರ್ 5ರಂದು ವಿವಿಧ ದೂರದ ಸ್ಥಳಗಳಿಗೆ ವಿಮಾನ ಟಿಕೆಟ್ ಮೇಲೆ ಇಂಡಿಗೋ ಸಂಸ್ಥೆ 1,000 ರೂವರೆಗೂ ಇಂಧನ ಶುಲ್ಕ ವಿಧಿಸಿತ್ತು. ಇತ್ತೀಚೆಗೆ ಜೆಟ್ ಇಂಧನದ ಬೆಲೆ ಕಡಿಮೆ ಆದ ಕಾರಣಕ್ಕೆ ಫುಯಲ್ ಚಾರ್ಜ್ ಅನ್ನು ಇಳಿಸಿರುವುದಾಗಿ ಇಂಡಿಗೋ ಏರ್ಲೈನ್ ಸಂಸ್ಥೆ ಹೇಳಿಕೆ ನೀಡಿದೆ.

Flight Tickets: ಫುಯಲ್ ಚಾರ್ಜ್ ಹಿಂಪಡೆದ ಇಂಡಿಗೋ ಏರ್ಲೈನ್; ಇಳಿಕೆಯಾಗಲಿದೆ ವಿಮಾನ ಟಿಕೆಟ್ ಬೆಲೆ
ಇಂಡಿಗೋ ಏರ್ಲೈನ್
Follow us on

ನವದೆಹಲಿ, ಜನವರಿ 4: ಅಗ್ಗದ ದರದಲ್ಲಿ ವಿಮಾನ ಸೇವೆ ಒದಗಿಸುವ ಇಂಡಿಗೋ ಏರ್ಲೈನ್ಸ್​ನ ಪ್ರಯಾಣ ದರ (flight ticket cost) ಇನ್ನಷ್ಟು ಕಡಿಮೆ ಆಗಲಿದೆ. ಇಂಡಿಗೋ ಸಂಸ್ಥೆ ತನ್ನ ಇಂಧನ ಶುಲ್ಕವನ್ನು (fuel charge) ಹಿಂಪಡೆದುಕೊಂಡಿದೆ. ಇದರೊಂದಿಗೆ ಅದರ ಟಿಕೆಟ್ ದರಗಳೂ ಕಡಿಮೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಇಂಡಿಗೋ ಏರ್ಲೈನ್ಸ್ ಒಂದು ಟಿಕೆಟ್​ಗೆ ಒಂದು ಸಾವಿರ ರೂವರೆಗೂ ಫುಯಲ್ ಚಾರ್ಜ್ ಎಂದು ಹೆಚ್ಚುವರಿ ಹಣ ವಿಧಿಸುತ್ತಿತ್ತು. ವಿಮಾನದ ಇಂಧನವಾದ ಎಟಿಎಫ್ ಅಥವಾ ಜೆಟ್ ಇಂಧನದ (ATF- Aviation turbine fuel) ಬೆಲೆ ಹೆಚ್ಚಿದ್ದ ಕಾರಣ ಅಕ್ಟೋಬರ್ 5ರಿಂದ ಫುಯೆಲ್ ಚಾರ್ಜ್ ಹಾಕಿತ್ತು. ಇತ್ತೀಚೆಗೆ ಇಂಧನ ಬೆಲೆ ಕಡಿಮೆಗೊಂಡ ಕಾರಣಕ್ಕೆ ಮೂರು ತಿಂಗಳ ಬಳಿಕ ಈಗ ಶುಲ್ಕವನ್ನು ಹಿಂಪಡೆದುಕೊಂಡಿದೆ.

‘ಎಟಿಎಫ್ ಬೆಲೆಗಳಲ್ಲಿ ಇತ್ತೀಚೆಗೆ ಇಳಿಮುಖ ಅಗಿರುವುದರಿಂದ ಇಂಡಿಗೋ ಫುಯಲ್ ಚಾರ್ಜ್ ಅನ್ನು ಹಿಂಪಡೆಯುತ್ತಿದೆ. ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಇಚ್ಛಿಸುತ್ತೇವೆ’ ಎಂದು ವಿಮಾನ ಸಂಸ್ಥೆಯೇ ಖುದ್ದಾಗಿ ಮಾಹಿತಿ ನೀಡಿದೆ. ಇಂಡಿಗೋದ ದೇಶೀಯ ಮತ್ತು ಅಂತರ ದೇಶೀಯ ವಿಮಾನ ಹಾರಾಟ ಎಲ್ಲಕ್ಕೂ ಈ ಹೊಸ ಕ್ರಮ ಅನ್ವಯ ಆಗುತ್ತದೆ.

ಇದನ್ನೂ ಓದಿ: ಬಜೆಟ್​ಗೆ ಸಿದ್ಧತೆ ಎಷ್ಟು ತಿಂಗಳು ಮುಂಚೆ ಶುರುವಾಗುತ್ತೆ? ಯೂನಿಯನ್ ಬಜೆಟ್ ಬಗ್ಗೆ ತಿಳಿಯಬೇಕಾದ ಕೆಲ ಸಂಗತಿಗಳು

ಅಕ್ಟೋಬರ್​ನಲ್ಲಿ ಇಂಡಿಗೋ ವಿಧಿಸಿದ್ದ ಫುಯೆಲ್ ಚಾರ್ಜ್ ಎಷ್ಟು?

  • 500 ಕಿಮೀವರೆಗಿನ ದೂರದ ಸ್ಥಳಕ್ಕೆ: 300 ರೂ
  • 501ರಿಂದ 1000 ಕಿಮೀವರೆಗಿನ ದೂರದ ಸ್ಥಳಕ್ಕೆ: 400 ರೂ
  • 1001ರಿಂದ 1500 ಕಿಮೀವರೆಗಿನ ದೂರದ ಸ್ಥಳಕ್ಕೆ: 550 ರೂ
  • 1501ರಿಂದ 2500 ಕಿಮೀವರೆಗಿನ ದೂರದ ಸ್ಥಳಕ್ಕೆ: 650 ರೂ
  • 2501ರಿಂದ 3500 ಕಿಮೀವರೆಗಿನ ದೂರದ ಸ್ಥಳಕ್ಕೆ: 800 ರೂ
  • 3,500 ಕಿಮೀಗಿಂತ ಹೆಚ್ಚಿನ ದೂರದ ಸ್ಥಳಕ್ಕೆ: 1,000 ರೂ ಇಂಧನ ಶುಲ್ಕ

ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ

ಇಂಡಿಗೋ ಏರ್ಲೈನ್ ಭಾರತದ ಅತಿದೊಡ್ಡ ವೈಮಾನಿಕ ಸಂಸ್ಥೆಯಾಗಿದೆ. ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಸೇವೆ ಒದಗಿಸುವ ಇದು 342 ವಿಮಾನಗಳನ್ನು ಹೊಂದಿದೆ. ಬೆಂಗಳೂರು ಸೇರಿದಂತೆ ಐದಾರು ನಗರಗಳು ಇದರ ಮುಖ್ಯ ನೆಲೆಯಾಗಿದೆ. ಭಾರತದಲ್ಲಿ 85 ಮತ್ತು ವಿದೇಶಗಳಲ್ಲಿ 33 ಸ್ಥಳಗಳಿಗೆ ಇದರ ವಿಮಾನ ಸೇವೆ ಇದೆ. 32 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳ ಬಳಗವೂ ಇಂಡಿಗೋಗೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ