AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Rates: ಪೋಸ್ಟ್ ಆಫೀಸ್ vs ಎಸ್​ಬಿಐ; ಎಲ್ಲಿ ಠೇವಣಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಒಂದು ಹೋಲಿಕೆ

SBI FD rates vs PO Term Deposit: ಸರ್ಕಾರ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸಿದೆ. ಅದರಲ್ಲಿ ಅಂಚೆ ಕಚೇರಿಯ 3 ವರ್ಷದ ಠೇವಣಿಗೆ ಬಡ್ಡಿದರ ಶೇ. 7.10ಕ್ಕೆ ಹೆಚ್ಚಾಗಿದೆ. ಎಸ್​ಬಿಐನ ಎರಡು ವರ್ಷದ ಠೇವಣಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಮೂರು ವರ್ಷದ ಠೇವಣಿಗೆ ಶೇ. 6.75ರಷ್ಟು ಬಡ್ಡಿ ಸಿಗುತ್ತದೆ. ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 0.50ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಅಂಚೆ ಕಚೇರಿಯಲ್ಲಿ ಈ ಸೌಲಭ್ಯ ಇಲ್ಲ.

FD Rates: ಪೋಸ್ಟ್ ಆಫೀಸ್ vs ಎಸ್​ಬಿಐ; ಎಲ್ಲಿ ಠೇವಣಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಒಂದು ಹೋಲಿಕೆ
ಠೇವಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 04, 2024 | 12:12 PM

Share

ಈ ಬಾರಿ ಸರ್ಕಾರ ಬಡ್ಡಿ ದರ ಹೆಚ್ಚಿಸಿದ ಎರಡು ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ಪೈಕಿ ಅಂಚೆ ಕಚೇರಿಯ ಮೂರು ವರ್ಷದ ಟರ್ಮ್ ಡೆಪಾಸಿಟ್ (PO Term Deposit Rates) ದರವೂ ಒಂದು. ಶೇ. 7ರಷ್ಟು ಇದ್ದ ವಾರ್ಷಿಕ ಬಡ್ಡಿದರವನ್ನು ಶೇ. 7.1ರಷ್ಟು ಹೆಚ್ಚಿಸಲಾಗಿದೆ. ಅದೇ ವೇಳೆ, ಹಲವು ಬ್ಯಾಂಕುಗಳು ಕೂಡ ಡೆಪಾಸಿಟ್ ದರಗಳನ್ನು ಹೆಚ್ಚಿಸಿವೆ. ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಎನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಠೇವಣಿ ದರ ಹೆಚ್ಚಾಗಿದೆ. ಇತರ ಸರ್ಕಾರಿ ಬ್ಯಾಂಕುಗಳಾದ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇತ್ತೀಚೆಗೆ ದರ ಹೆಚ್ಚಿಸಿವೆ. ಎಚ್​ಡಿಎಫ್​ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಇತ್ಯಾದಿ ಖಾಸಗಿ ಬ್ಯಾಂಕುಗಳೂ ಕೂಡ ಠೇವಣಿ ದರ ಹೆಚ್ಚಿಸಲು ಹಿಂದೆ ಬಿದ್ದಿಲ್ಲ. ಅಂಚೆ ಕಚೇರಿ ಮತ್ತು ಎಸ್​ಬಿಐನ ಎಫ್​ಡಿ ದರಗಳನ್ನು ಹೋಲಿಸುವುದಾದರೆ…

ಎಸ್​ಬಿಐ ಮೂರು ವರ್ಷಗಳ ಎಫ್​ಡಿ ದರ…

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ತನ್ನ ಎಲ್ಲಾ ಅವಧಿ ಠೇವಣಿಗಳ ದರಗಳನ್ನು ಹೆಚ್ಚಿಸಿದೆ. ಎರಡು ಕೋಟಿ ರೂ ಒಳಗಿನ ಡೆಪಾಸಿಟ್​ಗಳ ದರ ಹೆಚ್ಚಾಗಿದೆ. ಮೂರು ವರ್ಷದಿಂದ ಐದು ವರ್ಷದೊಳಗಿನ ಅವಧಿಯ ಠೇವಣಿಗಳಿಗೆ 25 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಿಸಲಾಗಿದೆ. ಡಿಸೆಂಬರ್ 27ರಿಂದ ಹೊಸ ದರ ಅನ್ವಯ ಆಗಿದ್ದು, ಅದರ ಪ್ರಕಾರ ಈ 3-5 ವರ್ಷದ ಠೇವಣಿಗಳಿಗೆ ಶೇ. 6.75ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: Interest Rates: ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸಿದ ಸರ್ಕಾರ; ಸುಕನ್ಯಾ ಸಮೃದ್ಧಿ, ಪೋಸ್ಟ್ ಆಫೀಸ್​ನ ಠೇವಣಿ ದರ ಹೆಚ್ಚಳ

ಇದಕ್ಕೆ ಹೋಲಿಸಿದರೆ ಅಂಚೆ ಕಚೇರಿಯಲ್ಲಿ ಇದೇ ಅವಧಿಗೆ ಹೆಚ್ಚಿನ ಬಡ್ಡಿ ಸಿಗುತ್ತದೆ. ಪೋಸ್ಟ್ ಆಫೀಸ್​ನ 3 ವರ್ಷದ ಠೇವಣಿಗೆ ಶೇ. 7.10ರಷ್ಟು ಬಡ್ಡಿ ನೀಡಲಾಗುತ್ತದೆ. ಐದು ವರ್ಷದ ಅಂಚೆ ಕಚೇರಿ ಟರ್ಮ್ ಡೆಪಾಸಿಟ್​ಗೆ ಬರೋಬ್ಬರಿ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.

ಅಂಚೆ ಕಚೇರಿಯ ಒಂದು ವರ್ಷದ ಡೆಪಾಸಿಟ್​ಗೆಯೇ ಶೇ. 6.9ರಷ್ಟು ಬಡ್ಡಿ ಬರುತ್ತದೆ. ಎರಡು, ಮೂರು ಮತ್ತು ಐದು ವರ್ಷದ ಠೇವಣಿಗೆ ಕ್ರಮವಾಗಿ ಶೇ. 7, ಶೇ. 7.1 ಮತ್ತು ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಇನ್ನು ಪೋಸ್ಟ್ ಆಫೀಸ್​ನ ಆರ್​ಡಿ ಪ್ಲಾನ್​ಗೆ ಶೇ. 6.5ರಷ್ಟು ಬಡ್ಡಿ ಕೊಡಲಾಗುತ್ತದೆ.

ಇದನ್ನೂ ಓದಿ: ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ

ಆದರೆ, ಎಸ್​ಬಿಐನ ಎರಡು ವರ್ಷದ ಠೇವಣಿಗೆ ಅಂಚೆ ಕಚೇರಿಯಷ್ಟೇ ಬಡ್ಡಿ ಸಿಗುತ್ತದೆ. ಎಸ್​ಬಿಐ 2ರಿಂದ 3 ವರ್ಷದೊಳಗಿನ ಅವಧಿಯ ಠೇವಣಿಗೆ ಶೇ. 7ರಷ್ಟು ಬಡ್ಡಿ ಕೊಡುತ್ತದೆ. ಆದರೆ, ಬ್ಯಾಂಕುಗಳಲ್ಲಿ ವಿಶೇಷವೆಂದರೆ ಹಿರಿಯ ನಾಗರಿಕರ ಠೇವಣಿಗಳಿಗೆ 50 ಬೇಸಿಸ್ ಅಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ