AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಫೋಸಿಸ್ ಭಾರತೀಯ ಮೂಲದವರನ್ನು, ತಾಯಂದಿರನ್ನು ನೇಮಿಸಿಕೊಳ್ಳದಂತೆ ಸೂಚಿಸಿದೆ -ಇನ್ಫಿ ಮಾಜಿ ಮಾನವ ಸಂಪನ್ಮೂಲ ಅಧಿಕಾರಿ

Infosys Human Resource: ಭಾರತ ಮೂಲದ ಐಟಿ ಸಂಸ್ಥೆಯು ಭಾರತೀಯ ಮೂಲದವರನ್ನು, ಮಕ್ಕಳಿರುವ ಮಹಿಳೆಯರನ್ನು ಮತ್ತು 50 ಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ನೇಮಿಸಿಕೊಳ್ಳದಂತೆ ಕೇಳಿಕೊಂಡಿದೆ ಎಂದು ಮಾಜಿ ಇನ್ಫೋಸಿಸ್ ಮಾನವ ಸಂಪನ್ಮೂಲ ಮಹಿಳಾ ವೈಸ್​ ಪ್ರೆಸಿಡೆಂಟ್ ಹೇಳಿದ್ದಾರೆ.

ಇನ್ಫೋಸಿಸ್ ಭಾರತೀಯ ಮೂಲದವರನ್ನು, ತಾಯಂದಿರನ್ನು ನೇಮಿಸಿಕೊಳ್ಳದಂತೆ ಸೂಚಿಸಿದೆ -ಇನ್ಫಿ ಮಾಜಿ ಮಾನವ ಸಂಪನ್ಮೂಲ ಅಧಿಕಾರಿ
ಇನ್ಫೋಸಿಸ್ ಭಾರತೀಯ ಮೂಲದವರನ್ನು, ತಾಯಂದಿರನ್ನು ನೇಮಿಸಿಕೊಳ್ಳದಂತೆ ಸೂಚಿಸಿತ್ತು - ಇನ್ಫಿ ಮಾಜಿ ಮಾನವ ಸಂಪನ್ಮೂಲ ಅಧಿಕಾರಿ
TV9 Web
| Edited By: |

Updated on: Oct 10, 2022 | 1:52 PM

Share

ಭಾರತ ಮೂಲದ ಐಟಿ ಸಂಸ್ಥೆಯು ಭಾರತೀಯ ಮೂಲದವರನ್ನು, ಮಕ್ಕಳಿರುವ ಮಹಿಳೆಯರನ್ನು ಮತ್ತು 50 ಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ನೇಮಿಸಿಕೊಳ್ಳದಂತೆ ಕೇಳಿಕೊಂಡಿದೆ ಎಂದು ಮಾಜಿ ಇನ್ಫೋಸಿಸ್ ಮಾನವ ಸಂಪನ್ಮೂಲ (ಎಚ್‌ಆರ್ Former Infosys Human Resource) ಮಹಿಳಾ ವೈಸ್​ ಪ್ರೆಸಿಡೆಂಟ್ ಹೇಳಿದ್ದಾರೆ.

ಇನ್ಫೋಸಿಸ್‌ನ ಎಚ್‌ಆರ್‌ನ ಮಾಜಿ ಉಪಾಧ್ಯಕ್ಷರು ಭಾರತೀಯ ಐಟಿ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಇದೇ ವೇಳೆ ಅಮೆರಿಕದಲ್ಲಿರುವ ಇನ್ಫೋಸಿಸ್ ಕಂಪನಿಯ ಇತರೆ ಕೆಲವು ಹಿರಿಯ ಅಧಿಕಾರಿಗಳು ಸಹ ಕಂಪನಿಯ ಕಾನೂನುಬಾಹಿರ ಮತ್ತು ತಾರತಮ್ಯದ ನೇಮಕಾತಿ ನೀತಿ ಬಗ್ಗೆ ಆರೋಪಿಸಿದ್ದಾರೆ.

ಈ ಸಂಬಂಧ, ಇನ್ಫೋಸಿಸ್‌ನಲ್ಲಿ ಪ್ರತಿಭಾ ಉದ್ಯೋಗಿಗಳ ನೇಮಕಾತಿ ವಿಭಾಗದ ಮಾಜಿ ಉಪಾಧ್ಯಕ್ಷೆ ಜಿಲ್ ಪ್ರೀಜೀನ್ (Jill Prejean) ಅಮರಿಕ ಕೋರ್ಟ್​ನಲ್ಲಿ ವಿಚಾ್ರಣೆಗೆ ಹಾಜರಾಗಿದ್ದರು. ಭಾರತೀಯ ಮೂಲದ ಜನರು, ಮಕ್ಕಳಿರುವ ಮಹಿಳೆಯರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ತಪ್ಪಿಸುವಂತೆ ಇನ್ಫೋಸಿಸ್ ತನ್ನನ್ನು ಕೇಳಿಕೊಂಡಿತ್ತು ಎಂದು US ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ.

ಅಂದಹಾಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇನ್ಫೋಸಿಸ್ ತಾರತಮ್ಯದ ನೇಮಕಾತಿ ನೀತಿ (discriminatory hiring practices) ಆರೋಪಗಳನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿಗೆ. 2013 ರಲ್ಲಿ, ಅಮೇರಿಕಾದ ಇನ್ಫಿ ಉದ್ಯೋಗಿ, ಅರ್ಜಿದಾರ ಬ್ರೆಂಡಾ ಕೊಹ್ಲರ್ ತಮ್ಮ ರಾಷ್ಟ್ರೀಯತೆಯ ಕಾರಣದಿಂದ ಇನ್ಫೋಸಿಸ್ ತನ್ನನ್ನು ತಿರಸ್ಕರಿಸಿತು ಎಂದು ಆರೋಪಿಸಿದ್ದರು. ಯುಎಸ್‌ನಲ್ಲಿ ಇನ್ಫೋಸಿಸ್ ಉದ್ಯೋಗಿಗಳು ದಕ್ಷಿಣ ಏಷ್ಯಾ ಮೂಲದ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ ಎಂದು ದೂರಿನಲ್ಲಿ ಆಗ ಆರೋಪಿಸಲಾಗಿತ್ತು.

ಕೋರ್ಟ್​​ನಲ್ಲಿ ದೂರು ದಾಖಲಾದ ನಂತರ, ಇನ್ಫೋಸಿಸ್ ಕಂಪನಿಯ ಅಧಿಕಾರಿಗಳು ಪ್ರೀಜೀನ್ ಅವರ ದೂರನ್ನು ವಜಾಗೊಳಿಸುವಂತೆ US ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರು. ಮಾಜಿ ಎಚ್‌ಆರ್ -ವಿಪಿ ನಿರ್ದಿಷ್ಟ ಕಾಮೆಂಟ್‌ಗಳನ್ನು ಪುರಾವೆಯಾಗಿ ಹೈಲೈಟ್ ಮಾಡಿಲ್ಲ ಮತ್ತು ಇನ್ನಿತರೆ ಕಾರಣಗಳ ಜೊತೆಗೆ ನ್ಯಾಯವ್ಯಾಪ್ತಿಯ ಕೊರತೆಯಿದೆ ಎಂಬ ಆಧಾರದ ಮೇಲೆ ಕೇಸು ವಜಾಗೊಳಿಸುವಂತೆ ಇನ್ಫೋಸಿಸ್ ಕೋರಿದೆ. ಆದರೆ, ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್‌ನ US ಜಿಲ್ಲಾ ನ್ಯಾಯಾಲಯವು (US District Court for Southern District of New York) ಇನ್ಫೋಸಿಸ್‌ ಮನವಿಯನ್ನು ತಿರಸ್ಕರಿಸಿತು. ಪ್ರತಿಕೂಲವಾದ ಕೆಲಸದ ಪರಿಸ್ಥಿತಿಗಳು ಮತ್ತು ಪ್ರತೀಕಾರದ ವಜಾವನ್ನು ಆರೋಪಿಸಿ ಪ್ರೀಜೀನ್‌ ಸಲ್ಲಸಿರುವ ದೂರಿನ ಪ್ರತಿವಾದಿಗಳಾಗಿ ಇನ್ಫೋಸಿಸ್ ಕಂಪನಿ, ಇಬ್ಬರು ಮಾಜಿ ವ್ಯಾಪಾರ ಪಾಲುದಾರರಾದ ಡಾನ್ ಆಲ್ಬ್ರೈಟ್ ಮತ್ತು ಜೆರ್ರಿ ಕರ್ಟ್ಜ್, ಮತ್ತು ಮಾಜಿ ಹಿರಿಯ ಉಪಾಧ್ಯಕ್ಷ ಮತ್ತು ಸಲಹಾ ನಿರ್ದೇಶಕ ಮಾರ್ಕ್ ಲಿವಿಂಗ್ಸ್ಟನ್ ಅವರನ್ನು ಗುರುತಿಸಲಾಗಿದೆ.

2018 ರಲ್ಲಿ ಇನ್ಫೋಸಿಸ್‌ನಿಂದ ನೇಮಕಗೊಂಡಾಗ ತನಗೆ 59 ವರ್ಷ ವಯಸ್ಸಾಗಿತ್ತು ಎಂದು ಪ್ರೀಜೀನ್ ಹೇಳಿದರು. ಉಪಾಧ್ಯಕ್ಷರು ಮತ್ತು ಪಾಲುದಾರರ ಹಂತಗಳಲ್ಲಿ ಕಾರ್ಯನಿರ್ವಾಹಕರನ್ನು ನೇಮಕ ಮಾಡುವಲ್ಲಿ ಪರಿಣಿತಳಾಗಿ ತಾನು ಕೆಲಸ ಮಾಡುತ್ತಿದ್ದೆ. ತಮ್ಮ ಉದ್ಯೋಗದ ಸಮಯದಲ್ಲಿ “ವಯಸ್ಸು, ಲಿಂಗ ಮತ್ತು ಪಾಲನೆ ಮಾಡುವವರ ಸ್ಥಿತಿಯ ಆಧಾರದ ಮೇಲೆ ಪಾಲುದಾರ ಮಟ್ಟದ ಕಾರ್ಯನಿರ್ವಾಹಕರಲ್ಲಿ ಅಕ್ರಮ ತಾರತಮ್ಯದ ದ್ವೇಷ ಅತಿರೇಕದ ಸಂಸ್ಕೃತಿಯನ್ನು ಕಂಡು ಆಘಾತಕ್ಕೊಳಗಾಗಿದ್ದೆ” ಎಂದು ಪ್ರೀಜೀನ್ ಕೋರ್ಟ್​​ಗೆ ಹೇಳಿದ್ದಾರೆ ಎಂದು indiatoday ಜಾಲತಾಣ ವರದಿ ಮಾಡಿದೆ.

ಪ್ರೀಜೀನ್ ದೂರಿನ ಪ್ರಕಾರ, ಅವರು ತಮ್ಮ ಉದ್ಯೋಗದ ಮೊದಲ ಎರಡು ತಿಂಗಳಲ್ಲಿ ಈ ಅತಿರೇಕದ ಸಂಸ್ಕೃತಿಯನ್ನು ಬದಲಾಯಿಸಲು ಪ್ರಯತ್ನಿಸಿದರಂತೆ. ಆದರೆ “ಇನ್ಫೋಸಿಸ್ ಪಾಲುದಾರರಾದ ಜೆರ್ರಿ ಕರ್ಟ್ಜ್ ಮತ್ತು ಡಾನ್ ಆಲ್ಬ್ರೈಟ್ ಅವರ ಪ್ರತಿರೋಧವನ್ನು ಎದುರಿಸಿದರಂತೆ – ಅವರು ತಮ್ಮ ಆಕ್ಷೇಪಣೆಗಳ ಮುಖಾಂತರ ತನಗೆ ಪ್ರತಿಕೂಲವಾದರು ಮತ್ತು ಅವರ ಕಾನೂನುರೀತ್ಯ ನಡೆದುಕೊಳ್ಳುವುದನ್ನು ತಪ್ಪಿಸಲು ಯತ್ನಿಸಿದರಂತೆ.

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?