Infosys President Resigned: ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ

Mohit Joshi: ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಅವರು ಇಂದು ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯು ಬಿಎಸ್‌ಇಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಇವರ ರಾಜೀನಾಮೆ ಬಗ್ಗೆ ತಿಳಿಸಿದೆ.

Infosys President Resigned: ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ
ಮೋಹಿತ್ ಜೋಶಿ

Updated on: Mar 11, 2023 | 2:23 PM

ಇನ್ಫೋಸಿಸ್ (Infosys) ಅಧ್ಯಕ್ಷ ಮೋಹಿತ್ ಜೋಶಿ (Mohit Joshi) ಅವರು ಐಟಿ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇಂದು ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯು ಬಿಎಸ್‌ಇಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಇವರ ರಾಜೀನಾಮೆ ಬಗ್ಗೆ ತಿಳಿಸಿದೆ. ಡಿಜಿಟಲ್ ಸೇವೆಗಳಲ್ಲಿ ಮತ್ತು ಕನ್ಸಲ್ಟಿಂಗ್‌ನಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಇನ್ಫೋಸಿಸ್​​ನ ಅಧ್ಯಕ್ಷ ಮೋಹಿತ್ ಜೋಶಿ ಅವರ ಇಂದು ರಾಜೀನಾಮೆಯನ್ನು ಘೋಷಿಸಿದ್ದಾರೆ ಎಂದು ತಿಳಿಸಿದೆ. ಮಾರ್ಚ್ 11, 2023 ರಿಂದ ಅವರು ರಜೆಯಲ್ಲಿರುತ್ತಾರೆ ಮತ್ತು ಅವರು ಕಂಪನಿಯೊಂದಿಗೆ ಜೂನ್ 09, 2023ವರೆಗೆ ಇರುತ್ತಾರೆ ಎಂದು ಹೇಳಿದೆ.

ನಿರ್ದೇಶಕ ಮಂಡಳಿಯು ಮೋಹಿತ್ ಜೋಶಿ ಅವರು ಸಲ್ಲಿಸಿದ ಸೇವೆಗಳಿಗೆ ಮತ್ತು ಕಂಪನಿಗೆ ಅವರ ನೀಡಿದ ಕೊಡುಗೆಗಳಿಗಾಗಿ ಧನ್ಯವಾದವನ್ನು ಮತ್ತು ಅವರ ಅಪಾರ ಸೇವೆ ನಮಗೆ ಸ್ಪೂರ್ತಿ ಎಂದು ಇನ್ಫೋಸಿಸ್ ಹೇಳಿದೆ. ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಇದೀಗ ಟಿಕ್​​ ಮಹೀಂದ್ರಾದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಟಿಕ್​​ ಮಹೀಂದ್ರಾದ ವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸಿಪಿ ಗುರ್ನಾನಿ ಅವರು ಡಿಸೆಂಬರ್ 19 ನಿವೃತ್ತರಾಗಲಿದ್ದಾರೆ. ಅವರು ಸ್ಥಾನಕ್ಕೆ  ಮೋಹಿತ್ ಜೋಶಿ ಅವರು ನೇಮಕಗೊಳ್ಳಲಿದ್ದಾರೆ.

Published On - 11:24 am, Sat, 11 March 23

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us