Infosys: ಇನ್ಫೋಸಿಸ್ ಉದ್ಯೋಗಿಗಳಿಗೆ ಷೇರುಭಾಗ್ಯ; ಬೋನಸ್ ಜೊತೆಗೆ ಸಿಕ್ಕಿದೆ ಕಂಪನಿ ಷೇರು

|

Updated on: May 15, 2023 | 4:03 PM

Equity Shares For Infosys Employees: ವರದಿಗಳ ಪ್ರಕಾರ ಅರ್ಹ ಉದ್ಯೋಗಿಗಳಿಗೆ 5.11 ಲಕ್ಷಕ್ಕೂ ಹೆಚ್ಚು ಈಕ್ವಿಟಿ ಷೇರುಗಳನ್ನು ಇನ್ಫೋಸಿಸ್ ನೀಡಿರುವುದು ತಿಳಿದುಬಂದಿದೆ. ಎರಡು ಸ್ಕೀಮ್​ಗಳ ಮೂಲಕ ಈ ಈಕ್ವಿಟಿ ಷೇರುಗಳನ್ನು ಇನ್ಫೋಸಿಸ್ ಮೇ 12ರಂದು ನೀಡಿದೆ.

Infosys: ಇನ್ಫೋಸಿಸ್ ಉದ್ಯೋಗಿಗಳಿಗೆ ಷೇರುಭಾಗ್ಯ; ಬೋನಸ್ ಜೊತೆಗೆ ಸಿಕ್ಕಿದೆ ಕಂಪನಿ ಷೇರು
ಇನ್ಫೋಸಿಸ್
Follow us on

ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಕಂಪನಿಯಲ್ಲಿ ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಸಂಬಳ ಹೆಚ್ಚಳ, ಬೋನಸ್, ಇನ್ಸೆಂಟಿವ್ ಇತ್ಯಾದಿ ಕೊಡುಗೆಗಳನ್ನು ನೀಡಲಾಗುತ್ತದೆ. ಕೆಲ ಕಡೆ ಬೈಕು, ಕಾರು, ಚಿನ್ನ ಬೆಳ್ಳಿ ನಾಣ್ಯ ಇತ್ಯಾದಿ ವಿಶೇಷ ಕೊಡುಗೆ ನೀಡಲಾಗುತ್ತದೆ. ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ (Infosys Technologies) ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹ ಕೊಡಲು ಇನ್ನೂ ಒಂದು ಹೆಜ್ಜೆ ಮುಂದೆಹೋಗಿದೆ. ಚೆನ್ನಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು ಗುರುತಿಸಿ ಬೋನಸ್ ಜೊತೆಗೆ ಇಂತಿಷ್ಟು ಷೇರುಗಳನ್ನು ನೀಡಿದೆ. ವರದಿಗಳ ಪ್ರಕಾರ ಅರ್ಹ ಉದ್ಯೋಗಿಗಳಿಗೆ 5.11 ಲಕ್ಷಕ್ಕೂ ಹೆಚ್ಚು ಈಕ್ವಿಟಿ ಷೇರುಗಳನ್ನು (Equity Shares) ಇನ್ಫೋಸಿಸ್ ನೀಡಿರುವುದು ತಿಳಿದುಬಂದಿದೆ. ಎರಡು ಸ್ಕೀಮ್​ಗಳ ಮೂಲಕ ಈ ಈಕ್ವಿಟಿ ಷೇರುಗಳನ್ನು ಇನ್ಫೋಸಿಸ್ ಮೇ 12ರಂದು ನೀಡಿದೆ. ಹಾಗಂತ ಎಕ್ಸ್​ಚೇಂಜ್ ಫೈಲಿಂಗ್ ವೇಳೆ ಇನ್ಫೋಸಿಸ್ ತಿಳಿಸಿದೆ.

ಅರ್ಹ ಉದ್ಯೋಗಿಗಳಿಗೆ ನೀಡಲಾದ 5.11 ಲಕ್ಷ ಈಕ್ವಿಟಿ ಷೇರುಗಳ ಪೈಕಿ 2015ರ ಸ್ಟಾಕ್ ಇನ್ಸೆಂಟಿವ್ ಕಾಂಪೆನ್ಸೇಶನ್ ಪ್ಲಾನ್ ಅಡಿಯಲ್ಲಿ 1.04 ಲಕ್ಷ ಈಕ್ವಿಟಿ ಷೇರುಗಳನ್ನು ಹಂಚಲಾಗಿದೆ. ಇನ್ನು, 2019ರ ಇನ್ಫೋಸಿಸ್ ಎಕ್ಸ್​ಪ್ಯಾಂಡೆಡ್ ಸ್ಟಾಕ್ ಓನರ್​ಶಿಪ್ ಪ್ರೋಗ್ರಾಮ್ ಅಡಿಯಲ್ಲಿ 4.07 ಲಕ್ಷ ಈಕ್ವಿಟಿ ಷೇರುಗಳನ್ನು ಉದ್ಯೋಗಿಗಳಿಗೆ ನೀಡಲಾಗಿದೆ.

ಇದನ್ನೂ ಓದಿSalary: ಹುಷಾರಿಲ್ಲ ಎಂದು ರಜೆ ತಗೊಂಡು 15 ವರ್ಷ ಆಯ್ತು; 55 ಲಕ್ಷ ರೂ ಸಂಬಳ ಸಾಲದು ಎಂದು ಕಂಪನಿ ಮೇಲೆಯೇ ಕೇಸು ಹಾಕಿದ ಐಬಿಎಂ ಉದ್ಯೋಗಿ

ಈಗ ಉದ್ಯೋಗಿಗಳಿಗೆ 5.11 ಲಕ್ಷ ಈಕ್ವಿಟಿ ಷೇರುಗಳನ್ನು ಹಂಚುವುದರೊಂದಿಗೆ ಅದರ ಸಬ್​ಸ್ಕ್ರೈಬ್ಡ್ ಷೇರು ಸಂಪತ್ತು 2074.94ಕೋಟಿ ರೂನಷ್ಟಿದೆ. ಇದನ್ನು ಪ್ರತೀ ಈಕ್ವಿಟಿ ಷೇರಿಗೆ 5 ರೂನಂತೆ 415 ಕೋಟಿ ಈಕ್ವಿಟಿ ಷೇರುಗಳಾಗಿ ವಿಭಜಿಸಲಾಗಿದೆ. ಈಗ ಎಷ್ಟು ಮಂದಿ ಉದ್ಯೋಗಿಗಳಿಗೆ ಈಕ್ವಿಟಿ ಷೇರುಗಳನ್ನು ಎಷ್ಟೆಷ್ಟು ಹಂಚಲಾಗಿದೆ ಎಂಬ ಮಾಹಿತಿ ಇಲ್ಲ. ಇನ್ಫೋಸಿಸ್​ನಲ್ಲಿ ಸುಮಾರು ಮೂರೂವರೆ ಲಕ್ಷ ಉದ್ಯೋಗಿಗಳಿದ್ದಾರೆ.

ಇದನ್ನೂ ಓದಿFoxconn: ಕೊಂಗರಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಫಿಕ್ಸ್; ತೆಲಂಗಾಣ ಸ್ಪೀಡ್​ಗೆ ಬೆರಗಾದ ಛೇರ್ಮನ್ ಲಿಯು; ಮೊದಲ ಹಂತದಲ್ಲಿ 4,100 ಕೋಟಿ ರೂ ಹೋಡಿಕೆ; 25,000 ಉದ್ಯೋಗಸೃಷ್ಟಿ

ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್​ನ ಷೇರುಸಂಪತ್ತು ಒಟ್ಟು ಸುಮಾರು 5.16 ಲಕ್ಷ ಕೋಟಿಯಷ್ಟಿದೆ. ಬಿಎಸ್​ಇ ಮಾರುಕಟ್ಟೆಯಲ್ಲಿ ಅದರ ಷೇರು ಬೆಲೆ ಸದ್ಯ 1,246 ರೂ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ